'ನಮಗಿನ್ನೂ ಸ್ವಾತಂತ್ರ್ಯ ಮಾತ್ರ ಸಿಗುತ್ತಿಲ್ಲ'

ಬೆಂಗಳೂರು, ಫೆ.5: ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪದವೀಧರರ ಒಕ್ಕೂಟ ಹಾಗೂ ಬೆಂಗಳೂರು ವಿವಿ ಎಸ್ಸಿ-ಎಸ್ಟಿ ನೌಕರರ ಸಂಘ ಜಂಟಿ ಯಾಗಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ದಿನಾಚರಣೆ ಪ್ರಯುಕ್ತ ‘ಚಿಂತನ ಮಂಥನ' ಕಾರ್ಯಕ್ರಮದುದ್ದಕ್ಕೂ ಹಿರಿಯ ಕಾಂಗ್ರೆಸ್ ನಾಯಕ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ತಮ್ಮ ಗೋಳು ತೋಡಿಕೊಂಡರು.

'ಬ್ರಿಟಿಷರು ದೇಶ ವನ್ನು ಬಿಟ್ಟು ಹೋಗಿದ್ದರೂ ಆ ಜಾಗದಲ್ಲಿ ಇಂದು ನಮ್ಮವರೇ ಕೂತಿರುವುದರಿಂದ ದಲಿತ ಸಮುದಾಯಗಳಿಗೆ ಸಮಾನತೆ ಹಾಗೂ ಸ್ವಾತಂತ್ರ್ಯ ಮಾತ್ರ ಸಿಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.

ನೂರಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಎಷ್ಟು ಜನರಿಗೆ ಇದರಿಂದ ಶಿಕ್ಷೆಯಾಗುತ್ತಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಸ್ವಲ್ಪವಾದರೂ ಕಡಿಮೆಯಾಗಿವೆಯೇ? ಬೆಂಗಳೂರನ್ನು ಜ್ಞಾನ, ತಂತ್ರಜ್ಞಾನ ಇತ್ಯಾದಿ ನಗರ ಎಂದು ಕರೆಯುತ್ತೇವೆ. 30 ಕಿಮೀ ದೂರದ ಆನೇಕಲ್ ನಲ್ಲಿ ಇನ್ನೂ ದಲಿತರಿಗಾಗಿ ಪ್ರತ್ಯೇಕ ಲೋಟವನ್ನು ಇಡಲಾಗುತ್ತಿದೆ. ಇಂಥ ಸಂಗತಿಗಳು ಎಂದು ನಿಲ್ಲುವುದು ಎಂದು ಅವರು ದುಃಖಭರಿತ ಆಕ್ರೋಶದಿಂದ ಪ್ರಶ್ನಿಸಿದರು.

ದಲಿತರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ: ಜಿ ಪರಮೇಶ್ವರ್

ದಲಿತರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ: ಜಿ ಪರಮೇಶ್ವರ್

ಇಂದಿನ ದಿನಗಳಲ್ಲಿ ಸರಕಾರಗಳಿಗೆ ಸರಕಾರಿ ಅಧಿಕಾರಿಗಳನ್ನು ಕಡಿತಗೊಳಿಸಲು ಒತ್ತಡವಿದೆ. ಹಾಗಾಗಿ ಬ್ಯಾಕ್ ಲಾಗ್ ಹುದ್ದೆಗಳನ್ನು ನೇಮಕ ಮಾಡಲು ಅಧಿಕಾರಿಗಳು ಶಾಸಕರಿಗೆ, ಶಾಸಕರು ಮಂತ್ರಿಗಳಿಗೆ, ಮಂತ್ರಿಗಳು ಮುಖ್ಯ ಮಂತ್ರಿಗಳಿಗೆ ಅಹವಾಲು ಸಲ್ಲಿಸ ಬೇಕಾದ ಸ್ಥಿತಿ ಇರುವುದು ವಿಪ ರ್ಯಾಸ.

ಪಾಲಿಕೆಯಲ್ಲಿ 8 ಸಾವಿರ ಪೌರ ಕಾರ್ಮಿಕರನ್ನು ನೇಮಿಸಿ ಕೊಳ್ಳು ವಂತೆ ಸರಕಾರ ಸೂಚನೆ ನೀಡಿದ್ದರೂ ನೇಮಕ ಪ್ರಕ್ರಿಯೆ ಪಾರಂಭವಾಗಿಲ್ಲ. ಸರಕಾರದಲ್ಲಿ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಖಾಸಗಿ ಕ್ಷೇತ್ರದಲ್ಲೂ ದಲಿತರಿಗೆ ಮೀಸಲಾತಿ ಬೇಕು

ಖಾಸಗಿ ಕ್ಷೇತ್ರದಲ್ಲೂ ದಲಿತರಿಗೆ ಮೀಸಲಾತಿ ಬೇಕು

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಕ್ಯಾಬಿನೇಟ್ ದರ್ಜೆ ಸ್ಥಾನಮಾನ ಸಿಕ್ಕಿಲ್ಲ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ನಂತರ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕು. ಸರ್ಕಾರಿ ಕಚೇರಿಗಳಲ್ಲಿ ಮಾತ್ರವಲ್ಲ. ಖಾಸಗಿ ವಲಯದಲ್ಲೂ ದಲಿತರಿಗೆ ಮೀಸಲಾತಿ ಬೇಕು ಎಂದಿದ್ದರು.

ಕಾಂಗ್ರೆಸ್ಸಿಗೆ ದಲಿತರೇ ಆಧಾರ ಶಕ್ತಿ: ಪರಮೇಶ್ವರ್

ಕಾಂಗ್ರೆಸ್ಸಿಗೆ ದಲಿತರೇ ಆಧಾರ ಶಕ್ತಿ: ಪರಮೇಶ್ವರ್

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯದವರು ವಿಫಲ ಯತ್ನ ನಡೆಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಹಿಂದುಳಿದ ವರ್ಗದವರೇ ಆಧಾರ ಶಕ್ತಿ ಎಂದಿದ್ದರು. ದೇವರಾಜ ಅರಸು ಕಂಡ ಕನಸು ನನಸು ಮಾಡುವ ದಿನಗಳನ್ನು ಕಾಣಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದಿದ್ದಾರೆ.

ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ

ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ

ಸಹಕಾರ ಕ್ಷೇತ್ರದಲ್ಲೂ ಹಿಂದುಳಿತ ಜಾತಿ/ವರ್ಗದ ಜನತೆಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಹೌಸಿಂಗ್ ಬೋರ್ಡ್, ನಗರಾಭಿವೃದ್ಧಿ ಪ್ರಾಧಿಕಾರ, ಮುನ್ಸಿಪಲ್, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿಗೆ ಯತ್ನಿಸಲಾಗುತ್ತಿದೆ.

ಎಲ್ಲವೂ ವೋಟ್ ಬ್ಯಾಂಕ್ ಆಧಾರಿತ

ಎಲ್ಲವೂ ವೋಟ್ ಬ್ಯಾಂಕ್ ಆಧಾರಿತ

ಶೇ 18ರಷ್ಟಿರುವ ಲಿಂಗಾಯತರು, ಶೇ 16ರಷ್ಟಿರುವ ಒಕ್ಕಲಿಗರ ಕೃಪೆಗಾಗಿ ಎಲ್ಲಾ ಪಕ್ಷಗಳು ಹಾತೊರೆಯುತ್ತವೆ. ತುಂಗಭದ್ರಾ ನದಿಯ ಮೇಲ್ಭಾಗಕ್ಕೆ ಹೋದರೆ ಲಿಂಗಾಯತ ಪ್ರದೇಶ ಕಾಣಬಹುದಾದರೆ, ಬೆಂಗಳೂರು, ಮಂಡ್ಯ, ಹಾಸನ, ಮೈಸೂರು, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಒಟ್ಟಾರೆ ದಲಿತರು (ಶೇ 23) ಕುರುಬರು (ಶೇ 8), ಮುಸ್ಲಿಂ(ಶೇ 10), ಬ್ರಾಹ್ಮಣ(ಶೇ 5), ಕ್ರೈಸ್ತರು(ಶೇ 1.9), ಜೈನ (ಶೇ 0.8), ಬೌದ್ಧ (ಶೇ 0.7), ಸಿಖ್ಖರು (ಶೇ 0.1)(ಅಂಕಿ ಅಂಶಗಳು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದ್ದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+