ಗೌರಿ ಹತ್ಯೆಯಲ್ಲಿ ಸನಾತನ ಸಂಸ್ಥೆ ಕೈವಾಡ ಸಾಬೀತಾಗಿಲ್ಲ: ಪರಂ
ಬೆಂಗಳೂರು, ಆಗಸ್ಟ್ 8: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪರಕರಣದಲ್ಲಿ ಸನಾತನ ಸಂಸ್ಥೆಯ ಕೈವಾಡ ಸಾಬೀಥಾಗಿಲ್ಲ, ಒಂದೊಮ್ಮೆ ಸಾಬೋತಾದರೆ ಬ್ಯಾನ್ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ.
ದೇಶಕ್ಕೆ ಆಪತ್ತು ತರುವ ಸಂಘಟನೆಗಳ ಮೇಲೆ ನಿರಂತರವಾಗಿ ನಿಗಾ ಇಡಲಾಗುತ್ತಿದೆ. ಆದರೆ ಸನಾತನ ಸಂಸ್ಥೆ ಭಾಗಿಯಾಗಿರುವ ಕುರಿತು ಇದುವರೆಗೂ ಖಚಿತವಾಗಿಲ್ಲ ಒಂದೊಮ್ಮೆ ಭಾಗಿಯಾಗಿರುವ ಕುರಿತು ಖಚಿತ ಮಾಹಿತಿ ದೊರೆತರೆ ಖಂಡಿತವಾಗಿ ಸಂಸ್ಥೆಯನ್ನು ಮುಚ್ಚಲಾಗುತ್ತದೆ ಎಂದು ಹೇಳಿದರು.
ಶಾಸಕರ ಅಕ್ಕ ಸಮ್ಮೇಳನ ಪ್ರವಾಸದಿಂದ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ, ಆಗಸ್ಟ್ 31ರಂದು ಸ್ಥಳೀಯ ಸಂರ್ಸಥೆ ಚುನಾವಣೆ ನಡೆಯಲಿದೆ, ಇದಾದ ಬಳಿಕ ಸಮನ್ವಯ ಸಮಿತಿ ಸಭೆ ನಡೆಯಲಿದೆ.

ಸರ್ಕಾರ ಪತನಕ್ಕೆ ಬಿಎಸ್ ವೈ ಡೆಡ್ ಲೈನ್ ನೀಡಿರುವ ವಿಚಾರ ಕುರಿತು ಮಾತನಾಡಿರುವ ಅವರು ನೋಡೋಣ ಶ್ರಾವಣ ಬಳಿಕ ಭಾದ್ರಪದ ನಂತರ ಕಾರ್ತಿಕ ಮಾಸ ಕೂಡ ಬರುತ್ತದೆ, ಲೋಕಸಭೆ ಚುನಾವಣೆಗೆ ಪಕ್ಷ ಮತ್ತು ನಾಯಕರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಕಾಂಗ್ರೆಸ್ ಸಭೆ ಸೆ.1,2ರಂದು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯಲಿದೆ. ಸಚಿವರ ಮೌಲ್ಯಮಾಪನ ಈಗಾಗಲೇ ಆತಂಕರಿಕವಾಗಿ ನಡೆಯುತ್ತಿದೆ ಎಂದು ತಿಳಿಸಿದರು.











Click it and Unblock the Notifications