Darshan Fans Reaction: ಪವಿತ್ರ ಗೌಡ ಸಲುವಾಗಿ ಯಾವ ಹಂತ ಹೋಗಲೂ ಸಿದ್ದ ನಮ್ಮ ದರ್ಶನ್: ಹುಚ್ಚಾಟ ಮೆರೆಯುತ್ತಿರುವ ಅಭಿಮಾನಿಗಳು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿದೆ. ಸದಾ ವಿವಾದದಲ್ಲೇ ಇರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದ್ದು ಸಾಕಷ್ಟು ಅಭಿಮಾನಿಗಳು ಮನಬಂದಂತೆ ಕಾಮೆಂಟ್ ಮಾಡುತ್ತಿದ್ದಾರೆ.
ನಟ ದರ್ಶನ್ ಪ್ರೇಯಸಿ ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಿದ ಬಳಿಕ ಪವಿತ್ರಾ ಗೌಡ ಅವರನ್ನೂ ವಶಕ್ಕೆ ಪಡೆಯಲಾಗಿದೆ. ಆರ್‌ಆರ್ ನಗರ ಪೊಲೀಸರು ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಹೀಗಾಗಿ ದರ್ಶನ್ ಅವರ ಕೆಲ ಅಭಿಮಾನಿಗಳು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ''ಪವಿತ್ರ ಗೌಡ ಸಲುವಾಗಿ ಯಾವ ಹಂತ ಹೋಗಲೂ ಸಿದ್ದ ನಮ್ಮ ದರ್ಶನ್. He is the real 'ಪ್ರೇಮಿ'' ಎಂದು ಅಭಿಮಾನಿಗಳು ಹುಚ್ಚಾಟ ಮೆರೆಯುತ್ತಿದ್ದಾರೆ. ದರ್ಶನ್ ಅವರ ಮೇಲಿರುವ ಆರೋಪಕ್ಕೆ ಸಾಥ್ ನೀಡುವಂತೆ ಕೆಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಪವಿತ್ರ ಗೌಡ ಸಲುವಾಗಿ ಯಾವ ಹಂತ ಹೋಗಲೂ ಸಿದ್ದ ನಮ್ಮ ದರ್ಶನ್
— @ᴹᴿ ᴾᴿᴬᴰᴱᴱᴾ@ (@HBPradeepcreat1) June 11, 2024
He is the real 'ಪ್ರೇಮಿ'🙏 #Darshan * pic.twitter.com/Gl9qHiBP0r
ಮತ್ತೊಂದೆಡೆ ನಟ ಎನ್ನುವ ಕಾರಣಕ್ಕೆ ಎಲ್ಲಾ ತಪ್ಪುಗಳನ್ನು ಮಾಡಬಹುದು ಎಂದುಕೊಂಡಿದ್ದಾರೆ ಎಂದು ಜನ ಚೀಮಾರಿ ಹಾಕುತ್ತಿದ್ದಾರೆ. ದರ್ಶನ್ ಅವರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ಅವರು ಸಿನಿಮಾ ಮೂಲಕ ಖ್ಯಾತರಾಗುವುದು ಮಾತ್ರವಲ್ಲದೆ ವಿವಾದಿತ ನಟ ಎಂದು ಫೇಮಸ್ ಆಗಿದ್ದಾರೆ. ದರ್ಶನ್ ಅವರ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿ ಇಲ್ಲ. ಅವರು ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದಿಂದ ಹಿಡಿದು ನಾಲಿಗೆ ಹರಿಬಿಟ್ಟು ಮಾತನಾಡಿದ ಆರೋಪಗಳು ಅವರ ಮೇಲಿದೆ. ಈ ಹಿಂದೆ ಪವಿತ್ರಾ ಗೌಡ ಅವರ ವಿಚಾರದಲ್ಲೂ ದರ್ಶನ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೀಗ ಪವಿತ್ರಾ ಗೌಡ ವಿಚಾರಕ್ಕೆ ಕೊಲೆ ಕೂಡ ನಡೆದಿದೆ ಎನ್ನಲಾಗುತ್ತಿದೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವವರನ್ನು ಕೊಲೆ ಮಾಡಿಸಿದ್ದಾರೆ ಎನ್ನುವ ಆರೋಪ ದರ್ಶನ್ ಮೇಲಿದೆ. ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರ ಶವ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಮೋರಿಯೊಂದರಲ್ಲಿ ಪತ್ತೆಯಾಗಿದೆ.
ರೇಣುಕಾಸ್ವಾಮಿ ಕೊಲೆಯಾದ ಜಾಗ ಯಾವುದು?
ಜಯಣ್ಣ ಅವರಿಗೆ ಸಂಬಂಧಿಸಿದ ಶೆಡ್ ನಲ್ಲಿ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ. ಲೋನ್ ಕಟ್ಟಲು ಸಾಧ್ಯವಾಗದ ಕಾರು ಹಾಗೂ ಬೈಕ್‌ಗಳನ್ನು ಸ್ಟೋರೇಜ್ ಮಾಡುವ ಶೆಡ್ ಇದಾಗಿದೆ. ಐದು ಎಕರೆಯಲ್ಲಿ ಶೆಡ್ ನಿರ್ಮಾಣ ಮಾಡಲಾಗಿದೆ. ರೇಣುಕಾ ಸ್ವಾಮಿಯವರನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆನ್ನುವ ಆರೋಪವಿದೆ.
ಪವಿತ್ರಾ ಗೌಡ ಮೇಲೂ ಹಲ್ಲೆ ಮಾಡಿದ್ದ ದರ್ಶನ್
ರೇಣುಕಾಸ್ವಾಮಿ ಅವರ ಮೇಲೆ ಹಲ್ಲೆ ಮಾಡುವಾಗ ದರ್ಶನ್ ಹಾಗೂ ಪವಿತ್ರಾ ಗೌಡ ಕೂಡ ಸ್ಥಳದಲ್ಲಿ ಇದ್ದರು ಎನ್ನಲಾಗುತ್ತಿದೆ. ಹಲ್ಲೆ ಮಾಡಿದ ಬಳಿಕ ರೇಣುಕಾಸ್ವಾಮಿ ಅವರು ಸಾವನ್ನಪ್ಪಿದ್ದಾರೆ. ಇದರಿಂದ ಮತ್ತೆ ಪ್ಯಾನಿಕ್ ಆದ ದರ್ಶನ್ ಪವಿತ್ರಾ ಗೌಡ ಅವರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಗಾಯಗೊಂಡ ಪವಿತ್ರಾ ಗೌಡ ಆಸ್ಪತ್ರೆಗೆ ದಾಖಲಾಗಿ ನಿನ್ನೆಯಷ್ಟೇ ಆಕೆ ಡಿಸ್ಚಾರ್ಚ್ ಆಗಿರುವುದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ಬೋನ್ಸರ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ವಿನಯ್ ದರ್ಶನ್ ಆಪ್ತ
ಆರೋಪಿ ವಿನಯ್ ದರ್ಶನ್ ಆಪ್ತ ಎಂದು ತಿಳಿದು ಬಂದಿದೆ. ಇವರು ಹೋಟೇಲ್ ಉದ್ಯಮಿ ಆಗಿದ್ದಾರೆ. ಈತನಿಗೆ ಸಂಬಂಧಿಸಿದ ಶೆಡ್‌ನಲ್ಲಿ ಈ ಕೊಲೆ ನಡೆದಿದೆ ಎನನ್ಲಾಗುತ್ತಿದೆ. ಈತ ದರ್ಶನ್ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು ದರ್ಶನ್ ಅವರೊಂದಿಗೆ ಫೋಟೋಗಳು ವೈರಲ್ ಆಗಿವೆ.
-
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications