ಪರಪ್ಪನ ಅಗ್ರಹಾರದಲ್ಲಿ ಕಾಟೇರ ನಟನ "ದರ್ಶನ" ಪಡೆದು ಮದುವೆ ಆಮಂತ್ರಣ ನೀಡಿದ ನಿರ್ದೇಶಕ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವರ ಜೈಲಿನ ದಿನಗಳು ದಿನ ಕಳೆದಂತೆ ಮುಂದೆ ಹೋಗುತ್ತಲೇ ಇವೆ. ಆದರೆ ಪರಿಹಾರ ಎಂಬುದು ಮರೀಚಿಕೆ ಆದಂತೆ ಕಾಣುತ್ತಿದೆ. ಕೋರ್ಟ್ ಇವರ ನ್ಯಾಯಂಗ ಬಂಧನದ ಅವಧಿಯನ್ನು ಮತ್ತೆ ಮುಂದೂಡಿದೆ. ಇದರಿಂದ ನಟನಿಗೆ ಹಿನ್ನಡೆ ಆಗಿದೆ.
ದರ್ಶನ ಜೈಲು ಸೇರಿದ್ದಾಗಿನಿಂದಲೂ ಅವರನ್ನು ಕಾಣಲು ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಕುಟುಂಬಸ್ಥರ ದಂಡೇ ಬರುತ್ತಿದೆ. ಈಗ ಈ ಲೀಸ್ಟ್‌ಗೆ ತರುಣ್ ಸುಧೀರ್ ಲೇಟೆಸ್ಟ್ ಆಗಿ ಎಂಟ್ರಿ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದು ತರುಣ್ ಸುಧೀರ್ ರಾಜರಾಜೇಶ್ವರಿ ನಗರದ ದರ್ಶನ್ ಅವರ ಮನೆಗೆ ತೆರಳಿ ತಮ್ಮ ಮದುವೆ ಆಮಂತ್ರಣವನ್ನು ನೀಡಬೇಕಿತ್ತು. ಆದರೆ ಈಗ ರೂಟ್ ಚೇಂಜ್ ಆಗಿದೆ.

ಮದುವೆಯ ಮಮತೆಯ ಕರೆಯೋಲೆ
ಡಿ ಬಾಸ್ ಖ್ಯಾತಿಯ ನಟ ದರ್ಶನ್ ಅವರಿಗೆ ತಮ್ಮ ಮದುವೆ ಆಮಂತ್ರಣವನ್ನು ನೀಡಲು ನಿರ್ದೇಶಕ ತರುಣ್ ಸುಧೀರ್ ಪರಪ್ಪನ್ ಅಗ್ರಹಾರ ಜೈಲಿನತ್ತ ಮುಖ ಮಾಡಿದ್ದಾರೆ. ಮುಂದಿನ ತಿಂಗಳು ಆಗಸ್ಟ್ 10, 11 ರಂದು ನಡೆಯಲಿರುವ ಮದುವೆ ಸಮಾರಂಭದ ಮೊದಲ ಆಮಂತ್ರಣವನ್ನು ತರುಣ್ ಸುಧೀರ್, ದರ್ಶನ್ ಅವರಿಗೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಇಂದು ಬೆಳಗ್ಗೆ ಭೇಟಿ ಆದ ತರುಣ್ ಸುಧೀರ್ ಮದುವೆ ಮಮತೆಯ ಕರೆಯೋಲೆಯನ್ನು ನೀಡಿ, ಆಶಿರ್ವಾದವನ್ನು ಪಡೆದಿದ್ದಾರೆ. ತರುಣ್ ಸುಧೀರ್ ನಿಜಕ್ಕೂ ಒಲ್ಲದ ಮನಸ್ಸಿನಿಂದ ಹಸಿ ಮಣೆಯನ್ನು ಈ ಸಮಯದಲ್ಲಿ ಏರುತ್ತಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಗಾಢ್ ಫಾದರ್ ಅವರು ಜೈಲಿನಲ್ಲಿರುವಾಗ ಮದುವೆ ಬೇಡವೇ ಬೇಡ ಎಂದು ತರುಣ್ ಹೇಳಿದ್ದರಂತೆ.

ನಟಿ ಸೋನಾಲ್ ಮಂಥೆರೊ ಹಾಗೂ ನಿರ್ದೇಶಕ ತರುಣ್ ಸುಧೀರ್ ಹಸಿ ಮಣೆ ಏರಲಿದ್ದಾರೆ ಎಂಬ ಸುದ್ದಿ ಬಹುದಿನಗಳಿಂದ ಓಡಾಡುತ್ತಿವೆ. ಈ ಮುಂಚೆ ತರುಣ್ ಸುಧೀರ್ ಅವರ ತಾಯಿ ಮೂರ್ಹತ ಇನ್ನು ಫಿಕ್ಸ್ ಆಗಿಲ್ಲ ಎಂದು ತಿಳಿಸಿದ್ದರು.
ಬಾಸ್ ಗ್ರೀನ್ ಸಿಗ್ನಲ್
ರಾಬರ್ಟ್ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಆಗಲೇ ಇಬ್ಬರಲ್ಲೂ ಪ್ರೀತಿ ಚಿಗುರಿತ್ತು ಎಂದು ಹೇಳಲಾಗುತ್ತದೆ. ನಟ ದರ್ಶನ್ ಅವರೇ ತರುಣ್ ಹಾಗೂ ಸೋನಲ್ ಅವರ ಪ್ರೀತಿಯ ಬಗ್ಗೆ ಕಾಲು ಎಳೆದಿದ್ದರು. ಅಲ್ಲದೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಇಶ್ಚಿಸಿದಾಗ ಗ್ರೀನ್ ಸಿಗ್ನಲ್ ನೀಡಿದ್ದರು. ಬಾಸ್ ಜೈಲಿನಲ್ಲಿರುವಾಗ ಮದುವೆ ಬೇಡ ಎಂದು ತರುಣ್ ಹಠ ಹಿಡಿದಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ತರುಣ್ ಅವರ ಬೇಡಿಕೆಗೆ ಹಿರಿಯರು ಹಾಗೂ ದರ್ಶನ್ ಒಪ್ಪಿಗೆ ನೀಡಿದ ಮೇಲೆ ಹಸಿ ಮಣೆ ಏರಲು ನಿರ್ಧರಿಸಿದ್ದಾರೆ. ಹೀಗಾಗಿ ತಮ್ಮ ಮದುವೆ ಮೊದಲ ಆಮಂತ್ರಣವನ್ನು ತರುಣ್ ಸುಧಿರ್ ಅವರು ದರ್ಶನ್ ಅವರಿಗೆ ನೀಡಿ ಆಮಂತ್ರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಟ್ ಡೈರೆಕ್ಟರ್
ಚೌಕಾ ಸಿನಿಮಾದ ಮೂಲಕ ನಿರ್ದೇಕರಾಗಿ ಗುರುತಿಸಿಕೊಂಡಿರುವ ತರುಣ್ ಸುಧೀರ್, ಹಿಟ್ ಸಿನಿಮಾಗಳನ್ನು ಮಾಡುವ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗ ಸುಧೀರ್ ಸದ್ದಿಲ್ಲದೆ ನಾಲ್ಕನೇ ಚಿತ್ರವನ್ನು ಮಾಡಲು ತಯಾರಿ ನಡೆಸಿದ್ದಾರೆ.












Click it and Unblock the Notifications