ಮಿತಿ ಮೀರಿತು ದರ್ಶನ್ ಅಭಿಮಾನಿಗಳ ಹುಚ್ಚಾಟ; ಏನು ಅರಿಯದ ಕಂದಮ್ಮಗೆ ಬೇಕಿತ್ತಾ ಈ ಡ್ರೆಸ್
ಮಕ್ಕಳಿಗೆ ಪಾಲಕರು ವಿವಿಧ ಪೋಷಾಕಗಳನ್ನು ಹಾಕಿ ಖುಷಿ ಪಟ್ಟಿದ್ದನ್ನು ನೋಡಿದ್ದೇವೆ. ಅಷ್ಟೇ ಏಕೆ ಶಾಲೆಯಲ್ಲೂ ಫ್ಯಾಶನ್ ಡೇ ಇದ್ದಾಗಲೆಲ್ಲಾ, ಈ ಪುಟಾಣಿಗಳು ದೇಶ ಭಕ್ತರ, ಸ್ಟಾರ್‌ಗಳ ನಕಲು ಮಾಡುವುದನ್ನು ನೋಡಿದ್ದೇವೆ. ಅದರಲ್ಲಿ ಪ್ರಮುಖವಾಗಿ ವಿವೇಕಾನಂದ್, ಮಹಾತ್ವಾ ಗಾಂಧಿ, ಚಾಚಾ ನೆಹರು, ಭಗತ್ ಸಿಂಗ್, ಸುಭಾಶ್ ಚಂದ್ರ ಭೋಸ್, ಅಬ್ದುಲ್ ಕಲಾಂ ಅವರಂತೆ ಕಾಣುವ ಫೋಟೋಗಳು ಸಾಮಾಜಿಕ ತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತವೆ.
ಇಷ್ಟೇ ಏಕೆ ಪಾಲಕರು ತಮ್ಮ ಮಗು ದೊಡ್ಡವನಾದ ಮೇಲೆ ಏನು ಆಗಬೇಕು ಎಂದು ಕನಸು ಕಂಡಿರುತ್ತಾರೋ, ಆ ಪೋಷಾಕಗಳನ್ನು ಹಾಕುತ್ತಾರೆ. ಉದಾಹರಣೆಗೆ ಡಾಕ್ಟರ್, ನರ್ಸ್, ಪೈಲೇಟ್, ಸೈನಿಕರ ಪೋಷಾಕಿನಲ್ಲಿ ಕಂಗೊಳಿಸುವುದನ್ನು ನೋಡಿದ್ದೇವೆ. ಈಗ ಪೋಷಕರ ಹುಚ್ಚುತನದ ಪರಾಕಾಷ್ಟೆಯನ್ನು ನೋಡಲು ಸಿಕ್ಕಿದೆ.

ವೈರಲ್ ಫೋಟೋ
ಇತ್ತೀಚಿಗೆ ತಮ್ಮ ಮಕ್ಕಳಿಗೆ ನೆಚ್ಚಿನ ನಟ ಹಾಗೂ ನಟಿಯರ ರೀತಿ ಪೋಷಾಕು ಹಾಕುವುದು ಕಾಮನ್. ಈ ಮೂಲಕ ಪಾಲಕರು ತಮ್ಮ ಮಗುವಿನ ಬಾಲ್ಯವನ್ನು ತಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಸಿಕೊಳ್ಳುವಂತೆ ಮಾಡುತ್ತಾರೆ. ಹೀಗೆ ಮಾಡಿದರೆ ಓಕೆ, ಇಲ್ಲೊಬ್ಬ ಪೋಷಕರು ತಮ್ಮ ಮಗುವಿಗೆ ಖೈದಿ ರೀತಿ ಡ್ರೆಸ್ ಹಾಕಿದ್ದಾರೆ. ಹೀಗೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಇದ್ದಿವೆ.
ಒಂದು ವರ್ಷದ ಪುಟ್ಟ ಮಗುವಿಗೆ ಖೈದಿಯ ರೀತಿ ಫೊಟೋ ಶೂಟ್ ಮಾಡಿಸದರೆ ಆ ಮನಸ್ಥಿತಿಗೆ ಏನು ಹೇಳಬೇಕು. ಅಷ್ಟೇ ಅಲ್ಲದೆ ಫೋಟೋ ಶೂಟ್‌ನಲ್ಲಿ ಮಗುವಿನ ಬಿಳಿ ಶರ್ಟ್ ಮೇಲೆ ಕೈದಿ ನಂಬರ್ ಹಾಕಿ, ಪಕ್ಕದಲ್ಲಿ ಕೈ ಕೊಳಗಳನ್ನು ಬಿಡಿಸಿ ಪೋಟೋ ಶೂಟ್ ಮಾಡಿಸದಕ್ಕೆ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
ಜನರ ಆಕ್ರೋಶ
ಸದ್ಯ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧಿನ ಖೈದಿ ಆಗಿರುವ ದರ್ಶನ್ ಅವರ ಸಂಖ್ಯೆ. ಹೀಗೆ ನಂಬರ್ ಹಾಕಿ ಫೋಟೋ ಶೂಟ್ ಮಾಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ. ನಟನ ಮೇಲಿನ ಅತಿರೇಕದ ಅಭಿಮಾನ ಈ ರೀತಿ ಎಲ್ಲ ಮಾಡಿಸಿದೆ ಎಂದರೂ ತಪ್ಪಾಗಲಾರದು. ಇದಕ್ಕೆ ಸಾಮಾಜಿಕ ತಾಣದಲ್ಲಿ ಜನರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಅಭಿಮಾನಿಗಳ ಹುಚ್ಚಾಟ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು, 12 ದಿನಗಳ ಪೊಲೀಸ್ ಕಸ್ಟಡಿಯನ್ನು ಮುಗಿಸಿ ಈಗ ನ್ಯಾಯಂಗ ಬಂಧನಲ್ಲಿದ್ದಾರೆ. ಸದ್ಯ ಅವರಿಗೆ ನೀಡಲಾಗಿರುವ ಸಂಖ್ಯೆ 6106 ಆಗಿದೆ. ಈ ನಟನ ಅಭಿಮಾನಿಗಳ ಹುಚ್ಚಾಟ ತಾರಕಕ್ಕೇರಿದೆ. ಈ ನಂಬರ್‌ನ್ನೇ ಹುಚ್ಚು ಅಭಿಮಾನಿಗಳು ತಮ್ಮ ತಮ್ಮ ಗಾಡಿಯಲ್ಲಿ ಹಾಕಿಸಿಕೊಂಡು ಅಭಿಮಾನದ ಪರಾಕಾಷ್ಟೆಯನ್ನು ಮೆರೆಯುತ್ತಿದ್ದಾರೆ. ಇಷ್ಟೇ ಏಕೆ ತಿಳುದ ಬಂದ ಮಾಹಿತಿಯ ಪ್ರಕಾರ ಈ ನಂಬರ್ ಹೊಂದಿರುವ ಸಿಮ್‌ಗಳಿಗೂ ಭಾರೀ ಬೇಡಿಕೆ ಇದೆ ಎಂದು ತಿಳಿದು ಬಂದಿದೆ.
ವಿಚಾರಣಾಧಿನ ಖೈದಿ ಆಗುವ ಮುನ್ನ ನಟನ ಅಭಿಮಾನಿಗಳು ಆತನ ಹೆಸರು ಹಾಗೂ ಆತನ ಮುಖವನ್ನು ಮೈಮೇಲೆ ಅಚ್ಚು ಹಾಕಿಸಿಕೊಂಡಿದ್ದರು ಓಕೆ. ಆದರೆ ಈಗ ಈ ಸಂಖ್ಯೆಯನ್ನು ಸಹ ಅಚ್ಚು ಹಾಕಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ದರ್ಶನ್‌ರ ಹುಚ್ಚು ಅಭಿಮಾನಿ ಸ್ಲೇಟ್‌ನಲ್ಲಿ ಈ ನಂಬರ್ ಬರೆದು ಫೊಟೋ ಶೂಟ್ ಸಹ ಮಾಡಿದ್ದು ಸಖತ್ ವೈರಲ್ ಆಗಿತ್ತು. ಈ ಅಭಿಮಾನಿಗಳ ಹುಚ್ಚಾಟ ಎಲ್ಲಿಗೆ ಹೋಗಿ ನಿಲ್ಲುತ್ತದೋ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.












Click it and Unblock the Notifications