• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪ ಚುನಾವಣೆ ಮುಗೀತು, ಸಂಪುಟ ವಿಸ್ತರಣೆಗೆ ವಿಳಂಬವಿಲ್ಲ: ದೇವೇಗೌಡ

|

ಬೆಂಗಳೂರು, ನವೆಂಬರ್ 6: ಇಷ್ಟು ದಿನ ಐದು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶಕ್ಕಾಗಿ ಸಂಪುಟ ವಿಸ್ತರಣೆ ಮಾಡದೆ ಕಾಯುತ್ತಿದ್ದೆವು, ಈ ಫಲಿತಾಂಶ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಶೀಘ್ರ ಸಂಪು ವಿಸ್ತರಣೆ ಮಾಡುವುದಾಗಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲ ಕಾರ್ಯಕರ್ತರು ಮತ್ತು ಮುಖಂಡರು ಒಟ್ಟಾಗಿ ಕೆಲಸ ಮಾಡಿದ ಕಾರಣ 4 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಇದರ ಜತೆಗೆ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಹೇಳಿದರು.

ನಾಲ್ಕು ಕ್ಷೇತ್ರದಲ್ಲಿ ಗೆಲುವು, ಶಿವಮೊಗ್ಗದಲ್ಲಿ ನೈತಿಕ ಗೆಲುವು: ಕುಮಾರಸ್ವಾಮಿ

ಶಿವಮೊಗ್ಗ ದಲ್ಲಿ ಅಭ್ಯರ್ಥಿ ಹಾಕಿದ್ದು ಕಡೇ ಗಳಿಕೆಯಲ್ಲಿ.. ಸ್ವಲ್ಪ ಮೊದಲೇ ಹಾಕಿದ್ದರೆ ಗೆಲ್ಲುವ ಅವಕಾಶ ಇತ್ತು. 50 ಸಾವಿರ ಮತಗಳ ಅಂತರದಿಂದ ಅಲ್ಲಿ ಸೋತಿರುವುದನ್ನು ಒಪ್ಪುತ್ತೇನೆ. ಹಳೇ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡ್ತೀವಿ.

ದೀಪಾವಳಿ ವಿಶೇಷ ಪುರವಣಿ

ಮುಂದಿನ ಲೋಕಸಭೆ ಸಹ ಕಾಂಗ್ರೆಸ್ ಜತೆ ಚುನಾವಣೆ ಎದುರಿಸುತ್ತೇವೆ. ರಾಹುಲ್ ಗಾಂಧಿ ಸೇರಿದಂತೆ ಸ್ಥಳೀಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ಫೈನಲ್ ಮಾಡುತ್ತೇವೆ ಎಂದರು.

ನನ್ನ ಬದುಕಿನ ಕೊನೆ ಹೋರಾಟ

ನನ್ನ ಬದುಕಿನ ಕೊನೆ ಹೋರಾಟ

ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆ ಇರಬಹುದು, ಬಿಬಿಎಂಪಿ ಇರಬಹುದು ಎಲ್ಲದರಲ್ಲೂ ನಾವು ಕಾಂಗ್ರೆಸ್ ಜತೆ ನಿಂತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬಗ್ಗೆ ಏನೇ ಮಾತನಾಡಿದ್ದರೂ, ಅವರು ನಮ್ಮ ಬಗ್ಗೆ ಏನೇ ಮಾತನಾಡಿದ್ದರೂ ಮರೆತು ಮುಂದುವರಿದಿದ್ದೇವೆ ಇದು ನನ್ನ ಬದುಕಿನ ಕಡೆಯ ಹೋರಾಟ

ಬಳ್ಳಾರಿ ಬಿಜೆಪಿ ಭದ್ರಕೋಟೆ ಅಂತಾ ಇದ್ರು. ಏನಾಯ್ತು?

ಬಳ್ಳಾರಿ ಬಿಜೆಪಿ ಭದ್ರಕೋಟೆ ಅಂತಾ ಇದ್ರು. ಏನಾಯ್ತು?

ಬಿಜೆಪಿಯು ಬಳ್ಳಾರಿ ನಮ್ಮ ಭದ್ರಕೋಟೆ ಎನ್ನುತ್ತಿದ್ದರು ಆದರೆ ಅಲ್ಲಿ ಸೋಲನನ್ನುಭವಿಸಿದೆ ಉಗ್ರಪ್ಪ ಎದುರು ಶಾಂತಾ ಸೋತಿದ್ದಾರೆ, ಈಗೆಲ್ಲಿದೆ ನಿಮ್ಮ ಭದ್ರಕೋಟೆ ಎಂದುರು.

ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕಕ್ಕೆ ಇಂದಿನಿಂದ ಶ್ರೀಕಾರ!

ಶೀಘ್ರ ಸಚಿವ ಸಂಪುಟ ವಿಸ್ತರಣೆ

ಶೀಘ್ರ ಸಚಿವ ಸಂಪುಟ ವಿಸ್ತರಣೆ

ಇನ್ನು ಸಂಪುಟ ವಿಸ್ತರಣೆ ವಿಳಂಬವಿಲ್ಲ ಶೀಘ್ರವಾಗಿ ಕಾರ್ಯ ಕೈಗೊಳ್ಳಲಾಗುತ್ತದೆ, ಈಗಾಗಲೇ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ, ಹೀಗಾಗಿ ಸಿಎಂ ಕುಮಾರಸ್ವಾಮಿ ವೇಣುಗೋಪಾಲ್ ಅವರ ಜತೆ ಚರ್ಚೆ ನಡೆಸಲಿದ್ದಾರೆ, ನಿಗಮ-ಮಂಡಳಿಗಳ ನೇಮಕ ಕೂಡ ಶೀಘ್ರದಲ್ಲೇ ನಡೆಯುತ್ತದೆ ಎಂದರು.

ದೇವೇಗೌಡರ ಆಶೀರ್ವಾದ ಪಡೆದ ಅನಿತಾ

ದೇವೇಗೌಡರ ಆಶೀರ್ವಾದ ಪಡೆದ ಅನಿತಾ

ಇದೇ ಸಂದರ್ಭದಲ್ಲಿ ದೇವೇಗೌಡ ಅವರ ನಿವಾಸಕ್ಕೆ ಅನಿತಾ ಕುಮಾರಸ್ವಾಮಿ ಭೇಟಿ ಭೇಟಿ ನೀಡಿ ರಾಮನಗರದಿಂದ ಚುನಾಯಿತರಾದ ಹಿನ್ನೆಲೆಯಲ್ಲಿ ಮಾವನವರ ಆಶೀರ್ವಾದ ಪಡೆದರು. ಸಿಎಂ ಕುಮಾರಸ್ವಾಮಿ ಅವರ ರಾಜಿನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅನಿತಾ ಸ್ಪರ್ಧಿಸಿ ಜಯಗಳಿಸಿದ್ದಾರೆ.

ಜೆಡಿಎಸ್ ಭದ್ರ ಕೋಟೆ ಮಂಡ್ಯ ಮತ್ತೆ 'ಗೌಡರ' ವಶಕ್ಕೆ

English summary
Former prime minister Hd Devegowda has describes that the result of the five constituency by election has approved and accepted by the people of the state as Congress and JDS have United in the upcoming parliament poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X