ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾಸರಹಳ್ಳಿ: ಅತ್ಯಾಧುನಿಕ 'ನ್ಯೂಬರ್ಗ್' ಲ್ಯಾಬ್ ಉದ್ಘಾಟಿಸಿದ ಮುನಿರಾಜು

|
Google Oneindia Kannada News

ಬೆಂಗಳೂರು, ಜೂನ್ 7, 2019: ಪ್ರತಿಯೊಬ್ಬರು 30 ರ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮುಂದೆ ಆಗುವ ಬಹಳಷ್ಟು ಆರೋಗ್ಯ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದು ಆನಂದ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಟೆಕ್ನಿಕಲ್ ಡೈರೆಕ್ಟರ್ ಡಾ ಸುಜಯ ಪ್ರಸಾದ್ ಹೇಳಿದರು.

ನಗರದ ದಾಸರಹಳ್ಳಿಯಲ್ಲಿರುವ ಪೀಪಲ್ ಟ್ರೀ ಅಟ್ ರಾಘವೇಂದ್ರ ಆಸ್ಪತ್ರೆಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಆನಂದ್ ಡಯಾಗ್ನೋಸ್ಟಿಲ್ ಲ್ಯಾಬೊರೇಟರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 30ನೇ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

ಇದರಿಂದಾಗಿ ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರೆ ಅರೋಗ್ಯ ಸಮಸ್ಯೆಗಳ ಬಗ್ಗೆ ಮುತುವರ್ಜಿ ವಹಿಸಬಹುದು. ಅಲ್ಲದೆ, ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುವ ಸಮಯದಲ್ಲೇ ಅವುಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗದಂತೆ ಕಾಪಾಡಬಹುದಾಗಿದೆ ಎಂದರು.

ಆನಂದ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಯಂತ್ರೋಪಕರಣಗಳಿದ್ದು, ನಿಖರವಾದ ಫಲಿತಾಂಶವನ್ನು ನೀಡುತ್ತವೆ. ಅಲ್ಲದೆ ನಮ್ಮ ನುರಿತ ವೈದ್ಯರು ಹಾಗೂ ತಜ್ಞರು ನಿಖರವಾದ ಫಲಿತಾಂಶ ನೀಡುತ್ತಾರೆ ಎಂದು ಹೇಳಿದರು. ಆನಂದ್ ಡಯಾಗ್ನಾಸ್ಟಿಕ್ ಲ್ಯಾಬೊರೇಟರಿಯು ಕರ್ನಾಟಕದ 35 ಸ್ಥಳಗಳಲ್ಲಿ ವಿವಿಧ ಲ್ಯಾಬೊರೇಟರಿ ಮತ್ತು ಕ್ಲಿನಿಕಲ್ & ಇಮೇಜಿಂಗ್ ಸೇವೆಗಳನ್ನು ನೀಡುತ್ತಾ ಬರುತ್ತಿದೆ.

ದಾಸರಹಳ್ಳಿ ಮಾಜಿ ಶಾಸಕ ಎಸ್ ಮುನಿರಾಜು ಮಾತನಾಡಿ

ದಾಸರಹಳ್ಳಿ ಮಾಜಿ ಶಾಸಕ ಎಸ್ ಮುನಿರಾಜು ಮಾತನಾಡಿ

ದಾಸರಹಳ್ಳಿ ಮಾಜಿ ಶಾಸಕ ಎಸ್ ಮುನಿರಾಜು ಮಾತನಾಡಿ, ಆನಂದ್ ಡಯಾಗ್ನೋಸ್ಟಿಕ್ ಲ್ಯಾಬ್ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದೆ. ಈ ಭಾಗದ ಜನರು ಉತ್ತಮ ಸೇವೆಯನ್ನು ಪಡೆಯಲು ಅನುಕೂಲವಾಗುವಂತಹ ಪರಿಸರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪೀಪಲ್ ಟ್ರೀ ಅಟ್ ರಾಘವೆಂದ್ರ ಆಸ್ಪತ್ರೆಯ ಸಿಇಓ ಡಾ ಚಂದ್ರಶೇಖರ್, ಸಿಓಓ ಡಾ ಸಂದೀಪ್ ಡಿಸೋಜಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಎಡಿಎಲ್ ಕುರಿತು

ಎಡಿಎಲ್ ಕುರಿತು

ಡಾ.ಎ.ವಿ. ರಾಮಪ್ರಸಾದ್ ಅವರು 4 ದಶಕಗಳ ಹಿಂದೆ ಬೆಂಗಳೂರಿನ ಶಿವಾಜಿನಗರದಲ್ಲಿ ಡಯಾಗ್ನಾಸ್ಟಿಕ್ ಲ್ಯಾಬೊರೇಟರಿಯನ್ನು ಆರಂಭಿಸಿದ್ದರು. ಯಾವುದೇ ಒಂದು ವೈದ್ಯಕೀಯ ಪರೀಕ್ಷೆಗೆ ಲ್ಯಾಬೊರೇಟರಿ ಪರೀಕ್ಷೆಗಳಿಗೆ ಪ್ರಾಥಮಿಕ ಡಯಾಗ್ನಾಸ್ಟಿಕ್ ಮೂಲವಾಗಿರುತ್ತದೆ. 1974 ರಲ್ಲಿ ಎಲ್ಲರಿಗೂ ಗುಣಮಟ್ಟದ ಆರೋಗ್ಯರಕ್ಷಣೆ ಮಾಡುವ ಉದ್ದೇಶದಿಂದ ಈ ಆನಂದ್ ಡಯಾಗ್ನಾಸ್ಟಿಕ್ ಲ್ಯಾಬೊರೇಟರಿಯನ್ನು ಆರಂಭಿಸಲಾಯಿತು.

ಸೌಲಭ್ಯಗಳನ್ನು ಹೊಂದಿರುವ ಲ್ಯಾಬ್‍

ಸೌಲಭ್ಯಗಳನ್ನು ಹೊಂದಿರುವ ಲ್ಯಾಬ್‍

ಇಂದು, ಆನಂದ್ ಲ್ಯಾಬ್ ದೇಶದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಮತ್ತು ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಹೊಂದಿರುವ ಲ್ಯಾಬ್‍ಗಳಲ್ಲಿ ಒಂದೆನಿಸಿದೆ. ಇಲ್ಲಿ ಇತ್ತೀಚಿನ ಡಯಾಗ್ನಾಸ್ಟಿಕ್ ಮೆಡಿಸಿನ್, ನಿಖರವಾದ ಡಯಾಗ್ನಾಸಿಸ್ ಮತ್ತು ಚಿಕಿತ್ಸೆಗೆ ಪೂರಕವಾದ ರಿಪೋರ್ಟ್‍ಗಳನ್ನು ನೀಡಲಾಗುತ್ತದೆ. ಈ ಮೂಲಕ ಸಾರ್ವಜನಿಕರು ಮತ್ತು ಆಸ್ಪತ್ರೆಗಳ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದೆ.

ಲಾಜಿಸ್ಟಿಕ್ಸ್ ಜಾಲವನ್ನು ಹೊಂದಿರುವ ಲ್ಯಾಬ್

ಲಾಜಿಸ್ಟಿಕ್ಸ್ ಜಾಲವನ್ನು ಹೊಂದಿರುವ ಲ್ಯಾಬ್

ಆನಂದ್ ಡಯಾಗ್ನಾಸ್ಟಿಕ್ ಲ್ಯಾಬೊರೇಟರಿಯು ಹಲವಾರು ಮೊದಲುಗಳನ್ನು ಒಳಗೊಂಡಿದೆ. ದಕ್ಷಿಣ ಭಾರತದಲ್ಲಿ ಎನ್‍ಎಬಿಎಲ್ ಮಾನ್ಯತೆ ಪಡೆದ ಮೊದಲ ಲ್ಯಾಬ್ ಎನಿಸಿದೆ. 2017 ರಿಂದ ನ್ಯೂಬರ್ಗ್ ಡಯಾಗ್ನಾಸ್ಟಿಕ್ಸ್ ಸಹಯೋಗದಲ್ಲಿ ಆನಂದ್ ಡಯಾಗ್ನಾಸ್ಟಿಕ್ ಲ್ಯಾಬೊರೇಟರಿ-ನ್ಯೂಬರ್ಗ್ ಅಸೋಸಿಯೇಟ್ ಆಗಿದೆ. ಡಾ.ರಾಮಪ್ರಸಾದ್ ಅವರ ತತ್ತ್ವದಡಿ ಅತ್ಯುತ್ತಮವಾದ ಲಾಜಿಸ್ಟಿಕ್ಸ್ ಜಾಲವನ್ನು ಹೊಂದಿರುವ ಲ್ಯಾಬ್ ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಹೊಂದಿದೆ.

English summary
EX MLA of Dasarahalli S Muniraju Inaugurated new diagnostic laboratory at Raghavendra Peoples Tree Hospital Dasarahalli. Raghavendra Peoples Tree Hospital CEO Dr. Chandra Shekhar, COO Dr Sandeep Desoza & Anand Diagnostic Lab Technical Director Dr Sujay Prasad were present on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X