ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಮತ್ತೊಮ್ಮೆ ಸಿಬಿಐ ವಿಚಾರಣೆ ಎದುರಿಸಿದ ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಜನವರಿ 12: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೊಮ್ಮೆ ಸಿಬಿಐ ವಿಚಾರಣೆ ಎದುರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್​ 25 ರಂದೇ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಡಿ.ಕೆ. ಶಿವಕುಮಾರ್​ ಅವರಿಗೆ ಸಮನ್ಸ್​ ನೀಡಿದ್ದರು. ಅದರಂತೆ 2020 ನವೆಂಬರ್ 25 ರಂದು ಡಿ.ಕೆ. ಶಿವಕುಮಾರ್ ವಿಚಾರಣೆ ಎದುರಿಸಿದ್ದರು.

ಗುರು ಡಿಕೆಶಿ ಮಾತಿಗೆ ಗಪ್ ಚುಪ್ ಎನ್ನದೇ ಕಣದಿಂದ ಹಿಂದೆ ಸರಿದ ಯುವ ಘಟಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗುರು ಡಿಕೆಶಿ ಮಾತಿಗೆ ಗಪ್ ಚುಪ್ ಎನ್ನದೇ ಕಣದಿಂದ ಹಿಂದೆ ಸರಿದ ಯುವ ಘಟಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

ಇದೀಗ ಎರಡನೇ ಬಾರಿ ಇಂದು ಮತ್ತೆ ಅವರು ಸಿಬಿಐ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ವಿಚಾರಣೆಗೆ ಹೆಚ್ಚುವರಿ ಆಸ್ತಿ ಗಳಿಕೆ ಕುರಿತು ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ.

Disproportionate Assets Case:Dk Shivakumar Faces Another Round Of CBI Enquiry

ಆದರೆ, ವಿಚಾರಣೆಯಲ್ಲಿ ಡಿಕೆಶಿ ಎದುರು ಸಿಬಿಐ ಅಧಿಕಾರಿಗಳು ನಿಖರವಾಗಿ ಯಾವ ಪ್ರಶ್ನೆಗಳನ್ನು ಮುಂದಿಟ್ಟರು? ವಿಚಾರಣೆ ಯಾವ ಹಂತದಲ್ಲಿದೆ? ಎಂಬಿತ್ಯಾದಿ ಮಾಹಿತಿಗಳು ಲಭ್ಯವಾಗಬೇಕಿದೆ?

ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್​ ಅವರ ಮನೆ ಮತ್ತು ಕಚೇರಿಗಳ ಮೇಲೆ ಕಳೆದ ವರ್ಷವೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿ ಜೈಲಿಗೂ ಕಳಿಸಿದ್ದರು.

ಇದಾದ ನಂತರ ಜಾಮೀನಿನ ಮೇಲೆ ಡಿ.ಕೆ. ಶಿವಕುಮಾರ್​ ಹೊರ ಬಂದಿದ್ದರು. ಈ ನಡುವೆ ಮತ್ತೆ ಅಕ್ಟೋಬರ್ 5 ರಂದು ಡಿಕೆಶಿಗೆ ಸೇರಿದ 14 ಕಡೆ ಸಿಬಿಐ ಅಧಿಕಾರಿಗಳಿಂದ ದಾಳಿ ನಡೆದಿತ್ತು.

ಡಿ.ಕೆ. ಶಿವಕುಮಾರ್​ ವಿರುದ್ಧ ತೀವ್ರ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು.

ಇದೇ ಕಾರಣಕ್ಕೆ ಸಿಬಿಐ ಅಧಿಕಾರಿಗಳು ಕಳೆ ಅಕ್ಟೋಬರ್​ನಲ್ಲಿ ಡಿಕೆ ಶಿವಕುಮಾರ್​ ಮತ್ತು ಅವರ ಸಂಬಂಧಿಗಳ ಮನೆ ಮತ್ತು ಕಚೇರಿಯ ಮೇಲೆ ದಾಳಿ ಸಂಘಟಿಸಿದ್ದರು.

Recommended Video

Yediyurappaಗೆ Vishwanth class ತಗೊಂಡ ಪರಿ ಇದು!! | Oneindia Kannada

ಈ ಸಂದರ್ಭದಲ್ಲಿ 74.96 ಕೋಟಿ ಹೆಚ್ಚುವರಿ ಆಸ್ತಿ ಗಳಿಕೆ ಮಾಡಿರುವುದು ಪತ್ತೆಯಾಗಿತ್ತು. ಅಲ್ಲದೆ, ಅಧಿಕಾರಿಗಳು ಈ ಸಂಬಂಧ ಕೆಲ ಪ್ರಮುಖ ಆಧಾರಗಳನ್ನು ವಶಪಡಿಸಿಕೊಂಡಿದ್ದರು ಎನ್ನಲಾಗಿತ್ತು.

English summary
Disproportionate Assets Case, KPCC president DK Shivakumar Faced Second round of CBI Enquiry today(January 12)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X