ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಪ್ರಧಾನಿಯಾದರೆ ದೇಶಬಿಟ್ಟು ಹೋಗುತ್ತೇನೆ ಎಂದಿರಲಿಲ್ಲ: ದೇವೇಗೌಡ

By Nayana
|
Google Oneindia Kannada News

ಬೆಂಗಳೂರು, ಮೇ.2: ಮೋದಿ ಪ್ರದಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿರಲಿಲ್ಲ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ ಎಂದು ಮಾಜಿ ಪ್ರಧಾನಿ ಎಚ್.ಡಿದೇವೇಗೌಡ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಮೇಲೆ ರಾಜಿನಾಮ ನೀಡಲು ಮುಂದಾಗಿದ್ದೆ, ಹಿರಿಯರು ನಿಮ್ಮ ಮಾರ್ಗದರ್ಶನ ಬೇಕು ಎಂದು ಮೋದಿ 15 ನಿಮಿಷ ಕುಳಿತು ಮಾಡತನಾಡಿದ್ದರು, ಯಾವುದು ಮನಸಿನಲ್ಲಿಟ್ಟುಕೊಳ್ಳಬೇಡಿ ಎಂದು ಮನವೊಲಿಸಿದ್ದರು ಎಂದು ಹೇಳಿದರು.

ದೇವೇಗೌಡರ ಹೊಗಳಿ ಭವಿಷ್ಯದ ಮೈತ್ರಿಯ ಬಾಗಿಲು ತೆರೆದಿಟ್ಟರೆ ಮೋದಿ?ದೇವೇಗೌಡರ ಹೊಗಳಿ ಭವಿಷ್ಯದ ಮೈತ್ರಿಯ ಬಾಗಿಲು ತೆರೆದಿಟ್ಟರೆ ಮೋದಿ?

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಗಳ ಅಧಿಕೃತ ಕೊಠಡಿಯಲ್ಲಿದ್ದ ತಮ್ಮ ಭಾವಚಿತ್ರವನ್ನು ಸಿದ್ದರಾಮಯ್ಯ ಸಿಎಂ ತೆಗೆಸಿ ಹಾಕಿದರು. ಇದಕ್ಕೆ ರಾಜ್ಯದ ಜನತೆ ಉತ್ತರ ಕೊಡುತ್ತಾರೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

Devegowda clarified never told he would quit India if modi becomes PM

ಒಬ್ಬ ಕನ್ನಡಿಗ ಪ್ರಧಾನಿಯಾದ ಅನ್ನೋ ಹೆಮ್ಮೆಯಿಂದ ಆಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರು ವಿಧಾನಸೌಧದ ಮೂರನೆ ಮಹಡಿ ಸಿಎಂ ಕಚೇರಿಯಲ್ಲಿ ನನ್ನ ಪೋಟೋ ಹಾಕಿಸಿದರು. ನಂತರ ಕಾಲಘಟ್ಟದಲ್ಲಿ ಸಿಎಂ ಆದ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಯಾರು ಕೂಡ ನನ್ನ ಪೋಟೋ ತೆಗೆಯಲಿಲ್ಲ. ಆದರೆ ನಾನೇ ಬೆಳೆಸಿದ ಸಿದ್ದರಾಮಯ್ಯ ಸಿಎಂ ಆಗಿ ಕಚೇರಿ ಪ್ರವೇಶ ಮಾಡುತ್ತಿದ್ದಂತೆ ಮೊದಲು ನನ್ನ ಪೋಟೋ ತೆಗೆಸಿ ಆಚೆಗೆ ಹಾಕಿಸಿದ್ದರು ಎಂದು ಹೇಳಿದರು.

ಅಡ್ವಾಣಿ, ಗೌಡರನ್ನು ಹೇಗೆ ನಡೆಸಿಕೊಂಡಿದ್ದೀರಿ ಗೊತ್ತು: ಮೋದಿಗೆ ಸಿಎಂ ಗುದ್ದುಅಡ್ವಾಣಿ, ಗೌಡರನ್ನು ಹೇಗೆ ನಡೆಸಿಕೊಂಡಿದ್ದೀರಿ ಗೊತ್ತು: ಮೋದಿಗೆ ಸಿಎಂ ಗುದ್ದು

ಹಾಸನದಲ್ಲಿ ರಾಹುಲ್ ಗಾಂಧಿ ಮೂಲಕ ನಿಂದನೆ ಮಾಡಿಸಿದ್ರು. ಸಿದ್ದರಾಮಯ್ಯ ನಿರಂತರ ನಿಂದನೆ ಮಾಡ್ತಾನೆ ಇದ್ದಾರೆ. ಎಷ್ಟು ದಿನ ನಿಂದನೆ ಸಹಿಸಲು ಸಾಧ್ಯ? ನಮ್ಮ ಜನ ಇದೆಲ್ಲದಕ್ಕೂ ಚುನಾವಣೆಯಲ್ಲಿ ಉತ್ತರಿಸುತ್ತಾರೆ. ಈ ಅವಮಾನ ಮರೆಯಕ್ಕೆ ಆಗುತ್ತಾ? ಇದೆಲ್ಲವೂ ಬಿಜೆಪಿಗೆ ಮೋದಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

ಮೋದಿಗೆ ಎಲ್ಲಿ ಹೇಗೆ ಮಾತನಾಡಬೇಕು ಎನ್ನುವುದು ಗೊತ್ತಿದೆ, ನಾನು ಮಾಜಿ ಪ್ರಧಾನಿಯಾಗಿದ್ದ ಕಾರಣ ನ್ನನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ ಅದು ಸತ್ಯ, ಎಲ್ಲಾ ಮಾತನ್ನೂ ಮೋದಿ ಗಮನಿಸುತ್ತಾರೆ ಎಂದು ಮೋದಿಯ ಮಾತನ್ನು ಸಮರ್ಥಿಸಿಕೊಂಡರು.

English summary
Devegowda clarified never told he would quit India if modi becomes PM, and Former prime minister H.D.Deve gowda accused the chief minister Siddaramaiah had removed his photo at cm's chamber in Vidhana Soudha after latter became chief minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X