ಕೇಬಲ್ ಮಾಫಿಯಾ ಮೇಲೆ ಡಿಸಿಎಂ ಕೆಂಗಣ್ಣು: ಬಿಬಿಎಂಪಿ-ಪೊಲೀಸ್ ಜಂಟಿ ಕ್ರಮ
ಬೆಂಗಳೂರು, ಜು.27: ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್ ಹಾಗೂಕೇಬಲ್‌ಗಳ ತೆರವುಗೊಳಿಸಲು ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ನೋಡಲ್ ಅಧಿಕಾರಿ ನೇಮಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪ್ರತಿಯೊಂದಕ್ಕೂ ಆಯುಕ್ತರ ಬಳಿ ಬಂದು ವಿಚಾರಗಳೆಲ್ಲವನ್ನೂ ತಿಳಿಸಿ ಕ್ರಮ ಕೈಗೊಳ್ಳುವುದರಿಂದ ವಿಳಂಬವಾಗಲಿದೆ. ಹಾಗಾಗಿ ಆಯಾ ವಲಯಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿದರೆ ಅನಧಿಕೃತ ಕೇಬಲ್ ತೆರವು ಮತ್ತು ಫ್ಲೆಕ್ಸ್ ತೆರವು ಬಗ್ಗೆ ತುರ್ತಾಗಿ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ವಿರುದ್ಧ ಸಮರ ಸಾರಿರುವ ಬಿಬಿಎಂಪಿ, ಇದುವರೆಗೆ 8,300 ಕಿ.ಮೀ ಉದ್ದದಷ್ಟು ಕೇಬಲ್‌ನ್ನು ತೆರವುಗೊಳಿಸಿದೆ. ಪಾಲಿಕೆ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿರುವ ಅನಧಿಕೃತ ಕೇಬಲ್ ಮಾಫಿಯಾ ಜಿ ಪರಮೇಶ್ವರ್ ಅವರು ಕಟ್ಟು ನಿಟ್ಟಿನ ಆದೇಶ ನೀಡಿದ್ದರು.

ಅನುಮತಿ ಪಡೆಯದೆ ಎಲ್ಲೆಂದರಲ್ಲಿ ಕೇಬಲ್‌ಗಳನ್ನು ಹಾಕಿರುವ ಕಂಪನಿಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಪಾಲಿಕೆಯ ಕಾರ್ಯಾಚರಣೆಯಿಂದ ಬೆಚ್ಚಿ ಬಿದ್ದಿರುವ ಕೇಬಲ್ ಸೇವಾ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಮುಂದಿಟ್ಟು ತೆರವು ಕಾರ್ಯ ನಿಲ್ಲಿಸಲು ಬಿಬಿಎಂಪಿ ಮೇಲೆ ಒತ್ತಡ ತರುತ್ತಿವೆ. ಆದರೆ ಇದಕ್ಕೆ ತಲೆಕಡೆಸಿಕೊಳ್ಳದ ಡಿಸಿಎಂ ಕಾರ್ಯಾಚರಣೆ ತೀವ್ರಗೊಳಿಸುವಂತೆ ತಿಳಿಸಿದ್ದಾರೆ.












Click it and Unblock the Notifications