ದರ್ಶನ್ ಹಿಂಬಾಲಕರ ವಿರುದ್ಧ ಪೊಲೀಸ್ ಆಯುಕ್ತರಿಗೆ ಇಂದ್ರಜಿತ್ ದೂರು
ಬೆಂಗಳೂರು, ಜು. 19: ನಟ ದರ್ಶನ್ ಹಿಂಬಾಲಕರು ಅಶ್ಲೀಲ ಸಂದೇಶ ರವಾನಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರು ನೀಡುವ ಮೊದಲು ನಟ ದರ್ಶನ್ ವಿರುದ್ಧ ಕಿಡಿಕಾರಿದ ಇಂದ್ರಜಿತ್ ನಟ ದರ್ಶನ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ನಟ ದರ್ಶನ್ ಹಿಂಬಾಲಕರಿಂದ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಮೊಬೈಲ್ ನಂಬರ್ ಗೆ ಒಂದು ಕ್ಷಣ ಬಿಡುವು ಇಲ್ಲದೇ ಅಶ್ಲೀಲ ಸಂದೇಶ ರವಾನಿಸುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾನು ಹೆದರಲ್ಲ. ಕೊಚ್ಚೆ ಅಂತ ಗೊತ್ತಿದ್ದು, ಮತ್ತೆ ಕಲ್ಲುಹಾಕಲು ಹೋಗಲ್ಲ ಇದು ನನ್ನ ಸ್ವಭಾವ. ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.
ಸುಮಾರು ಮೂವತ್ತು ಮೊಬೈಲ್ ನಂಬರ್‌ಗೆ ನಿರಂತರ ಕರೆ ಬರುತ್ತಿವೆ. ಪ್ರತಿ ಮೂವತ್ತು ಸೆಕೆಂಡ್‌ಗೆ ಒಂದು ಕಾಲ್ ಬರುತ್ತಿದೆ. ಇದರ ಜತೆಗೆ ಅಶ್ಲೀಲ ಪದಗಳಿಂದ ನಿಂದಿಸಿ ಸಂದೇಶ ಕಳುಹಿಸುತ್ತಿದ್ದಾರೆ. ಈ ಕುರಿತು ಸೈಬರ್ ಪೊಲೀಸರಿಗೆ ದೂರು ನೀಡುತ್ತೇನೆ. ದರ್ಶನ್ ಹಿಂಬಾಲಕರೇ ಈ ಕೃತ್ಯ ಎಸಗುತ್ತಿದ್ದಾರೆ. ಆದರೆ ಯಾರ ಭಯಕ್ಕೂ ನಾನು ಹೆದರುವನು ಅಲ್ಲ ಎಂದು ಇಂದ್ರಜಿತ್ ಲಕೇಶ್ ಹೇಳಿದರು.

ನನ್ನ ಮತ್ತು ನನ್ನ ಅಪ್ಪನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನನ್ನಪ್ಪ ಲೇಖನಿಯನ್ನು ಹಿಡಿದುಕೊಂಡೇ ಇಪ್ಪತ್ತು ವರ್ಷ ಪತ್ರಿಕೋದ್ಯಮದಲ್ಲಿದ್ದವರು. ನಮ್ಮ ತಂದೆ ಹೇಗೆ ಅಂತ ಇಡೀ ಸಮುದಾಯಕ್ಕೆ ಗೊತ್ತಿದೆ. ಅದೇ ರೀತಿ ನಾನು ಕೂಡ ಪತ್ರಕರ್ತನಾಗಿ ಗುರುತಿಸಿಕೊಂಡಿದ್ದೇನೆ. ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಆದರೆ ಸಾಮಾಜಿಕ ಕಳಕಳಿಯಿಂದ ಈ ಹೋರಾಟವನ್ನುಕೈ ಬಿಡಲ್ಲ. ಮೈಸೂರಿನಲ್ಲಿ ನಟ ದರ್ಶನ್ ಮಾಡಿದ್ದಾರೆ ಎನ್ನಲಾದ ಹಲ್ಲೆ ಪ್ರಕರಣ ಸಂಬಂಧ ಸಾಕ್ಷಧಾರಗಳನ್ನು ನಾನು ಪೊಲೀಸ್ ಅಧಿಕಾರಿಗೆ ತಿಳಿಸುತ್ತೇನೆ ಎಂದು ಹೇಳಿದರು.
Recommended Video
ಈ ಬೆಳವಣಿಗೆ ನಡುವೆ ನಿರ್ದೇಶಕ ಇಂದ್ರಜಿತ್ ಲಂಕೇಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು. ಅನಾಮಿಕ ಕರೆ ಮತ್ತು ಬೆದರಿಕೆ ಹಾಕಿವರ ಬಗ್ಗೆ ವಿವರಗಳನ್ನು ನೀಡಿದ್ದಾರೆ.











Click it and Unblock the Notifications