ಬೆಂಗಳೂರು; ರಾಷ್ಟ್ರಗೀತೆಗೆ ಅಗೌರವ, ನಾಲ್ವರ ವಿರುದ್ಧ ಎಫ್‌ಐಆರ್
ಬೆಂಗಳೂರು, ನವೆಂಬರ್ 08 : ರಾಷ್ಟ್ರಗೀತೆಗೆ ಅಗೌರವ ತೋರಿಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ರಾಷ್ಟ್ರಗೀತೆ ಬರುತ್ತಿದ್ದ ಸಮಯದಲ್ಲಿ ನಾಲ್ವರು ಕುಳಿತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸುಬ್ರಮಣ್ಯ ನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ವಿರುದ್ಧ ಎಫ್ ದಾಖಲು ಮಾಡಿದ್ದಾರೆ. ರಾಷ್ಟ್ರೀಯ ಗೌರವಕ್ಕೆ ಅಗೌರವ ಸೂಚಿಸುವುದನ್ನು ತಡೆಯುವ ಕಾಯ್ದೆ 1971ರ ಅನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ.

ಅಕ್ಟೋಬರ್ 23ರಂದು ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಟ ಅರುಣ್ ಗೌಡ ಎಂಬುವವರು ತಮ್ಮ ಮೊಬೈಲ್‌ನಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿಸಿದ ದೃಶ್ಯವನ್ನು ಸರೆ ಹಿಡಿದಿದ್ದರು. ಈಗ ನಾಲ್ವರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಘಟನೆ ವಿವರ : ಒರಾಯಿನ್ ಮಾಲ್‌ನಲ್ಲಿ ಅಕ್ಟೋಬರ್ 23ರಂದು ಅಸುರನ್ ಎಂಬ ತಮಿಳು ಚಿತ್ರ ಪ್ರದರ್ಶನದ ವೇಳೆ ನಡೆದ ಘಟನೆ ಇದಾಗಿದೆ. ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಕಲಾಯಿತು. ಆಗ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಎದ್ದುನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಲಿಲ್ಲ.
ಅರುಣ್ ಗೌಡ ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದರು. ರಾಷ್ಟ್ರ ಗೌರವಕ್ಕಾಗಿ 52 ಸೆಕೆಂಡ್ ಮೀಸಲಿಡದವರು ಪಾಕಿಸ್ತಾನಿ ಉಗ್ರರು ಎಂದು ನಿಂದಿಸಲಾಗಿತ್ತು.
ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅರುಣ್ ಗೌಡ ಹಾಕಿದ್ದರು. ಇದನ್ನು ಗಮನಿಸಿದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ.












Click it and Unblock the Notifications