Darshan Areest: ಬಂಧಿಸಿದಂತೆ ಪೊಲೀಸ್‌ರ ಮೇಲೆ ಹೆಚ್ಚಿತ್ತು ಒತ್ತಡ
ಚಾಲೆಂಜಿಂಗ್ ಸ್ಟಾರ್ ದರ್ಶನ ಇಂದು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನರನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ. ಪೊಲೀಸರು ಮೈಸೂರಿನ ಹೋಟೆಲ್‌ಗೆ ಹೋಗಿದ್ದಾಗ ದರ್ಶನ ಜಿಮ್ ನಲ್ಲಿ ವರ್ಕ್‌ಔಟ್ ಮಾಡ್ತಾ ಇದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ನಾನು ಪೊಲೀಸ್ ಜೀಪ್‌ನಲ್ಲಿ ಬರುವುದಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಇದಕ್ಕೆಲ್ಲಾ ಅವಕಾಶ ನೀಡದೆ, ತಮ್ಮ ಜೊತೆಗೆ ಜೀಪ್‌ನಲ್ಲೇ ಬರುವಂತೆ ಸೂಚಿಸಿದ್ದಾರೆ. ದರ್ಶನಗೆ ಬೇರೆ ವಿಧಿಯಿಲ್ಲದೆ ಪೊಲೀಸರೊಂದಿಗೆ ಜೀಪ್ ಹತ್ತಿದ್ದಾರೆ. ಅಂದಹಾಗೆ ದರ್ಶನ್ ತಮ್ಮ ಪರ್ಸನಲ್ ಕಾರ್‌ನಲ್ಲಿ ಬಂದಿದ್ದರೇ, ತಮ್ಮ ಪ್ರಭಾವ ಬಳಸಿ ತಮ್ಮ ಆಪ್ತರು, ರಾಜಕೀಯ ಮುಖಂಡರು, ಖ್ಯಾತ ನಾಮರಿಗೆ ಕಾಲ್ ಮಾಡಿ ಬಂಧಿಸಿದಂತೆ ಒತ್ತಡ ಹೇರುತ್ತಾರೆ ಎಂಬುದನ್ನು ಅರಿತು ಪೊಲೀಸರು ಕಾರ್‌ನಲ್ಲಿ ತೆರಳಲು ನಿರಾಕರಿಸಿದ್ದಾರೆ.

13 ಜನರ ಬಂಧನ
ಬೆಳಗ್ಗೆ ದರ್ಶನರನ್ನು ಬಂಧಿಸಿದ ಪೊಲೀಸರು, ಇವರನ್ನು ಮೈಸೂರಿನಿಂದ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 13 ಜನರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ದರ್ಶನ ಅವರ ಪ್ರೇಯಸಿ ಪವಿತ್ರಾ ಗೌಡ ಸಹ ಸೇರಿದ್ದಾರೆ.
ಪ್ರಭಾವಿಗಳಿಂದ ಒತ್ತಡ
ರೇಣುಕಾಸ್ವಾಮಿ ಕೊಲೆ ಪ್ರಕರಣ ತನ್ನ ಸುತ್ತ ಬರುತ್ತಿರುವುದನ್ನು ಗಮನಿಸಿದ್ದ ದರ್ಶನ ಅದಾಗಲೇ ಕಾರ್ಯಪ್ರವೃತ್ತ ರಾಗಿದ್ದಾರೆ. ಅಲ್ಲದೆ ತನ್ನಗೆ ಗೊತ್ತಿರುವ ಎಲ್ಲ ಪ್ರಭಾವಿಗಳಿಂದಲೂ ಹೇಳಿಸಿ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರ ರಾತ್ರಿಯಿಂದಲೇ ನಟ ದರ್ಶನರನ್ನು ಬಂಧಿಸ ಬೇಡಿ ಎಂದು ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ದರ್ಶನ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸಾಮಾಜಿಕ ತಾಣದಲ್ಲಿ ಅಸಭ್ಯ ಮೆಸೇಜ್ ಮಾಡಿದ್ದಾನೆ. ಇದರಿಂದ ದರ್ಶನ ಸಿಟ್ಟಾಗಿ ಅವರ ಅಭಿಮಾನಿಗಳ ಮೂಲಕ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರಿಸಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರಿನ ಹೊರ ವಲಯದಲ್ಲಿ ರೇಣುಕಾಸ್ವಾಮಿಗೆ ಚಿತ್ರ ಹಿಂಸೆ ನೀಡಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ನಡೆಸುವ ವೇಳೆ ರೇಣುಕಾಸ್ವಾಮಿ ಮೊಬೈಲ್ ಕೊನೆಯದಾಗಿ ಆರ್‌ಆರ್ ನಗರ ಲೊಕೇಶನ್ ತೋರಿಸಿತ್ತು.
ನಟ ದರ್ಶನ ಈ ಪ್ರಕರಣಕ್ಕೆ ಹಾಗೂ ತನಗೂ ಸಂಬಂಧನೇ ಇಲ್ಲ. ನಾನು ರೇಣುಕಾಸ್ವಾಮಿ ಅವರನ್ನು ಕರೆದು ಬುದ್ಧಿ ಹೇಳುವಂತೆ ಸೂಚಿಸಿದ್ದೇ ಅವರು ಕೊಲೆ ಮಾಡಿದ್ದಾರೆಂದು ಹೇಳಿಕೊಳ್ಳುತ್ತಿದ್ದಾರೆ.












Click it and Unblock the Notifications