ಜಲ್ಲಿಕಟ್ಟುಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರಿಕೆ

ತಮಿಳನಾಡಿನ ಹಲವೆಡೆ ಭಾನುವಾರಂಡು ಜಲ್ಲಿಕಟ್ಟು ಆಯೋಜನೆಗೊಂಡಿದೆ. ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕಿದೆ. ಆದರೆ, ಬೆಂಗಳೂರಿನಲ್ಲಿ ತಮಿಳರು ಪ್ರತಿಭಟನೆ ಮುಂದುವರೆಸಿದ್ದಾರೆ.

ಬೆಂಗಳೂರು, ಜನವರಿ 22: ತಮಿಳನಾಡಿನ ಹಲವೆಡೆ ಭಾನುವಾರಂಡು ಜಲ್ಲಿಕಟ್ಟು ಆಯೋಜನೆಗೊಂಡಿದೆ. ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕಿದ್ದರೂ, ಪೂರ್ಣ ಪ್ರಮಾಣದ ಕಾನೂನು ಜಾರಿಗೊಳ್ಳುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಬೆಂಗಳೂರಿನಲ್ಲಿರುವ ತಮಿಳರು ಪ್ರತಿಭಟನೆ ಮುಂದುವರೆಸಿದ್ದಾರೆ.

ಬೆಂಗಳೂರಿನ ಹಲಸೂರಿನಲ್ಲಿರುವ ತಮಿಳು ಸಂಘದ ಪ್ರಧಾನ ಕಚೇರಿ ಮುಂಭಾಗದಲ್ಲಿ ನೂರರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ಮಕ್ಕಳು ಸೇರಿದ್ದಾರೆ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಬೆಂಗಳೂರು ಪೊಲೀಸರ ಅನುಮತಿ ಸಿಕ್ಕಿಲ್ಲದಿದ್ದರೂ ಪ್ರತಿಭಟನೆ ಜಾರಿಯಲ್ಲಿದೆ.

Despite Jallikattu ordinance, protests continue in Bengaluru too

ಪೆಟಾ ವಿರುದ್ಧದ ಹೇಳಿಕೆಯುಳ್ಳ ಪ್ಲೇಕಾರ್ಡ್ ಗಳು, ಜಲ್ಲಿಕಟ್ಟು ಪರ ಘೋಷಣೆಯುಳ್ಳ ಫಲಕಗಳನ್ನು ಹಿಡಿದು ಫುಟ್ ಪಾತ್ ನಲ್ಲಿ ಅನೇಕ ಮಂದಿ ನಿಂತಿದ್ದಾರೆ.

ಜಲ್ಲಿಕಟ್ಟು ಆಚರಣೆಗೆ ಕೇಂದ್ರದಿಂದ ಸುಗ್ರೀವಾಜ್ಞೆ ಸಿಕ್ಕಿರುವುದು ತಾತ್ಕಾಲಿಕ ಪರಿಹಾರವಾಗಿದೆ. ಈ ಬಗ್ಗೆ ಶಾಶ್ವತವಾದ ಕಾನೂನೂ ರೂಪಿಸುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಪ್ರತಿಭಟನಾಕಾರರು ನಮ್ಮ ಪ್ರತಿನಿಧಿಯ ಜತೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+