ದೇವನಹಳ್ಳಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳೇ ಸಿಗೊಲ್ಲ!
ದೇವನಹಳ್ಳಿ, ಜುಲೈ.19: ರಾಜಧಾನಿ ಬೆಂಗಳೂರಿನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ದೇವನಹಳ್ಳಿಯಲ್ಲಿ ಅಧಿಕಾರಿಗಳಿಗೆ ಭಯ ಇಲ್ಲ. ತಾವು ಕಚೇರಿಗೆ ಬಾರದೆ ಹೋದರೆ ನಮ್ಮ ಮೇಲೆ ಕ್ರಮ ಕೈಗೊಳ್ತಾರೆ ಅನ್ನೋ ಭಯ ಇವರನ್ನು ಕಾಡೋದಿಲ್ಲ.
ಬೆಂಗಳೂರಲ್ಲಿ ಆಡಳಿತ ನಡೆಸುವ ಅಧಿಕಾರಿಗಳು ಇಲ್ಲಿಯವರೆಗೂ ಬರಲ್ಲ ಅನ್ನೋ ಬಂಡ ಧೈರ್ಯ ಇವರದು. ಹೀಗಾಗಿ ದೇವನಹಳ್ಳಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳೇ ಸಿಗೋದಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಬಾಗಿಲು ತೆರೆದು ತಿಂಗಳುಗಳು ಕಳೆದುಹೋಗಿದೆ. ಇನ್ನು ಅಧಿಕಾರಿಗಳಂತೂ ಇಲ್ಲಿ ಸಿಗೋದೇ ಇಲ್ಲ. ಇದರಿಂದ ಉನ್ನತ ವ್ಯಾಸಂಗಕ್ಕೆ ದಾಖಲಾಗಬೇಕಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನಿತ್ಯವು ನರಕ ಅನುಭವಿಸುವ ಸ್ಥಿತಿ ಎದುರಾಗಿದೆ.

ಸರ್ಕಾರಿ ಲೆಕ್ಕದಲ್ಲಿ ಇಬ್ಬರು ಹೊರಗುತ್ತಿಗೆ ಆಧಾರದಲ್ಲಿ ಮೂವರು ಕಾರ್ಯನಿರ್ವಹಿಸಬೇಕಾದ ಕಚೇರಿ ಇದು. ಮುಖ್ಯ ವ್ಯವಸ್ಥಾಪಕರು ಹೆಚ್ಚುವರಿ ಹುದ್ದೆ ನಿಭಾಯಿಸುತ್ತಿದ್ದು, ಅವರು ಈ ಕಚೇರಿಗೆ ಬರುವುದೇ ಬಿಟ್ಟಿದ್ದಾರೆ. ಇನ್ನು ಸಹಾಯಕ ವ್ಯವಸ್ಥಾಪಕ ಹಿರಿಯ ಅಧಿಕಾರಿಯ ಬೆನ್ನ ಹಿಂದೆ ತಾವು ಗೈರಾಗಿದ್ದಾರೆ.
ಬೆಂಗಳೂರಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಸರ್ಕಾರಿ ಕಚೇರಿಗಳ ಬದುಕೇ ಹೀಗಾದ್ರೆ ಇನ್ನು ರಾಜ್ಯದ ಮೂಲೆ, ಮೂಲೆಯಲ್ಲಿರುವ ಕಚೇರಿಗಳ ಪಾಡು ಹೇಗಿರಬಹುದು ಅನ್ನೋದು ಸಾರ್ವಜನಿಕರ ಪ್ರಶ್ನೆ.












Click it and Unblock the Notifications