ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಯೋಜನೆಗೆ ಸೇನೆಯ ಜಮೀನು: ಸಿಎಂ ಮಹತ್ವದ ಚರ್ಚೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 3: ಬೆಂಗಳೂರಿನ ನಾಗವಾರ ಮಾರ್ಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಕಾಮಗಾರಿ ವಿಸ್ತರಣೆ ವೇಳೆ ಭಾರತೀಯ ಸೇನೆಗೆ ಸೇರಿದ ಜಮೀನನ್ನು ವಶಪಡಿಸಿಕೊಳ್ಳುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಹತ್ವದ ಸಭೆ ನಡೆಸಿದರು.

ಆಗಸ್ಟ್ 4ರಂದು ಶನಿವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬೆಂಗಳೂರಿಗೆ ಭೇಟಿ ನೀಡಲಿದ್ದು ಈ ವೇಳೆ ನಮ್ಮ ಮೆಟ್ರೋಗೆ ಬೇಕಾಗುವ ಭೂಮಿಯನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರ ಕೋರಿಕೆ ಸಲ್ಲಿಸಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋಕ್ಕೆ ಬೇಕಾಗುವ ಜಮೀನಿನ ವಿವರ, ನಕಾಶೆ ಹಾಗೂ ಯೋಜನಾ ವೆಚ್ಚದ ವಿವರಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ: ಸಾರ್ವಜನಿಕರಿಂದ ಥಳಿತಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ: ಸಾರ್ವಜನಿಕರಿಂದ ಥಳಿತ

ಬೆಂಗಳೂರು ಮೆಟ್ರೋ ಯೋಜನೆಗೆ ಭೂಮಿ ಸಿಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಕ್ಷಣಾ ಇಲಾಖೆಯ ಭೂಮಿಯನ್ನು ಕೇಂದ್ರದಿಂದ ಕೇಳಲು ಮುಂದಾಗಿದ್ದು, ಈ ಕುರಿತು ಮೆಟ್ರೋ ನಿಗಮದ ಬಳಿ ಮಾಹಿತಿ ಕೇಳಿದೆ.

Defence land for metro project: State to ask defence minister

ರಕ್ಷಣಾ ಇಲಾಖೆಯ ಜಮೀನು ಎಲ್ಲೆಲ್ಲಿ ಎಷ್ಟು ಜಮೀನು ಬೇಕು ಎಂದು ವರದಿ ನೀಡಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ.

English summary
Chief minister H.D.Kumaraswamy has held a meeting with officials regarding requirement of defense land for metro project and the state will submit proposal to defense minister Nirmala Seetharaman on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X