ಚಿತ್ರಕಲಾ ಪರಿಷತ್ತಿನಲ್ಲಿ ದಸರಾ ಹಬ್ಬದ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ

ಬೆಂಗಳೂರು, ಅಕ್ಟೋಬರ್‌ 06: ನಾಡ ಹಬ್ಬ ದಸರಾ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಅಕ್ಟೋಬರ್‌ 08 ರಿಂದ 10 ದಿನಗಳ ಕಾಲ ವಿಶೇಷ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಚಿತ್ತಾರ ಹಾಗೂ ಗ್ರಾಂಡ್‌ ಫ್ಲಿಯಾ ಮಾರ್ಕೆಟ್‌ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಮಾರಾಟ ಮೇಳದಲ್ಲಿ ದಸರಾ ಆಲಂಕಾರಕ್ಕೆ ಬೇಕಾಗಿರುವ ವಿಶೇಷ ಗೊಂಬೆಗಳು ಹಾಗೂ ಇನ್ನಿತರ ವಸ್ತುಗಳ ಒಂದೇ ವೇದಿಕೆಯ ಅಡಿಯಲ್ಲಿ ದೊರೆಯಲಿವೆ.

ಪ್ರತಿ ದಸರಾ ಸಂಧರ್ಭದಲ್ಲೂ ತಮ್ಮ ಬೊಂಬೆಗಳ ಸಂಗ್ರಹದಲ್ಲಿ ಹೊಸತನ ಕಾಪಾಡುವ ನಿಟ್ಟಿನಲ್ಲಿ ಗ್ರಾಹಕರು ಕೆಲವೊಂದು ಗೊಂಬೆಗಳನ್ನು ಖರೀದಿಸುವುದು ನಡೆದು ಬಂದಿರುವ ಸಂಪ್ರದಾಯ. ಇಂತಹ ಸಂಪ್ರದಾಯಕ್ಕೆ ಪುಷ್ಠಿ ಕೊಡುವ ನಿಟ್ಟಿನಲ್ಲಿ ಹಾಗೂ ದಸರಾ ಹಬ್ಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಿಗುವ ರೀತಿಯಲ್ಲಿ ಮಾಡುವ ದೃಷ್ಟಿಯಿಂದ ಅಕ್ಟೋಬರ್‌ 8 ರಿಂದ 17 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ‌ ಇಂಡಿಯನ್‌ ಆರ್ಟಿಸನ್ಸ್‌ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ದಸರಾ ಗೊಂಬೆಗಳು. ಈ ಬಾರಿ ಒಂದೇ ವೇದಿಕೆಯ ಅಡಿಯಲ್ಲಿ ಎಲ್ಲಾ ರೀತಿಯ ಹಾಗೂ ವಿಭಿನ್ನ ಆಯಾಮದ ಗೊಂಬೆಗಳನ್ನು ಖರೀದಿಸಬಹುದಾಗಿದೆ. ಇದರ ಜೊತೆಯಲ್ಲಿಯೇ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಇಲ್ಲಿ ಕೊಳ್ಳಬಹುದಾಗಿದೆ. ಅಲಂಕಾರಿಕ ವಸ್ತುಗಳ ಜೊತೆಯಲ್ಲಿಯೇ ಮನೆ ಮಂದಿಗೆ ಬೇಕಾಗಿರುವ ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ.

Dasara Dolls Highlight Of Indian Artisans Bazaar at Chitrakala Parishath

80 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ.

Dasara Dolls Highlight Of Indian Artisans Bazaar at Chitrakala Parishath

ಬೆಂಗಳೂರು ಉತ್ಸವ - ಯುಗಾದಿ ಶಾಪಿಂಗ್‌ ಕಾರ್ನಿವಲ್‌
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ (ಶಿವಾನಂದ ವೃತ್ತದ ಬಳಿ)
ದಿನಾಂಕ: ಅಕ್ಟೋಬರ್‌ 8 ರಿಂದ 17, 2020 ವರೆಗೆ
ಸಮಯ: ಬೆಳಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+