ವಾಹನಗಳ ನಂಬರ್ ಪ್ಲೇಟ್ ಬಹಿರಂಗ ಹರಾಜು ಹಾಕಲು ಸರ್ಕಾರ ಸಿದ್ಧ!
ವಾಹನಗಳ ನಂಬರ್ ಪ್ಲೇಟ್ ವಿಚಾರ ಕಳೆದ ಕೆಲವು ತಿಂಗಳಿಂದ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲೂ ಈ ವಿಚಾರವಾಗಿ ವಾಹನಗಳ ಮಾಲೀಕರು ಸಿಕ್ಕಾಪಟ್ಟೆ ಟೆನ್ಷನ್ ತೆಗೆದುಕೊಂಡಿದ್ದಾರೆ. ಇದೇ ಸಮಯದಲ್ಲಿ ಕರ್ನಾಟಕ ಸರ್ಕಾರದ ಕಡೆಯಿಂದ ವಾಹನಗಳ ನಂಬರ್ ಪ್ಲೇಟ್ ವಿಚಾರವಾಗಿ ಮಹತ್ವದ ಸುದ್ದಿ ಸಿಕ್ಕಿದೆ.
ಅಷ್ಟಕ್ಕೂ, ಸಾರಿಗೆ ಇಲಾಖೆ ವತಿಯಿಂದ ಮೋಟಾರು ವಾಹನಗಳ ಸಾರಿಗೆ ಆಯುಕ್ತರ ಕಚೇರಿ, 1ನೇ ಮಹಡಿ, ಟಿಟಿಎಂಸಿ ಕಟ್ಟಡ, ಕೆ.ಎಚ್. ರಸ್ತೆ, ಶಾಂತಿನಗರ, ಬೆಂಗಳೂರು ಇಲ್ಲಿ KA -50 MD ಮುಂಗಡ ಶ್ರೇಣಿಯ ಪ್ರಾರಂಭಿಸಿ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನ ಏಪ್ರಿಲ್ 18 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಯಲಹಂಕ ಬೆಂಗಳೂರು ಇಲ್ಲಿ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ. ಹಾಗಾದರೆ, ಯಾವ ಯಾವ ನಂಬರ್ ಪ್ಲೇಟ್ ಹರಾಜು ಹಾಕಲಾಗುತ್ತಿದೆ? ಮುಂದೆ ಓದಿ.

ಹರಾಜು ಹಾಕುತ್ತಿರುವ ನಂಬರ್ ಪ್ಲೇಟ್
ಇದೀಗ ನೋಂದಾಣಿ ಸಂಖ್ಯೆ 1, 123, 1234, 10, 11, 111, 1111, 100, 1000, 1001, 22, 27, 222, 234, 2222, 2727, 33, 36, 63, 333, 3333, 3636, 45, 444, 4444, 4455, 4545, 5, 55, 555, 5454, 5555, 6, 63, 666, 6666, 6055, 6363, 7, 72, 77, 777, 786, 7272, 7777, 8, 88, 888, 8055, 8118, 8181, 8888, 9, 90, 99, 900, 909, 999, 9000, 9009, 9090 ಮತ್ತು 9999 ಹಾಗೂ ಉಳಿದ ಸಂಖ್ಯೆಗಳಲ್ಲಿ ಯಾವುದೇ ಇಚ್ಚಿತ ನೋಂದಣಿ ಸಂಖ್ಯೆ ಹಂಚಿಕೆ ಮಾಡಲು ಅವಕಾಶ ಇರುತ್ತದೆ ಎಂದು ಇದೀಗ ಮಾಹಿತಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ!
ಹಾಗೆಯೇ, ಲಘು ಮೋಟಾರು ವಾಹನ (ಸಾರಿಗೇತರ ವರ್ಗದ ಕಾರು, ಜೀಪು, ಇತ್ಯಾದಿ ಸ್ವಂತ ಉಪಯೋಗಕ್ಕೆ ಬಳಸುವ ವಾಹನ) ರಾಜ್ಯದ ಯಾವುದೆ ಪ್ರಾಧಿಕಾರದ ಕಚೇರಿಯಲ್ಲಿ ಹೊಸದಾಗಿ ಪ್ರಾರಂಭಿಸುವ ಮುಂಗಡ ಶ್ರೇಣಿಗಳಲ್ಲಿ ಅರ್ಜಿದಾರರು ಕೋರುವ ಆಯ್ಕೆ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜು ಕರೆಯುವ ಮೂಲಕ ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಇನ್ನು ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ರವರ ಕಚೇರಿ 'ಎ' ಬ್ಲಾಕ್, 1 ನೇ ಮಹಡಿ, ಟಿಟಿಎಂಸಿ ಕಟ್ಟಡ, ಬಿಎಂಟಿಸಿ ಸಂಕೀರ್ಣ, ಶಾಂತಿನಗರ, ಬೆಂಗಳೂರು ಇಲ್ಲಿ ಸಂಪರ್ಕಿಸಬಹುದು ಎಂದು ಬೆಂಗಳೂರು ಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂಬರ್ ಪ್ಲೇಟ್ ವಿಚಾರದಲ್ಲಿ ಅಲರ್ಟ್ ಆಗಿರಿ!
ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರವನ್ನೇ ತಮ್ಮ ಬಂಡವಾಳ ಮಾಡಿಕೊಳ್ತಿರುವ ವಂಚಕರು ಆನ್‌ಲೈನ್‌ನಲ್ಲಿ ವಂಚಿಸುತ್ತಿರುವ ಆರೋಪಗಳು ಕೇಳಿಬಂದಿದ್ದವು. 'ಎಚ್‌ಎಸ್‌ಆರ್‌ಪಿ' ನಂಬರ್ ಪ್ಲೇಟ್ ಅವಳಡಿಕೆ ವಿಚಾರದಲ್ಲಿ ಈಗಾಗಲೇ ಸರ್ಕಾರ ಕೂಡ ಅಲರ್ಟ್ ಆಗಿ ಖಡಕ್ ಸಂದೇಶ ರವಾನಿಸಿದೆ. ಸರ್ಕಾರ ಕ್ರಮ ಕೈಗೊಂಡ ನಂತರ ವಂಚಕರು ಬಾಲ ಮುದುಡಿ, ಸುಮ್ಮನಾಗಿದ್ದಾರೆ. ಹೀಗಿದ್ದರೂ ಇನ್ನೇನು ಕೆಲವೇ ವಾರದಲ್ಲಿ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಗಡುವು ಮುಗಿಯಲಿದ್ದು, ಜನರು ಟೆನ್ಷನ್‌ನಲ್ಲಿ ಇರೋದು ಗ್ಯಾರಂಟಿ. ಇಂತಹ ಸಮಯದಲ್ಲಿ ವಂಚಕರು ಮತ್ತೆ ಅಲರ್ಟ್ ಆಗುವ ಸಾಧ್ಯತೆ ದಟ್ಟವಾಗಿದ್ದು, ನಿಮ್ಮ ಹುಷಾರಲ್ಲಿ ನೀವು ಇರಿ. ಆನ್‌ಲೈನ್ ವಂಚಕರಿಂದ ದೂರ ಇರಿ.












Click it and Unblock the Notifications