ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚಳ

|
Google Oneindia Kannada News

ಬೆಂಗಳೂರು, ಮೇ 11: ಕೊರೋನಾ ಕಾರಣದಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ. ಈ‌ ಮಧ್ಯೆ ಸದ್ದಿಲ್ಲದೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಿಬಿಎಂಪಿಗೆ ದೊಡ್ಡ ತಲೆನೋವಾಗಿದೆ. ನಗರದಲ್ಲಿ ಒಂದು ತಿಂಗಳಿನಿಂದ ಅಕಾಲಿಕ ಮಳೆಯಾಗುತ್ತಿದೆ. ಇದರ ಪರಿಣಾಮವೇ ಎರಡು ತಿಂಗಳಿನಿಂದ ನಗರದ ಎಲ್ಲ ವಲಯ ಮಟ್ಟದಲ್ಲೂ ಡೆಂಗ್ಯು ಕೇಸ್‌ಗಳ ಸಂಖ್ಯೆ ಏರಿಕೆಯಾಗಿದೆ.

ನಗರದಾದ್ಯಂತ ಒಟ್ಟು 2 ಸಾವಿರ ಕೇಸ್ ಗಳು ದಾಖಾಲಾಗಿವೆ.‌ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವೇ ಕೇಸ್‌ಗಳ ಪ್ರಮಾಣ ಏರಿಕೆಯಾಗಿರುವುದು ಹೆಚ್ಚು ಆತಂಕ ಮೂಡಿಸುತ್ತಿದೆ.‌ ಯಾಕೆಂದರೆ ಕಳೆದ ವರ್ಷ 1800 ಕೇಸ್‌ಗಳು ಮಾತ್ರ ದಾಖಾಲಾಗಿದ್ದವು. ಈ ವರ್ಷ ಕೇಸ್‌ಗಳ ಸಂಖ್ಯೆ ಈಗಾಗಲೇ 2 ಸಾವಿರಕ್ಕೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯಾತೆಗಳಿದೆ. ಹೀಗಾಗಿ ನಗರದ 8 ವಲಯದಲ್ಲೂ ಡೆಂಗ್ಯು ಹರಡುವುದನ್ನ ನಿಲ್ಲಿಸಲು ಬಿಬಿಎಂಪಿ ಹಲವು ಸಿದ್ದತೆಯನ್ನ‌ ಮಾಡಿಕೊಳ್ಳುತ್ತಿದೆ.

ನಗರದ ಎಲ್ಲಾ ವಲಯಗಳಲ್ಲೂ ಡೆಂಗ್ಯೂ ಜ್ವರದ ಸಮಸ್ಯೆ ಉಲ್ಬಣವಾಗುತ್ತಿದೆ. ಸದ್ಯ ಡೆಂಗ್ಯೂ ಪ್ರಮಾಣ ಏರಿಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಕೇಸ್‌ಗಳ ಸಂಖ್ಯೆ ದ್ವಿಗುಣವಾಗಲಿದೆ ಎನ್ನಲಾಗುತ್ತಿದೆ.

Dengue Cases Increse in Bengaluru - BBMP Takes Precaution Measures

ಯಾವ ವಲಯದಲ್ಲಿ ಎಷ್ಟೆಷ್ಟು ಡೆಂಗ್ಯೂ ಕೇಸ್..?

ಬೊಮ್ಮನಹಳ್ಳಿ ವಲಯ - 104 ಪ್ರಕರಣ

ದಾಸರಹಳ್ಳಿ ವಲಯ - 38 ಪ್ರಕರಣ

ಪೂರ್ವ ವಲಯ - 653 ಪ್ರಕರಣ

ಮಹದೇವಪುರ ವಲಯ - 342 ಪ್ರಕರಣ

ಆರ್.ಆರ್.ನಗರ ವಲಯ - 122 ಪ್ರಕರಣ

Dengue Cases Increse in Bengaluru - BBMP Takes Precaution Measures

ಸೌತ್ ವಲಯ - 170 ಪ್ರಕರಣ

ಪಶ್ಚಿಮ ವಲಯ - 162 ಪ್ರಕರಣ

ಯಲಹಂಕ ವಲಯ - 202 ಪ್ರಕರಣ

ಬೆಂಗಳೂರಿನ ಬೊಮ್ಮನಹಳ್ಳಿ ವಲಯ - 104 ಪ್ರಕರಣ, ದಾಸರಹಳ್ಳಿ ವಲಯ - 38 ಪ್ರಕರಣ, ಪೂರ್ವ ವಲಯ - 653 ಪ್ರಕರಣ, ಮಹದೇವಪುರ ವಲಯ - 342 ಪ್ರಕರಣ, ಆರ್.ಆರ್.ನಗರ ವಲಯ - 122 ಪ್ರಕರಣ, ದಕ್ಷಿಣ ವಲಯ - 170 ಪ್ರಕರಣ, ಪಶ್ಚಿಮ ವಲಯ - 162 ಪ್ರಕರಣ, ಯಲಹಂಕ ವಲಯ - 202 ಪ್ರಕರಣಗಳು ದಾಖಲಾಗಿವೆ.

Dengue Cases Increse in Bengaluru - BBMP Takes Precaution Measures

ಡೆಂಗ್ಯೂ ತಡೆಗಟ್ಟಲು ತ್ರಿಲೋಕ ಸೂತ್ರ

ಡೆಂಗ್ಯು ಕೇಸ್‌ಗಳನ್ನ ತಡೆಗಟ್ಟುವ ಸಲುವಾಗಿ ಬಿಬಿಎಂಪಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, 8 ವಲಯದ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ಬಿಬಿಎಂಪಿ ಸೂಚನೆ ನೀಡಿದೆ. ಅದ್ರಲ್ಲಿ ಆಯಾ ವಲಯಗಳ ಅಧಿಕಾರಿಗಳು ಶಾಲಾ ಕಾಲೇಜುಗಳ‌ ಬಳಿ ನಿಗಾ ಇಡಬೇಕು. ಶಾಲಾ- ಕಾಲೇಜಿಗಳ ಬಳಿ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಆರೋಗ್ಯ ಸಿಬ್ಬಂದಿಗಳು ಆಗಾಗ ಶಾಲೆಗಳ‌ ಬಳಿ ಪರಿಶೀಲನೆ ಮಾಡಿ ಶಾಲೆಗಳ ಸುತ್ತಾ- ಮುತ್ತಾ ಲಾರ್ವಿಸೈಡ್ ಹಾಗೂ ಫಾಗ್ ಸಿಂಪಡಣೆ ಮಾಡಬೇಕು. ವಲಯ ಮಟ್ಟದಲ್ಲಿ ಡೋರ್ ಟು ಡೋರ್ ಸರ್ವೆ ಮಾಡಿ ಸೊಳ್ಳೆ ಕಡಿತದಿಂದ ಅನಾರೋಗ್ಯದ ಸಮಸ್ಯೆ ಉಂಟಾದ್ರೆ ವೈದ್ಯರ ಬಳಿ ತೋರಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯು ಟೆಸ್ಟಿಂಗ್‌ಗಳನ್ನ ಹೆಚ್ಚಳ‌‌ ಮಾಡಬೇಕು ಅಂತ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸೂಚನೆ ನೀಡಿದ್ದಾರೆ.

ಜನರು ಕೊರೋನಾ ಕಡಿಮೆಯಾಯ್ತು ಎಂದು ನಿಟ್ಟುಸಿರುವ ಬಿಡುವ ಸಮಯದಲ್ಲೇ, ಡೆಂಗ್ಯು ಕೇಸ್ ಗಳು ಏರಿಕೆಯಾಗಿರುವುದು ಹೆಚ್ಚು ಆತಂಕ ಮೂಡಿಸುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಮನೆಯ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ನಿಗಾವಹಿಸಬೇಕಾಗಿದೆ.

English summary
The number of dengue cases in Bengaluru is on the rise. The BBMP is taking precautionary measures to control dengue. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X