ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆರೆ ರಾಜ್ಯಗಳ ಪೊಲೀಸ್ ಬಾಂಧವ್ಯದಿಂದ ಪರಸ್ಪರ ಅಭಿವೃದ್ಧಿ: ಪರಂ

|
Google Oneindia Kannada News

ಬೆಂಗಳೂರು, ಸೆ.28: ಪ್ರಾಂತೀಯ ರಾಜ್ಯಗಳಲ್ಲಿ ಸಮನ್ವಯತೆ ಹಾಗೂ ಹೊಸ ಸಿಸ್ಟಮ್‌ಗಳ ಕುರಿತು ಪರಸ್ಪರ ಮಾಹಿತಿ ವಿನಿನಯ ಮಾಡಿಕೊಳ್ಳುವ ಸಂಬಂಧ ದಕ್ಷಿಣ ರಾಜ್ಯಗಳ ಡಿಜಿ, ಐಜಿ ಸಭೆಗಳು ನಡೆಯುವ ಅಗತ್ಯವಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ! ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ!

ಖಾಸಗಿ ಹೋಟೆಲ್ ನಲ್ಲಿ ನಡೆದ ದಕ್ಷಿಣ ರಾಜ್ಯಗಳ ಡಿಜಿಪಿ ಹಾಗೂ ಐಜಿಗಳ ಪ್ರಾಂತೀಯ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ

ದಕ್ಷಿಣ ಭಾಗದ ಐದು ರಾಜ್ಯಗಳ ಪೊಲೀಸ್ ಇಲಾಖೆಗಳು ಆಗಾಗ ಇಂಥ ಸಭೆ ನಡೆಸುವುದರಿಂದ ಅಪರಾಧ ಪ್ರಮಾಣ ಕಡಿಮೆ ಮಾಡಲು ಪರಸ್ಪರ ಸಹಕಾರ, ಅತ್ಯಾಧುನಿಕ ತಂತ್ರಜ್ಞಾನಗಳ ಮಾಹಿತಿ ಹಂಚಿಕೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೂತನ ಪ್ರಯೋಗಗಳ ಮಾಹಿತಿಯನ್ನು ಎಲ್ಲ ರಾಜ್ಯಗಳ ಡಿಜಿಗಳು ಒಂದೆಡೆ ಸಭೆ ನಡೆಸಿ ವಿನಿಮಯ ಮಾಡಿಕೊಳ್ಳುವುದರಿಂದ ಸಮರ್ಪಕವಾಗಿ ಪೊಲೀಸ್‌ ಇಲಾಖೆ ಕೆಲಸ ಮಾಡಲು ಸಾಧ್ಯವಾಗಲಿದೆ. ಇದರ ಪ್ರಾರಂಭವನ್ನು ಕರ್ನಾಟಕ ಪೊಲೀಸ್ ಇಲಾಖೆ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.

DCM says coordination between neighboring states needed to improving policing

ಈ ಇಂಟರ್ ನೆಟ್‌ ಯುಗದಲ್ಲಿ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿವೆ. ಇದನ್ನು ನಿಯಂತ್ರಿಸಲು ಅತ್ಯಾಧುನಿಕ ಟೆಕ್ನಾಲಜಿ ಬಳಸಿಕೊಳ್ಳಬೇಕಿದೆ. ರಾತ್ರಿ ಬೀಟ್ ತೆರಳುವ ಕಾನ್‌ಸ್ಟೆಬಲ್ ಗಳು ಪುಸ್ತಕದಲ್ಲಿ ಸಹಿ ಹಾಕಿ ಹೊರಡುತ್ತಾರೆ. ಆದರೆ, ಫೀಲ್ಡ್ ನಲ್ಲಿ ಇವರ ಇರುವಿಕೆಯನ್ನು ತೋರ್ಪಡಿಸುವ ಟೆಕ್ನಾಲಜಿಯನ್ನು ತರಬೇಕಿದೆ ಎಂದು ಸಲಹೆ ನೀಡಿದರು.

English summary
Deputy chief minister Dr.G.Parameshwar had said better coordination between neighbor states police will help to improve each other and DGPs of respective states should have interaction often.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X