ಅನ್ಯಾಯ ಬಗ್ಗೆ ಟ್ವೀಟ್ ಮಾಡಿದ ಡಿ ರೂಪಾಗೆ ಭಾರಿ ಬೆಂಬಲ

ಬೆಂಗಳೂರು, ಜುಲೈ 20: ಕಾರಾಗೃಹ ಡಿಐಜಿಯಾಗಿದ್ದ ಡಿ ರೂಪಾ ಅವರನ್ನು ಟ್ರಾಫಿಕ್ ಇಲಾಖೆ ಡಿಐಜಿಯಾಗಿ ವರ್ಗಾವಣೆ ಮಾಡಿದ್ದು ಇನ್ನೂ ಚರ್ಚೆಯಲ್ಲಿದೆ. ತಮಗೆ ಬೆಂಬಲ ವ್ಯಕ್ತಪಡಿಸಿದವರಿಗೆ ಡಿ ರೂಪಾ ಅವರು ಧನ್ಯವಾದ ಅರ್ಪಿಸಿದ್ದು ಆಗಿದೆ. ಈಗ ಹಳೆ ಟ್ವೀಟೊಂದು ಮತ್ತೆ ಸುದ್ದಿಯಲ್ಲಿದೆ.

ಅನ್ಯಾಯದ ವಿರುದ್ಧ ಡಿ ರೂಪಾ ಅವರು ಟ್ವೀಟ್ ಮಾಡಿದ್ದು, ಸರ್ಕಾರದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿರುವಂತಿದೆ. 'ಎಲ್ಲೆಡೆ ಅನ್ಯಾಯವೇ ಇರುವಾಗ...ನ್ಯಾಯಕ್ಕೆ ಬೆದರಿಕೆ ಇರುತ್ತೆ' ಎಂದು ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

DIG D Roopa Tweets about injustice quotes Martin Luther King

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಭ್ರಷ್ಟಾಚಾರ, ಅಕ್ರಮದ ಬಗ್ಗೆ ಎರಡು ವರದಿ ನೀಡಿ ಡಿಜಿ ಹಾಗೂ ಐಜಿ ಸತ್ಯನಾರಾಯಣ ರಾವ್ ಅವರ ಮೇಲೆ ಆರೋಪ ಹೊರೆಸಿದ್ದ ಡಿ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆ ಲಭಿಸಿದೆ. ಟ್ರಾಫಿಕ್, ರಸ್ತೆ ಸುರಕ್ಷತೆ ವಿಭಾಗದ ಡಿಜಿಪಿಯಾಗಿ ನೇಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವರ್ಗಾವಣೆ ನಂತರ ಮೊದಲ ಬಾರಿಗೆ ಮಾಧ್ಯಮಗಳ ಜತೆ ಮಾತನಾಡಿರುವ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಯುಕ್ತೆ ಡಿ ರೂಪಾ, "ಸರಕಾರಕ್ಕೆ ಅಧಿಕಾರಿಗಳನ್ನು ವರ್ಗವಾಣೆ ಮಾಡುವ ಹಕ್ಕಿದೆ, ನಾನು ಆದೇಶವನ್ನು ಪಾಲಿಸುತ್ತೇನೆ. ಬೆಲೆಕಟ್ಟಲಾಗದ ಬೆಂಬಲ ಕೊಟ್ಟಿದ್ದಕ್ಕಾಗಿ ಕಿರಣ್ ಬೇಡಿಯವರಿಗೆ ನನ್ನ ಧನ್ಯವಾದಗಳು," ಎಂದು ಡಿಐಜಿ ಡಿ. ರೂಪ ಹೇಳಿದ್ದರು.

ಕಿರಣ್ ಬೇಡಿಯಂತೆ ನೀವು ನಮಗೆ ಸ್ಫೂರ್ತಿ


ನೋವು ತೋಡಿಕೊಂಡ ಮಾಜಿ ಯೋಧ

ಮಾರ್ಟಿನ್ ಲೂಥರ್ ಕಿಂಗ್ ಹೇಳಿಕೆಗಳನ್ನು ಹಾಕಿದ ಟ್ವಿಟ್ಟಿಗರು


(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+