ಅಂಕಿಅಂಶದ ಸಮೇತ ಗುಂಡಿ ಮುಚ್ಚಿದ ಲೆಕ್ಕಕೊಟ್ಟ ಪರಮೇಶ್ವರ್

ಬೆಂಗಳೂರು, ಜುಲೈ 18: ಬೆಂಗಳೂರು ನಗರದಲ್ಲಿ ರಸ್ತೆಗುಂಡಿಗಳ ಬಗ್ಗೆ ಬೃಹತ್ ಅಭಿಯಾನದ ನಂತರ ಗುಂಡಿಗಳನ್ನು ಮುಚ್ಚುವ ಮೂಲಕ "ಗುಂಡಿ ಮುಕ್ತ" ರಸ್ತೆ ನಿರ್ಮಾಣ ಮಾಡುವತ್ತ ಬಿಬಿಎಂಪಿ ಹೆಜ್ಜೆ ಇಟ್ಟಿದೆ.

ಉಪಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರೂ ಆಗಿರುವ ಡಾ. ಜಿ. ಪರಮೇಶ್ವರ್, ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಪ್ರತೀ ವಾರ್ಡಿನಲ್ಲಿ ಮುಚ್ಚಿರುವ ರಸ್ತೆ ಗುಂಡಿಗಳ ಅಂಕಿ ಅಂಶ ನೀಡಿದ್ದಾರೆ.

ಕಳೆದ ಜೂನ್ 15 ರಂದು ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರೇ ಬಿಬಿಎಂಪಿಗೆ ನೇರ ದೂರು ನೀಡಲು ಸಹಾಯವಾಣಿ ತೆರೆಯಲಾಗಿತ್ತು. ಸಾಮಾಜಿಕ ಜಾಲತಾಣದಲ್ಲೂ ರಸ್ತೆಗುಂಡಿಗಳ ಚಿತ್ರ ತೆಗೆದು ಬಿಬಿಎಂಪಿ ನೀಡಿದ್ದ ಸಹಾಯವಾಣಿ ಹಾಗೂ ವಾಟ್ಸ್‌ಅಪ್ ಸಂಖ್ಯೆಗೆ ದೂರು ಸಲ್ಲಿಸಲು ಮನವಿ ಮಾಡಲಾಗಿತ್ತು.

DCM Parameshwar given statistics of number of potholes filled in Bengaluru

ಈ ಮೂಲಕ ರಸ್ತೆಗುಂಡಿ ಮುಂಚಿಸುವ ದೊಡ್ಡ ಮಟ್ಟದ ಆಂದೋಲನವನ್ನೇ ಮಾಡಲಾಗಿತ್ತು. ಈ ಆಂದೋಲನಕ್ಕೆ ಸಾಕಷ್ಟು ಸಾರ್ವಜನಿಕರು ಸ್ಪಂದಿಸಿದ್ದರು. ಸಾಕಷ್ಟು ಫೋಟೋಗಳು ಹಾಗೂ ದೂರುಗಳು ದಾಖಲಾಗಿದ್ದವು. ಈ ಎಲ್ಲವನ್ನು ಬಿಬಿಎಂಪಿ ಅಧಿಕಾರಿಗಳು ಸ್ವೀಕರಿಸಿ ಗುಂಡಿ ಮುಚ್ಚುವ ಕೆಲಸದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಒಟ್ಟು 4944 ಗುಂಡಿಗಳನ್ನು ಮುಚ್ಚಿದ ಅಂಕಿ ಅಂಶ ನೀಡಲಾಗಿತ್ತು. ಈಗ ಈ ಒಂದು ತಿಂಗಳ ಅವಧಿಯಲ್ಲಿ ಗುಂಡಿಗಳನ್ನು ಮುಚ್ಚುವಲ್ಲಿ ಅಧಿಕಾರಿಗಳು ಹೆಚ್ಚು ಶ್ರಮವಹಿಸಿ, ಬಹುತೇಕ ಗುಂಡಿ ಮುಚ್ಚಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ದೂರು ಹೆಚ್ಚುತ್ತದೆ.

ಹೀಗಾಗಿ ಇದಕ್ಕೂ ಮುನ್ನವೇ ಗುಂಡಿ ಮುಚ್ಚುವ ಕೆಲಸವನ್ನು ಮಾಡಲಾಗುತ್ತಿದೆ.‌ ನಗರದ ಬಹುತೇಕ ಕಡೆ ಗುಂಡಿ ಬಿದ್ದಿದ್ದ ಬಗ್ಗೆ ಬಿಬಿಎಂಪಿಗೆ ದೂರುಗಳು ಬಂದಿವೆ. ಎಲ್ಲವನ್ನೂ ಕ್ರೋಢೀಕರಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ಪ್ರಗತಿ ನೀಡಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

DCM Parameshwar given statistics of number of potholes filled in Bengaluru

ಶಾಶ್ವತ ಪರಿಹಾರಕ್ಕೆ ಡೆಂಡರ್‌ ಶ್ಯೂರ್ ರಸ್ತೆ ಗುಂಡಿಗಳನ್ನು‌ ಮುಚ್ಚುವುದು ಒಂದೆಡೆಯಾದರೆ, ಗುಂಡಿ ಬೀಳದಂತಹ ರಸ್ತೆ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ಈಗಾಗಲೇ 12ರಸ್ತೆಗಳನ್ನು ಡೆಂಡರ್‌ ಶ್ಯೂರ್ ಯೋಜನೆಯಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.‌ ಈವರೆಗೂ ಮುಚ್ಚಿರುವ ರಸ್ತೆ ಗುಂಡಿಗಳ ಅಂಕಿಅಂಶ, ಹೀಗಿದೆ

ದಾಸರಹಳ್ಳಿ: 945 ಗುಂಡಿಗಳಲ್ಲಿ 905
ಪಶ್ಚಿಮ : 663 ಗುಂಡಿಗಳಲ್ಲಿ 628
ಯಲಹಂಕ: 3902 ಗುಂಡಿಗಳಲ್ಲಿ 3862
ಪೂರ್ವ : 2422 ಗುಂಡಿಗಳಲ್ಲಿ 2263
ಮಹದೇವಪುರ : 839 ಗುಂಡಿಗಳಲ್ಲಿ 501
ದಕ್ಷಿಣ : 3045 ಗುಂಡಿಗಳಲ್ಲಿ 2910
ರಾಜರಾಜೇಶ್ವರಿ ನಗರ : 1587 ಗುಂಡಿಗಳಲ್ಲಿ 1519
ಬೊಮ್ಮನಹಳ್ಳಿ : 1836 ಗುಂಡಿಗಳಲ್ಲಿ 1711

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+