ಬೆಂಗಳೂರಿನಲ್ಲಿ ಒಂದೇ ದಿನ ಇಷ್ಟು ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ!

ಬೆಂಗಳೂರಿನಲ್ಲಿ ಈ ಬಾರಿ ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡಲಾಗಿದೆ. ಅಲ್ಲದೇ ಲಕ್ಷಾಂತರ ಸಂಖ್ಯೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಒಂದೇ ದಿನದಲ್ಲಿ ಲಕ್ಷಾಂತರ ಗಣೇಶ ಮೂರ್ತಿಗಳನ್ನು ನಗರದ ವಿವಿಧ ಭಾಗದಲ್ಲಿ ವಿಸರ್ಜನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆಂದೇ ಬಿಬಿಎಂಪಿ ಈ ಬಾರಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಕೆರೆ, ಕಲ್ಯಾಣಿ ಹಾಗೂ ಮೊಬೈಲ್‌ ಟ್ಯಾಂಕರ್‌ಗಳ ಮೂಲಕ ವಿಶೇಷ ಸಿದ್ಧತೆಯನ್ನು ಸಹ ಮಾಡಿಕೊಳ್ಳಲಾಗಿದೆ.

ಶನಿವಾರ ಒಂದೇ ದಿನ ಸೆಪ್ಟೆಂಬರ್‌ 7ರಂದು ಸಂಚಾರಿ,ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ ಮತ್ತು ತಾತ್ಕಾಲಿಕ ಕಲ್ಯಾಣಿಗಳಲ್ಲಿ ಬರೋಬ್ಬರಿ 2,17006 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆ ಈ ಬಾರಿ ಅದ್ಧೂರಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗಿದೆ.

Dissolution of lakhs of Ganesha idols in one day in Bengaluru

ಯಾವ ಭಾಗದಲ್ಲಿ ಹೆಚ್ಚು ಗಣೇಶ ಮೂರ್ತಿ

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಅತೀ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರೋಬ್ಬರಿ 84149 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು. ಈ ಗಣೇಶ ಮೂರ್ತಿಗಳನ್ನು ಸೆಪ್ಟೆಂಬರ್‌ 7ರಂದು ನಗರದ ವಿವಿಧ ಭಾಗದಲ್ಲಿ ವಿಸರ್ಜನೆ ಮಾಡಲಾಗಿದೆ. ಇನ್ನು ಪಶ್ಚಿಮ ವಲಯ ವ್ಯಾಪ್ತಿಯಲ್ಲಿ 52429 ಹಾಗೂ ಪೂರ್ವ ವಲಯ ವ್ಯಾಪ್ತಿಯಲ್ಲಿ 40791 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ವಿಸರ್ಜನೆ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಇನ್ನು ಬೆಂಗಳೂರಿನ ಯಡಿಯೂರು ಕರೆಯ ವಿಸರ್ಜನಾ ಕೊಳದಲ್ಲಿ ಕಳೆದ ವರ್ಷ 11 ದಿನಗಳ ಅವಧಿಯಲ್ಲಿ ಅಂದಾಜು 1,75,000 ಗಣೇಶ ಮೂರ್ತಿಗಳ ವಿಸರ್ಜನೆ ನಡೆದಿತ್ತು. ಇದೀಗ ಸೆಪ್ಟೆಂಬರ್‌ 7 ರಿಂದ ಸೆಪ್ಟೆಂಬರ್ 17ರ ವರೆಗೆ ಅಂದರೆ, 11 ದಿನಗಳ ಅವಧಿಯವರೆಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. 10ನೇ ಸೆಪ್ಟೆಂಬರ್ ಯಡಿಯೂರು ಕೆರೆ ಭಾಗದಲ್ಲಿ ಸ್ವಚ್ಛತೆ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಿಲ್ಲ. ಸೆಪ್ಟೆಂಬರ್‌ 11 ರಿಂದ ಸೆಪ್ಟೆಂಬರ್‌ 17ರವರೆಗೆ ಮಾತ್ರ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿದ್ಧತೆ ಮಾಡಿಕೊಂಡಿದೆ.

Dissolution of lakhs of Ganesha idols in one day in Bengaluru

ಇನ್ನು ಯಡಿಯೂರು ಕೆರೆ ವಿಸರ್ಜನಾ ಕೊಳದಲ್ಲಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ) ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶ ಇಲ್ಲ.

ಯಾವ ವಲಯದಲ್ಲಿ ಎಷ್ಟು ಗಣೇಶ ಮೂರ್ತಿ ಪ್ರತಿಷ್ಠಾಪನೆ / ವಿಸರ್ಜನೆ

ವಲಯ ಗಣೇಶ ಮೂರ್ತಿಗಳ ಸಂಖ್ಯೆ

ದಕ್ಷಿಣ ವಲಯ: 84149

ಪಶ್ಚಿಮ ವಲಯ: 52429

ಪೂರ್ವ ವಲಯ: 40791
ಯಲಹಂಕ ವಲಯ: 14094

ಆರ್.ಆರ್.ನಗರ ವಲಯ: 12680

ಬೊಮ್ಮನಹಳ್ಳಿ ವಲಯ: 3915

ದಾಸರಹಳ್ಳಿ ವಲಯ: 1719

ಮಹದೇವಪುರ ವಲಯ: 7229

ಒಟ್ಟು: 217006

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+