ಸಿದ್ದರಾಮಯ್ಯ ಆರೋಗ್ಯ ಕುರಿತು ದೇವೇಗೌಡ ಟ್ವೀಟ್‌

ಬೆಂಗಳೂರು, ಡಿಸೆಂಬರ್ 12: ಮೈತ್ರಿ ಸರ್ಕಾರದ ಪತನದ ಬಳಿಕ ಒಬ್ಬರ ಸಿದ್ದರಾಮಯ್ಯ ಮೇಲೆ ವಾಗ್ಬಾಣಗಳನ್ನು ಹೂಡಿದ್ದ ದೇವೇಗೌಡರು ಇಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಂಡಿದ್ದಾರೆ.

'ಸಿದ್ದರಾಮಯ್ಯ ಹೃದಯ ಚಿಕಿತ್ಸೆಗೆ ಒಳಗಾದರೆಂಬ ವಿಷಯ ತಿಳಿಯಿತು.‌ ಬಹುಕಾಲದ ನನ್ನ ಒಡನಾಡಿಯಾಗಿದ್ದ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ' ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.

ಮೈತ್ರಿ ಸರ್ಕಾರದ ಬಳಿಕ ದೇವೇಗೌಡ-ಸಿದ್ದರಾಮಯ್ಯ ಇಬ್ಬರೂ ಪರಸ್ಪರ ಟೀಕೆಗಳನ್ನು ಮಾಡಿಕೊಂಡಿದ್ದರು. ಅದರಲ್ಲಿಯೂ ದೇವೇಗೌಡ ಅವರು ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಪರೋಕ್ಷ ಕಾರಣ ಎಂಬಂತೆ ಮಾತನಾಡಿದ್ದರು. ಆದರೆ ಈಗ ಸಿದ್ದರಾಮಯ್ಯ ಆರೋಗ್ಯ ಸ್ಥಿತಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿ ರಾಜಕಾರಣ ಬೇರೆ ಮಾನವೀಯತೆ ಮೊದಲು ಎಂಬುದನ್ನು ಸಾಬೀತುಪಡಿಸಿದ್ದಾರೆ.

Deve Gowda Tweeted About Siddaramaiahs Helath

ಸಿದ್ದರಾಮಯ್ಯ ಅವರು ಬುಧವಾರ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಸಣ್ಣ ಮಟ್ಟಿನ ಹೃದಯ ಖಾಯಿಲೆ ಕಾಣಿಸಿಕೊಂಡಿತ್ತು. ಹೃದಯದಲ್ಲಿ ರಕ್ತಪರಿಚಲನೆ ಸೂಕ್ತವಾಗಿ ಆಗುತ್ತಿರಲಿಲ್ಲ, ಹಾಗಾಗಿ ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ.

ಈ ಹಿಂದೆಯೂ ಸಿದ್ದರಾಮಯ್ಯ ಅವರಿಗೆ ಹೃದಯ ಸಮಸ್ಯೆ ಕಾಡಿತ್ತು. ಹಿಂದೆಯೂ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+