ಬಜೆಟ್ ಅಧಿವೇಶನ ಮುಗಿಸಿದ ಮಗನ ಬೆನ್ನು ತಟ್ಟಿದ ದೇವೇಗೌಡರು

ಎಚ್ ಡಿ ಕುಮಾರಸ್ವಾಮಿಗೆ ಎಚ್ ಡಿ ದೇವೇಗೌಡ್ರು ಭೇಷ್ ಅಂದಿದ್ಯಾಕೆ? | Oneindia Kannada
ಬೆಂಗಳೂರು, ಜುಲೈ 14: ಬಜೆಟ್ ಅಧಿವೇಶನವನ್ನು ಯಶಸ್ವಿಯಾಗಿ ಮುಗಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಬಜೆಟ್ ಅಧಿವೇಶನ ಮುಕ್ತಾಯವಾದ ನಂತರ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ ದೇವೇಗೌಡರು ಕೆಲ ಕಾಲ ಬಜೆಟ್ ಮತ್ತು ಅಧಿವೇಶನದ ಮುಖ್ಯ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
'ಹೆಚ್ಚು ಭಾಗ್ಯಗಳನ್ನು ಕೊಡಬೇಡಿ, ಸಿದ್ದರಾಮಯ್ಯ ಸ್ಥಾನದಲ್ಲಿ ಕೂರಬೇಕಾದೀತು'
ಈ ಭೇಟಿ ಅನೌಪಚಾರಿಕವಾಗಿದ್ದು, ಬಜೆಟ್ ಮಂಡಿಸಿದ್ದಕ್ಕೆ ಹಾಗೂ ವಿರೋಧ ಪಕ್ಷಗಳ ಟೀಕೆಗಳಿಗೆ ಸರಿಯಾಗಿ ಉತ್ತರ ನೀಡಿದ್ದಕ್ಕೆ ಸಂತುಷ್ಟರಾಗಿರುವ ದೇವೇಗೌಡರು ಮಗನ ಸಾಧನೆಗೆ ಬೆನ್ನುತಟ್ಟಿದ್ದಾರೆ.
ನಿನ್ನೆಯಷ್ಟೆ ಬಜೆಟ್ ಅಧಿವೇಶನ ಮುಗಿದಿದ್ದು, ಬಜೆಟ್‌ಗೆ ನಿನ್ನೆ ಲೇಖಾನುದಾನ ನೀಡಲಾಗಿದೆ. ವಿರೋಧ ಪಕ್ಷಗಳು ಬಜೆಟ್ ಬಗ್ಗೆ ಸಾಕಷ್ಟು ಚಕಾರ ಎತ್ತಿದ್ದರೂ ಸಹ ಬಜೆಟ್ ಚರ್ಚೆಗೆ ಉತ್ತರದ ವೇಳೆ ಕುಮಾರಸ್ವಾಮಿ ಅವರು ಯಶಸ್ವಿಯಾಗಿಯೇ ಟೀಕೆಗಳಿಗೆ ಉತ್ತರ ನೀಡಿದರು.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !