ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಇಆರ್‌ಸಿಯ ರಿಯಾಯಿತಿ ವಿದ್ಯುತ್ ನಿರ್ಣಯದಿಂದ ಮೆಟ್ರೋ ನಿರಾಳ

By Nayana
|
Google Oneindia Kannada News

ಬೆಂಗಳೂರು, ಮೇ 17: ಪ್ರತಿ ವರ್ಷವೂ ವಿದ್ಯುತ್ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ಕೂಡ ಮೆಟ್ರೋ ಟಿಕೆಟ್ ದರವನ್ನೂ ಏರಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿತ್ತು. ಆದರೆ ಕರ್ನಾಟಕ ವಿದ್ಯುಚಕ್ತಿ ನಿಯತ್ರಣ ಆಯೋಗ(ಕೆಇಆರ್‌ಸಿ) ಈ ಬಾರಿ ಪ್ರತಿ ಯೂನಿಟ್‌ಗೆ 1 ರೂ. ಕಡಿತಗೊಳಿಸಿದೆ.

2018-19ನೇ ಸಾಲಿನಲ್ಲಿ ನಿಗಮಕ್ಕೆ ಪ್ರತಿ ಯುನಿಟ್‌ ವಿದ್ಯುತ್‌ಗೆ 5 ರೂ. ದರವನ್ನು ಕೆಇಆರ್‌ಸಿ ನಿಗದಿಪಡಿಸಿದೆ. 2017-18ನೇ ಸಾಲಿಗೆ ಹೋಲಿಸಿದರೆ ಪ್ರತಿ ಯುನಿಟ್‌ಗೆ 1 ರೂ. ಇಳಿಕೆಯಾಗಿತ್ತು. 2012ರ ನಂತರದಲ್ಲಿ ಬೆಸ್ಕಾಂಗೆ ನಿಗಮ ಪಾವತಿಸುತ್ತಿರುವ ಅತಿ ಕಡಿಮೆ ದರ ಇದಾಗಿದೆ.

ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಬಳಕೆದಾರರ ಪ್ರಮಾಣ ಶೇ.59ರಷ್ಟು ಹೆಚ್ಚಳ! ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಬಳಕೆದಾರರ ಪ್ರಮಾಣ ಶೇ.59ರಷ್ಟು ಹೆಚ್ಚಳ!

2016-17ರಲ್ಲಿ 457 ಕೋಟಿ ರೂ. ನಷ್ಟ ಅನುಭವಿಸಿದ್ದ ಬಿಎಂಆರ್‌ಸಿಎಲ್, 2017-18ನೇ ಸಾಲಿನಲ್ಲಿ 513 ಕೋಟಿ ರೂ. ನಷ್ಟ ಅನುಭವಿಸುವ ಲೆಕ್ಕಾಚಾರದಲ್ಲಿದೆ. ಈಗಾಗಲೇ ವಾರ್ಷಿಕ 48 ಕೋಟಿ ರೂ. ವಿದ್ಯುತ್ ಬಿಲ್‌ ಪಾವತಿಸುತ್ತಿರುವ ನಿಗಮಕ್ಕೆ ಇದೇ ಸಂದರ್ಭದಲ್ಲಿ ವಿದ್ಯುತ್ ದರ ಮತ್ತಷ್ಟು ಏರಿಕೆಯಾದಲ್ಲಿ ನಷ್ಟವೂ ಅಧಿಕವಾಗುವ ಆತಂಕವಿತ್ತು.

Despite power tariff hike, BMRCL breath smoothly

ಹಳಿ ಪಕ್ಕದಲ್ಲೇ ಹಾಕಿರುವ ಥರ್ಡ್ ರೇಲ್‌ ಮೂಲಕ ಮೆಟ್ರೋ ರೈಲುಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಇವುಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಅಗತ್ಯ, ತನ್ನದೇ ಸಬ್‌ಸ್ಟೇಷನ್‌ ಮೂಲಕ ಅಂದಾಜು 43 ಕಿ.ಮೀ ಮಾರ್ಗದುದ್ದಕ್ಕೂ ವಿದ್ಯುತ್ ಸರಬರಾಜು ಮಾಡುತ್ತಿದೆ. ಹೀಗಾಗಿ 1 ರೂ. ರಿಯಾಯಿತಿ ನೀಡಲು ಕೆಇಆರ್‌ಸಿ ಗೆ ನಿಗಮ ಸಲ್ಲಿಸಿತ್ತು.

English summary
Despite revision of power tariff in the state, BMRCL has got better concession from KERC time. The corporation will payRs.5 per unit as per new subsidy given by the KERC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X