ಆಟೋ, ಟ್ಯಾಕ್ಸಿ ಚಾಲಕರ ಜೊತೆ ಡಿಸಿಎಂ ಭೇಟಿ ಮಾಡಿದ ದಿನೇಶ್ ಗುಂಡೂರಾವ್

ಬೆಂಗಳೂರು, ಮೇ 21: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂಪಾಯಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಈ ನೆರವಿಗಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದ್ದ ಸರ್ಕಾರ, ಅದಕ್ಕೆ ಒಂದಿಷ್ಟ ನಿಯಮಗಳನ್ನು ರೂಪಿಸಿತ್ತು.

Recommended Video

      ಆಟೋ, ಕ್ಯಾಬ್ ಚಾಲಕರಿಗೆ 5ಸಾವಿರ ಹಣ , ಆದರೆ ಇದರ ಹಿಂದಿನ ಅಸಲಿ ಸತ್ಯ ಏನು? | Oneindia Kannada

      ಆದರೆ, ಸರ್ಕಾರ ಸೂಚಿಸಿರುವಂತೆ ನಿಬಂಧನೆಗಳಲ್ಲಿ ಗೊಂದಲ ಇದೆ. ಹಾಗಾಗಿ, ಆಟೋ ಚಾಲಕರಿಗೆ ಸರ್ಕಾರ ಘೋಷಿಸಿರುವ ನೆರವು ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು.

      ಈ ಹಿನ್ನೆಲೆ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಆಟೋ, ಟ್ಯಾಕ್ಸಿ ಚಾಲಕರ ನಿಯೋಗ, ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿದೆ. 'ನೆರವಿನ ವಿಚಾರದಲ್ಲಿ ಚಾಲಕರಿಗೆ ಸಮಸ್ಯೆಯಾಗಿದೆ, ಯಾರಿಗ ಹಣ ಸಿಗುತ್ತಿಲ್ಲ. ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಿಕೊ'ಡಿ ಎಂದು ಮನವಿ ಮಾಡಿದರು.

      Dinesh gundurao and Auto-taxi drivers met DCM lakshman savadi they requested to resolve the issue of compensation

      ಸಾರಿಗೆ ಸಚಿವರು ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್ ''ಸರ್ಕಾರ ಚಾಲಕರಿಗೆ ಕೋವಿಡ್ ನೆರವು ಘೋಷಿಸಿದೆ. ಆದರೆ ಈ ಪರಿಹಾರದ ಹಣ ಚಾಲಕರಿಗೆ ಸಿಗುತ್ತಿಲ್ಲ. ಅನೇಕ ಕಠಿಣ ನಿಬಂಧನೆಗಳನ್ನು ಹಾಕಲಾಗಿದೆ. ಈ ರೀತಿ ಮಾಡುವುದರಿಂದ ಪ್ರಯೋಜನವಿಲ್ಲ. ಅದರ ಬದಲು ಈ ಯೋಜನೆಯನ್ನೇ ವಿತ್ ಡ್ರಾ ಮಾಡುವುದು ಒಳಿತು'' ಎಂದಿದ್ದಾರೆ.

      'ಈ ವಿಚಾರವಾಗಿ ಇಂದು ಡಿಸಿಎಂ ಅವರನ್ನ ಭೇಟಿ ಮಾಡಿದ್ದೇವೆ. ಸವದಿಯವರು ಸರಿಯಾದ ರೀತಿಯಲ್ಲಿ ಸ್ಪಂದಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲ ಸರಿ ಮಾಡುವುದಾಗಿ ಹೇಳಿದ್ದಾರೆ. ನಾವೂ ಕೂಡಾ ಎರಡು ದಿನ ಕಾದು ನೋಡುತ್ತೇವೆ. ನಂತರ ಮುಂದೇನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ'' ಎಂದು ವಿಕಾಸ ಸೌಧದಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

      ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ 'ನೆರವಿನ ವಿಚಾರದಲ್ಲಿ ಚಾಲಕರಿಗೆ ಸಮಸ್ಯೆಯಾಗಿದೆ. ಹೀಗಾಗಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಭೇಟಿ ಮಾಡಿದ್ದೇವೆ. ಚಾಲಕರ ಸಮಸ್ಯೆಗಳನ್ನ ಸವದಿಯವರಿಗೆ ತಿಳಿಸಿದ್ದೇವೆ. ಅವರು ಸಮಸ್ಯೆ ಬಗ್ಗೆ ಸರಿಪಡಿಸುವುದಾಗಿ ಹೇಳಿದ್ದಾರೆ. ಇಲ್ಲಿಯವರೆಗೆ ಸೇವಸಿಂಧು APPನಲ್ಲಿ ಅವಕಾಶವಿಲ್ಲ. ಎರಡು ದಿನಗಳಲ್ಲಿ ಮಾಡುವುದಾಗಿ ಹೇಳಿದ್ದಾರೆ' ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+