ರಂಗಶಂಕರದಲ್ಲಿ ಇಟಾಲಿಯನ್ ಕವಿ ದಾಂತೆ ಸ್ಮರಣೆಯ ರಂಗ ಪ್ರಯೋಗ
ಬೆಂಗಳೂರು, ನವೆಂಬರ್ 23: ದಾಂತೆ ಬಿಯಾಂಡ್ ಬಾರ್ಡರ್ಸ್ ಎನ್ನುವುದು ಪ್ರಯೋಗಾತ್ಮಕ ರಂಗಭೂಮಿ ಹಾಗೂ ನೃತ್ಯ ಕಾರ್ಯಕ್ರಮವಾಗಿದ್ದು, ಮುಂಬೈಯ ಇನ್‍ಸ್ಟಿಟ್ಯೂಟೊ ಇಟಾಲಿಯಾನೊ ದಿ ಕಲ್ಚುರಾದ ಸಹಯೋಗದಲ್ಲಿ ಪ್ರಸ್ತುತಗೊಳ್ಳಲಿದೆ. ಇಟಾಲಿಯನ್ ಥಿಯೆಟರ್ ಕಂಪನಿ ಇನ್‍ಸ್ಟಾಬಿಲಿ ವಗಂತಿ ಹಾಗೂ ಅಹುಮ್ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಟಾಲಿಯನ್ ಕವಿ ದಾಂತೆ ಅಲಿಗೇರಿ ಅವರ 700 ನೇ ಪುಣ್ಯಸ್ಮರಣೆಯ ಅಂಗವಾಗಿ ಅವರ ಸಾಹಿತ್ಯದಿಂದ ಪ್ರೇರಣೆ ಪಡೆದು, ಈ ಕಾರ್ಯಕ್ರಮ ನಡೆಯಲಿದೆ.
ಇಟಲಿಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಅನ್ನಾ ಡೋರಾ ಡೋರ್ನೊ ಇದನ್ನು ನಿರ್ದೇಶಿಸಿದ್ದು, ಪ್ರಯೋಗಾತ್ಮಕ ರಂಗಭೂಮಿ, ನೃತ್ಯ, ಸಿನಿಮಾ, ವಿಡಿಯೊ ಆರ್ಟ್, ಇಲೆಕ್ಟ್ರಾನಿಕ್ ಸಂಗೀತ ಮುಂತಾದವುಗಳನ್ನು ಇದರಲ್ಲಿ ಬಳಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ದಾಂತೆ ಬಳಸಿರುವ ಹಳೆಯ ಇಟಾಲಿಯನ್ ಭಾಷೆಯೊಂದಿಗೆ ಪ್ರಾಚೀನ ಭರತನಾಟ್ಯದ ಮುದ್ರೆಗಳನ್ನು ಸಮನ್ವಯಗೊಳಿಸಲಾಗಿದೆ. ಇದರ ಜತೆಗೆ ಆಸ್ಕರ್ ಪ್ರಶಸ್ತಿ ವಿಜೇತ ಇಟಾಲಿಯನ್ ಸಂಗೀತಗಾರ ರಿಕಾರ್ಡೊ ನನ್ನಿಯ ಇಲೆಕ್ಟ್ರಾನಿಕ್ ಸೌಂಡ್‍ಸ್ಕೇಪ್‍ಗಳನ್ನು ಬಳಸಲಾಗಿದೆ.
ನಿಕೊಲಾ ಪಿಯಾನ್‍ಝೊಲಾ ಹಾಗೂ ಅನುರಾಧ ವೆಂಕಟರಾಮನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಾಂತೆ ಅವರ ಸಾಹಿತ್ಯ ಹಾಗೂ ಭಾರತೀಯ ಸಂಸ್ಕೃತಿ ನಡುವಿನ ಕೊಂಡಿಯನ್ನು ಹುಡುಕುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ದಾಂತೆ ತನ್ನ ಕವಿತೆಯಲ್ಲಿ ಆಗಾಗ್ಗೆ ಭಾರತದ ಬಗ್ಗೆ, ಗಂಗಾ ನದಿಯ ತಟದ ಸೂರ್ಯೋದಯದ ಬಗ್ಗೆ ಉಲ್ಲೇಖಿಸಿದ್ದಾರೆ.

ಇಟಲಿ ಮತ್ತು ಭಾರತದ ನಡುವಿನ ಸೇತುವೆ
ದಾಂತೆ ಬಿಯಾಂಡ್ ಬಾರ್ಡರ್ಸ್
ಕ್ರಿಯೇಷನ್: ಇನ್‍ಸ್ಟಾಬಿಲಿ ವಗಂತಿ
ನಿರ್ದೇಶನ: ಅನ್ನಾ ಡೋರಾ ಡೋರ್ನೊ
ಭಾಗವಹಿಸುವವರು: ಅನ್ನಾ ಡೋರಾ ಡೋರ್ನೊ, ನಿಕೊಲೊ ಪಿಯಾನ್‍ಜೊಲಾ, ಅನುರಾಧ ವೆಂಕಟರಾಮನ್
ಕೊರಿಯೊಗ್ರಫಿ: ಅನುರಾಧ ವೆಂಕಟರಾಮನ್
ಒರಿಜಿನಲ್ ಸಾಂಗ್ಸ್: ಅನ್ನಾ ಡೋರಾ ಡೋರ್ನೊ
ಡ್ರಾಮಟರ್ಜಿ ಮತ್ತು ವಾಯ್ಸ್‌ಓವರ್: ಅನ್ನಾ ಡೋರಾ ಡೋರ್ನೊ, ನಿಕೊಲೊ ಪಿಯಾನ್‍ಜೊಲಾ
ಒರಿಜಿನಲ್ ಮ್ಯೂಸಿಕ್ ಆಂಡ್ ಸೌಂಡ್ ಡಿಸೈನ್: ರಿಕಾರ್ಡೊ ನನ್ನಿ
ವಿಡಿಯೊ ಕ್ರಿಯೇಷನ್: ಅನ್ನಾ ಡೋರಾ ಡೋರ್ನೊ, ನಿಕೊಲೊ ಪಿಯಾನ್‍ಜೊಲಾ, ಅಶ್ವಿನಿ ಅಯ್ಯರ್
ಸೆಟ್ ಮತ್ತು ಲೈಟ್ ಡಿಸೈನ್: ಅನ್ನಾ ಡೋರಾ ಡೋರ್ನೊ
ತಾಂತ್ರಿಕ ಸಹಕಾರ ಮತ್ತು ಸೌಂಡ್: ನಿಖಿಲ್ ಭಾರದ್ವಾಜ್
ಪ್ರೊಡಕ್ಷನ್: ಇಸ್ಟಿಟ್ಯೂಟೊ ಇಟಾಲಿಯಾನೊ ದಿ ಕಲ್ಚುರಾ ಮುಂಬೈ/ ಇನ್‍ಸ್ಟಾಬಿಲಿ ವಗಂತಿ/ ಅಹುಮ್ ಟ್ರಸ್ಟ್
ಸ್ಪಾನ್ಸರ್_ ಎಂಐಸಿ- ಇಟಾಲಿಯನ್ ಮಿನಿಸ್ಟ್ರಿ ಆಫ್ ಕಲ್ಚರ್
ಅವಧಿ: 60 ನಿಮಿಷಗಳು
ಭಾಷೆ: ಇಂಗ್ಲಿಷ್ ಮತ್ತು ಪ್ರಾಚೀನ ಇಟಲಿ
ಸೆಂಟರ್ ಫಿಸಿಕಲ್ ಥಿಯೆಟರ್ ಆಂಡ್ ಡಾನ್ಸ್/ ಎಕ್ಸ್‍ಪೆರಿಮೆಂಟಲ್ ಫಿಲ್ಮ್ ಆಂಡ್ ವಿಡಿಯೊ ಆರ್ಟ್
ಸ್ಥಳ: ರಂಗಶಂಕರ, ಜೆಪಿ ನಗರ, ಬೆಂಗಳೂರು
ತಾ: ನವೆಂಬರ್ 30, 2021 ಮತ್ತು ಡಿಸೆಂಬರ್ 1, 2021
ಸಮಯ: ಸಂಜೆ 7 ಹಾಗೂ 7.30
ಟಿಕೆಟ್ ಬೆಲೆ: Rs.250/

ಇನ್‍ಸ್ಟಾಬಿಲಿ ವಗಂತಿ ಥಿಯೆಟರ್ ಕಂಪನಿ ಬಗ್ಗೆ
ನಿರ್ದೇಶಕಿ, ಕಲಾವಿದೆ ಅನ್ನಾ ಡೋರಾ ಡೋರ್ನೊ ಹಾಗೂ ನಿಕೊಲಾ ಪಿಯಾನ್‍ಜೊಲಾ ಅವರು 2004ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಇನ್‍ಸ್ಟಾಬಿಲಿ ವಗಂತಿ ಥಿಯೆಟರ್ ಎನ್ನುವುದು ಬಹುಶಿಸ್ತೀಯ ಆರ್ಟಿಸ್ಟಿಕ್ ಕೇಂದ್ರವಾಗಿದ್ದು, ಫಿಸಿಕಲ್ ಥಿಯೆಟರ್ ಹಾಗೂ ಕಂಟೆಂಪರರಿ ಪರ್‍ಫಾರ್ಮಿಂಗ್ ಆಟ್ರ್ಸ್‍ಗಳ ಬಗೆಗೆ ಸಂಶೋಧನೆ ಮಾತ್ರವಲ್ಲದೆ ಪ್ರಯೋಗಗಳನ್ನು ಕೂಡ ನಡೆಸುತ್ತದೆ.

ಇನ್‍ಸ್ಟಾಬಿಲಿ ವಗಂತಿ ಸಂಸ್ಥೆ
ಈ ಸಂಸ್ಥೆಯ ಕಾರ್ಯಕ್ರಮಗಳು ಮೂರು ಭಾಷೆಗಳಲ್ಲಿ ಅನುವಾದಗೊಂಡಿದ್ದು, ಯೂರೋಪ್, ಮಿಡಲ್ ಈಸ್ಟ್, ಉತ್ತರ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡಿದೆ. ಇನ್‍ಸ್ಟಾಬಿಲಿ ವಗಂತಿ ಸಂಸ್ಥೆಯು ಭಾರತದಲ್ಲಿ ನಡೆದ ಥಿಯೇಟರ್ ಒಲಿಂಪಿಕ್ಸ್ ನಲ್ಲಿ ಇಟಾಲಿಯನ್ ಥಿಯೆಟರ್ ಅನ್ನು ಪ್ರತಿನಿಧಿಸಿದೆ.
Recommended Video

ನಿರ್ದೇಶಕಿ ಬಗ್ಗೆ
ಅನ್ನಾ ಡೋರಾ ಡೋರ್ನೊ ಅವರು ಯೂನಿವರ್ಸಿಟಿ ಆಫ್ ಬೊಲೋಗ್ನಾದ ಡಿಪಾರ್ಟ್‍ಮೆಂಟ್ ಆಫ್ ಥಿಯೆಟರ್ ಮ್ಯೂಸಿಕ್ ಆಂಡ್ ಆಟ್ರ್ಸ್‍ನಿಂದ ಪದವಿಯನ್ನು ಪಡೆದಿದ್ದಾರೆ. 2004ರಲ್ಲಿ ಅವರು ಇನ್‍ಸ್ಟಾಬಿಲಿ ವಗಂತಿ ಎಂಬ ಪ್ರಯೋಗಾತ್ಮಕ ಥಿಯೆಟರ್ ಕಂಪನಿಯನ್ನು ಆರಂಭಿಸಿದರು.
ವಿಶ್ವದಾದ್ಯಂತದ ಕಲಾವಿದರೊಂದಿಗೆ ಅವರು ಕಾರ್ಯನಿರ್ವಹಿಸಿದ್ದಾರೆ ಅಲ್ಲದೆ ಅವರು ಖ್ಯಾತ ಎರಡು ಅಂತಾರಾಷ್ಟ್ರೀಯ ಕೊ ಪ್ರೊಡಕ್ಷನ್‍ಗಳನ್ನು ನಿರ್ದೇಶಿಸಿದ್ದಾರೆ. ಇವರು ಇಂಟರ್‍ನ್ಯಾಷನಲ್ ಪರ್‍ಫಾರ್ಮಿಂಗ್ ಆರ್ಟ್ಸ್ ಪ್ರಾಜೆಕ್ಟ್ ಆದ ರಾಗ್ಸ್ ಆಫ್ ಮೆಮರಿಯನ್ನು ಮುನ್ನಡೆಸುತ್ತಿದ್ದಾರೆ. ಅವರ ಇತ್ತೀಚಿನ ಪ್ರಾಜೆಕ್ಟ್ ಬಿಯಾಂಡ್ ಬಾರ್ಡರ್ಸ್‍ಗೆ ಮಿನಿಸ್ಟ್ರಿ ಆಫ್ ಇಟಾಲಿಯನ್ ಕಲ್ಚರ್‌ನ ಅನುದಾನ ದೊರೆತಿದೆ.












Click it and Unblock the Notifications