ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಡಿಟೋನೇಟರ್ ಸ್ಫೋಟ, ಐವರಿಗೆ ಗಾಯ

|
Google Oneindia Kannada News

ಬೆಂಗಳೂರು, ನವೆಂಬರ್ 29 : ಬೆಂಗಳೂರಿನಲ್ಲಿ ಡಿಟೋನೇಟರ್ ಸ್ಫೋಟಗೊಂಡು ಐವರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ನಲ್ಲಿ ಡಿಟೋನೇಟರ್ ಸ್ಫೋಟಗೊಂಡಿದೆ. ಐವರು ವಿಜ್ಞಾನಿಗಳು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Detonator Blast In FSL Madiwala 5 Injured

2018ರ ಅಕ್ಟೋಬರ್‌ನಲ್ಲಿ ರಾಯಚೂರಿನಲ್ಲಿ ವಶಕ್ಕೆ ಪಡೆದುಕೊಂಡ ಒಟ್ಟು 9 ಡಿಟೋನೇಟರ್‌ಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ಒಂದು ಡಿಟೋನೇಟರ್ ಸ್ಫೋಟಗೊಂಡಿದೆ. ಡಿಸಿಪಿ ಇಶಾಪಂತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪೊಲೀಸರು ವಶಪಡಿಸಿಕೊಂಡಿರುವ ಡಿಟೋನೇಟರ್‌ಗಳನ್ನು ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿರುತ್ತದೆ. ಇದನ್ನು ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಒಂದು ಸ್ಫೋಟಗೊಂಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಸ್ಥಳಕ್ಕೆ ಭೇಟಿ ನೀಡಿದರು.

ಶ್ರೀನಾಥ್ ಬಿ. ಎಸ್. ಎಂಬ ಹಿರಿಯ ವಿಜ್ಞಾನಿ, ಅವರ ಸಹಾಯಕಿ ನವ್ಯಾ (29) ಗಾಯಗೊಂಡವರು. ಉಳಿದಂತೆ ಬಸವ ಪ್ರಭು (27), ವಿಶ್ವನಾಥ್ ರೆಡ್ಡಿ (33), ಮಂಜುನಾಥ್ (33), ವಿಶ್ವನಾಥ್ (32), ಅಟೆಂಡರ್ ಅಂಥೋನಿ ಗಾಯಗೊಂಡ ಎಲ್ಲರೂ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
5 scientists injured after detonator blast in Forensic Science Laboratory Madiwala, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X