• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗಾಗಿ ಇತರ ರೈಲುಗಳ ವಿಳಂಬ: ಪ್ರಯಾಣಿಕರ ಆಕ್ರೋಶ

|
Google Oneindia Kannada News

ಬೆಂಗಳೂರು, ನವೆಂಬರ್‌ 21: ಇತ್ತೀಚೆಗೆ ಚೆನ್ನೈ ಹಾಗೂ ಮೈಸೂರಿಗೆ ಸಂಪರ್ಕ ಕಲ್ಪಿಸುವ ದಕ್ಷಿಣ ಭಾರತದ ಮೊದಲ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಓಡಾಟದಿಂದ ಸ್ಥಳೀಯವಾಗಿ ಓಡಾಡುವ ರೈಲುಗಳಿಗೆ ವಿಳಂಬ ಉಂಟಾಗುತ್ತಿದ್ದು ಇದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ನವೆಂಬರ್‌ 11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡಿದ್ದ ಈ ರೈಲು ಚಲಿಸುವ ವೇಳೆ ಕ್ರಾಸಿಂಗ್‌ಗಾಗಿ ಇತರೆ ರೈಲುಗಳ ವಿಳಂಬದಿಂದ ಸಾರ್ವಜನಿಕರು ತಾವು ಸರಿಯಾದ ಸಮಯಕ್ಕೆ ಸೇರಬೇಕಾದ ಸ್ಥಳವನ್ನು ತಲುಪಲಾಗದೆ ಪರಡಾಡುತ್ತಿದ್ದಾರೆ.

Vande Bharat; ಹುಬ್ಬಳ್ಳಿ, ಬೆಂಗಳೂರು ನಡುವೆ ಮಾರ್ಚ್‌ನಲ್ಲಿ ಸಂಚಾರVande Bharat; ಹುಬ್ಬಳ್ಳಿ, ಬೆಂಗಳೂರು ನಡುವೆ ಮಾರ್ಚ್‌ನಲ್ಲಿ ಸಂಚಾರ

ಮೆಮು ರೈಲುಗಳಲ್ಲಿ ಚಲಿಸುವ ಸ್ಥಳೀಯ ಪ್ರಯಾಣಿಕರು ಸೇರಿದಂತೆ ಬೆಂಗಳೂರು ಪ್ರಯಾಣಿಕರು ತಮ್ಮ ರೈಲುಗಳು ಬೆಳಗ್ಗೆ 9.30ರಿಂದ 10ರವರೆಗೆ ವೈಟ್‌ಫೀಲ್ಡ್‌ ನಿಲ್ದಾಣದಲ್ಲಿ ನಿಲ್ಲುವುದರಿಂದ 30 ನಿಮಿಷ ಪ್ರಯಾಣಿಕರಿಗೆ ವಿಳಂಬವಾಗುತ್ತಿದೆ ಎಂದು ಅವರು ದೂರಿದ್ದಾರೆ. 9.30 ಸ್ಥಳೀಯರು ಕೆಲಸಕ್ಕೆ ಹೋಗುವ ಸಮಯವಾದ್ದರಿಂದ ವಂದೇ ಭಾರತ್‌ ನಂತರ ಶತಾಬ್ದಿ ಕೂಡ ವೈಟ್‌ಫೀಲ್ಡ್‌ ನಿಲ್ದಾಣವನ್ನು ದಾಟುತ್ತದೆ. ಈ ಹೈ ಸ್ಪೀಡ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ದಾರಿ ಮಾಡಿಕೊಡಲು ಸ್ಥಳೀಯ ರೈಲುಗಳ ನಿಲುಗಡೆಯಿಂದ ವಿಶೇಷವಾಗಿ ನೌಕರ ವರ್ಗದವರಿಗೆ ಹೆಚ್ಚಿನ ಅನಾನೂಕೂಲತೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲು ಬೆಂಗಳೂರಿನಿಂದ ಬೆಳಗ್ಗೆ 10.20ರ ಸುಮಾರಿಗೆ ಹೊರಟ ನಂತರ ಮೈಸೂರಿನಿಂದ ಬೆಂಗಳೂರಿಗೆ ಓಡಾಡುವ ಪ್ರಯಾಣಿಕರಿಗೆ ವಿಶೇಷವಾಗಿ ರಾಮನಗರ ಹಾಗೂ ಚನ್ನಪಟ್ಟಣದಂತಹ ನಿಲ್ದಾಣಗಳಲ್ಲಿ ರೈಲು ಕ್ರಾಸಿಂಗ್‌ ಪರಿಣಾಮ ವಿಳಂಬ ಉಂಟಾಗುತ್ತಿದ್ದು ಅವರ ಓಡಾಟಕ್ಕೆ ತಡವಾಗುತ್ತಿದೆ ಎಂದು ದೂರುಗಳು ಕೇಳಿ ಬಂದಿವೆ.

ದಕ್ಷಿಣ ಭಾರತದ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಶೀಘ್ರ ಚಾಲನೆದಕ್ಷಿಣ ಭಾರತದ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಶೀಘ್ರ ಚಾಲನೆ

ವಂದೇ ಭಾರತ್‌ ಕ್ರಾಸಿಂಗ್‌ಗಾಗಿ ನಮಗೆ ವಿಳಂಬ

ವಂದೇ ಭಾರತ್‌ ಕ್ರಾಸಿಂಗ್‌ಗಾಗಿ ನಮಗೆ ವಿಳಂಬ

ವೈಟ್‌ಫೀಲ್ಡ್‌ನಿಂದ ಬೆಂಗಳೂರು ಪೂರ್ವಕ್ಕೆ ಮೆಮು ರೈಲಿನಲ್ಲಿ ಪ್ರಯಾಣಿಸುವ ಬೆಂಗಳೂರು ಕಾಲೇಜೊಂದರ ಡೀನ್‌ ಆಗಿರುವ ಸಾಯಿ ಪ್ರಸಾದ್‌ ಅವರು, "ನಾನು ವೈಟ್‌ಫೀಲ್ಡ್‌ನಿಂದ ಬೆಳಗ್ಗೆ 9.30ಕ್ಕೆ ರೈಲನ್ನು ಹತ್ತುತ್ತೇನೆ. ಆದರೆ ರೈಲು ಇಲ್ಲಿ 30 ನಿಮಿಷಗಳ ಕಾಲ ನಿಂತು ಬಿಡುತ್ತದೆ. ಕಾರಣ ಶತಾಬ್ದಿ ರೈಲು ಹೊರಟ ನಂತರ ವಂದೇ ಭಾರತ್ ರೈಲು ಇಲ್ಲಿ ಸಂಚರಿಸುವುದರಿಂದ ಅದರ ಕ್ರಾಸಿಂಗ್‌ಗಾಗಿ ನಮಗೆ ವಿಳಂಬವಾಗುತ್ತಿದೆ. ಈ ಎರಡು ಹೈ ಸ್ಪೀಡ್‌ ರೈಲುಗಳ ಕ್ರಾಸಿಂಗ್‌ನಿಂದಾಗಿ ಬೆಂಗಳೂರು ಪೂರ್ವ ಭಾಗಕ್ಕೆ ಚಲಿಸುವ ನಾನು 45 ನಿಮಿಷಗಳಲ್ಲಿ ತಲುಪಬೇಕಾದವನಿಗೆ 30 ನಿಮಿಷಗಳ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಯಾಣಿಕರ ಕೆಲಸದ ಮೇಲೆ ಪರಿಣಾಮ

ಪ್ರಯಾಣಿಕರ ಕೆಲಸದ ಮೇಲೆ ಪರಿಣಾಮ

ಸಾಮಾನ್ಯವಾಗಿ ಈ ಮಾರ್ಗದಲ್ಲಿ ಬಹಳಷ್ಟು ಕೆಲಸ ಮಾಡುವ ವೃತ್ತಿಪರರು, ಉದ್ಯೋಗಿಗಳು ಕುಪ್ಪಂ, ಬಂಗಾರಪೇಟೆ ಹಾಗೂ ಮಾಲೂರಿನಿಂದ ಸ್ಥಳೀಯ ರೈಲುಗಳನ್ನು ಮುಂಜಾನೆ ಹತ್ತುತ್ತಾರೆ. ಆದರೆ ಕೊನೆಯಲ್ಲಿ ಅವರಿಗೆ ವೈಟ್‌ಫೀಲ್ಡ್‌ನಲ್ಲಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಈ ಶರವೇಗದ ರೈಲುಗಳ ಓಡಾಟದಿಂದ ಸ್ಥಳೀಯವಾಗಿ ಓಡಾಡುವ ರೈಲಿನ ಪ್ರಯಾಣಿಕರಿಗೆ ಅವರ ಸಮಯ ವಿಳಂಬವಾಗಿ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ಅದರಿಂದ ವಂದೇ ಭಾರತ್‌ ರೈಲಿನ ಸಮಯವನ್ನು ಬದಲು ಮಾಡುವಂತೆ ನಾನು ರೈಲ್ವೆ ಅಧಿಕಾರಿಗಳಿಗೆ ವಿನಂತಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

30 ನಿಮಿಷ ದಿನನಿತ್ಯ ತಡ

30 ನಿಮಿಷ ದಿನನಿತ್ಯ ತಡ

ಮಂಡ್ಯದಿಂದ ಸೂಪರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಓಡಾಡುವ ಮತ್ತೊಬ್ಬ ವೃತ್ತಿಪರ ಶಿವಕುಮಾರ್‌ ಅವರು, "ಈ ರೈಲು ಚನ್ನಪಟ್ಟಣದಲ್ಲಿ ಕನಿಷ್ಠ 20 ನಿಮಿಷ ನಿಲ್ಲುತ್ತದೆ. ಇದು ಪ್ರಯಾಣಿಕರಿಗೆ ಹೆಚ್ಚಿನ ಅನಾನೂಕೂಲತೆಯನ್ನು ಉಂಟು ಮಾಡುತ್ತಿದೆ. ಮೈಸೂರು ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ಚನ್ನಪಟ್ಟಣದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ದಾರಿ ಮಾಡಿಕೊಡಲು 20 ನಿಮಿಷಗಳ ಕಾಲ ನಿಲ್ಲುತ್ತದೆ. ಇದರಿಂದ ನಾನು ಬೆಂಗಳೂರು ತಲುಪುವಾಗ ನನಗೆ 30 ನಿಮಿಷ ದಿನನಿತ್ಯ ತಡವಾಗುತ್ತಿದೆ ಎಂದು ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ರೈಲು ಕ್ರಾಸಿಂಗ್‌ಗಾಗಿ ಇಲ್ಲಿ ನಿಲ್ಲುತ್ತದೆ

ರೈಲು ಕ್ರಾಸಿಂಗ್‌ಗಾಗಿ ಇಲ್ಲಿ ನಿಲ್ಲುತ್ತದೆ

ಬೆಂಗಳೂರಿನಿಂದ ರಾಮನಗರಕ್ಕೆ ಕಾವೇರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಪ್ರಾಧ್ಯಾಪಕ ಅಪ್ಸರ್‌ ಪಾಷಾ ಮಾತನಾಡಿ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಿಂದ ಅನುಕೂಲಕ್ಕಿಂತ ಹೆಚ್ಚಾಗಿ ತೊಂದರೆ ಉಂಟಾಗುತ್ತಿದೆ. ಕಾವೇರಿ ಎಕ್ಸ್‌ಪ್ರೆಸ್‌ ರೈಲು ಕೆಂಗೇರಿಯಲ್ಲಿ ಬೆಳಗ್ಗೆ 10ರಿಂದ 10.15ರವರೆಗೆ 20 ನಿಮಿಷಗಳ ಕಾಲ ನಿಲ್ಲುತ್ತದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಕ್ರಾಸಿಂಗ್‌ಗಾಗಿ ಇಲ್ಲಿ ನಿಲ್ಲುತ್ತದೆ. ಮೊದಲು ಕಾವೇರಿ ಎಕ್ಸ್‌ಪ್ರೆಸ್ ರೈಲು ಇಲ್ಲಿ ನಿಲ್ಲುತ್ತಿರಲಿಲ್ಲ. ಆದರೆ ವಂದೇ ಭಾರತ್‌ ಆರಂಭವಾದ ನಂತರ ಹೆಚ್ಚು ವಿಳಂಬವಾಗುತ್ತಿದೆ. ಮೊದಲೆಲ್ಲಾ ಬೆಳಗ್ಗೆ 9 ಗಂಟೆಗೆ ರೈಲು ಹತ್ತಿ 10.30ಕ್ಕೆ ಬೆಂಗಳೂರು ತಲುಪುತ್ತಿದ್ದೆ. ಈ 11 ಗಂಟೆಗೆ ತಲುಪುತ್ತಿದ್ದೇನೆ. ಇದರಿಂದ ಕಳೆದ ವಾರದಲ್ಲಿ ನಾನು ಮಾಡಬೇಕಾದ ಕೆಲವು ತರಗತಿಗಳನ್ನು ಕಳೆದುಕೊಂಡಿದ್ದೇನೆ ಎಂದರು.

ಹೈಸ್ಪೀಡ್‌ ರೈಲುಗಳಿಗೆ ಆದ್ಯತೆ ನೀಡಲಾಗಿದೆ

ಹೈಸ್ಪೀಡ್‌ ರೈಲುಗಳಿಗೆ ಆದ್ಯತೆ ನೀಡಲಾಗಿದೆ

ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ರೈಲ್ವೆ ನಿಲ್ದಾಣದ ಅಧಿಕಾರಿಯೊಬ್ಬರು, "ನಿಮಗೆ ಆಗುತ್ತಿರುವ ವಿಳಂಬದ ಅನಾನೂಕೂಲತೆ ಅರ್ಥವಾಗುತ್ತದೆ. ವಂದೇ ಭಾರತ್‌ಗೆ ನಿರ್ದಿಷ್ಟ ಸ್ಥಳ ತಲುಪಲು ಸಮಯ ಹಾಗೂ ಗುರಿ ಇದೆ. ಆ ಸಮಯದಲ್ಲಿ ಅದು ಮುಂದುವರಿಯಲೇಬೇಕು. ಆದ್ದರಿಂದ ಈ ವೇಳೆ ಹೈಸ್ಪೀಡ್‌ ರೈಲುಗಳಿಗೆ ಆದ್ಯತೆ ನೀಡಲಾಗಿದೆ. ಇದೇ ವೇಳೆ ವಂದೇ ಭಾರತ್‌ ಸಂಚಾರದಿಂದ ಇತರೆ ರೈಲಿಗಳ ವಿಳಂಬದಿಂದ ಪರಿಣಾಮ ಉಂಟಾಗದಂತೆ ನಾವು ಗಮನಹರಿಸುತ್ತೇವೆ ಎಂದು ಹೇಳಿದ್ದಾರೆ.

English summary
Recently luanched the first train in South India the Vande Bharat Express to connect Chennai and Mysuru, has caused delays to local trains, which has caused outrage from the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X