ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದಲ್ಲಿ ಸೈಕಲ್ ಸವಾರಿ ಹೊರಟೇವು ಬನ್ನಿ..

|
Google Oneindia Kannada News

ಬೆಂಗಳೂರು, ಅಕ್ಟೋಬರ್, 12: ಬೈಸಿಕಲ್ ಪ್ರೋವೈಡರ್ 'ಐ ಸೈಕಲ್. ಇನ್' ಅಕ್ಟೋಬರ್ 11 ರಂದು ಬೆಂಗಳೂರಿನಲ್ಲಿ 'ಸೈಕ್ಲಿಸ್ಟ್ ಡೇ' ಹಮ್ಮಿಕೊಂಡಿತ್ತು. ಸುಮಾರು 250 ಜನ ಸೈಕ್ಲಿಸ್ಟ್ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಿಸರ ಪ್ರೇಮ ಮೆರೆದರು.

ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾಂಗಣದಿಂದ ಆರಂಭವಾದ ಸೈಕಲ್ ಜಾಥಾ 5 ಕಿಮೀ ಸಂಚರಿಸಿ ಮತ್ತೆ ಅದೇ ಜಾಗದಲ್ಲಿ ಸಮಾರೋಪಗೊಂಡಿತು. ಜಯನಗರದ ಶಾಸಕ ಬಿ ಎನ್ ವಿಜಯಕುಮಾರ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀಲ್ಸ್ ಸ್ಪೋರ್ಟ್ಸ್ ನ ವೆಂಕಟೇಶ್ ಶಿವರಾಮಣ್ಣ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.[ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!]

ಸೈಕಲ್ ವ್ಯಾಪಾರಿಗಳು ಮತ್ತು ಸೈಕಲ್ ಸವಾರರು ವಾರ್ಷಿಕವಾಗಿ ಒಂದು ದಿನ ಸೈಕ್ಲಿಂಗ್ ಡೇ ನಡೆಸುತ್ತಾರೆ. ಪರಿಸರ ಸಂರಕ್ಷಣೆಯೊಂದಿಗೆ ಆರೋಗ್ಯ ಕಾಪಾಡಿಕೊಳ್ಳಲು ಉತ್ತೇಜನ ನೀಡುವುದು ಈ ದಿನದ ಪ್ರಮುಖ ವಿಷಯ. ನಗರದಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯ ತಡೆಯಲು ಸೈಕಲ್ ದಿನ ನೆರವು ನೀಡುತ್ತದೆ.

ಸವಾರಿಗೆ ಚಾಲನೆ

ಸವಾರಿಗೆ ಚಾಲನೆ

ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾಂಗಣದಲ್ಲಿ ಶಾಸಕ ಬಿ ಎನ್ ವಿಜಯಕುಮಾರ್ ಮತ್ತು ವೀಲ್ಸ್ ಸ್ಪೋರ್ಟ್ಸ್ ನ ವೆಂಕಟೇಶ್ ಶಿವರಾಮಣ್ಣ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.

 ಐ ಸೈಕಲ್ ಬಗ್ಗೆ

ಐ ಸೈಕಲ್ ಬಗ್ಗೆ

ಐ ಸೈಕಲ್ ಸೈಕಲ್ ಸವಾರಿಯಲ್ಲಿ ಆಸಕ್ತಿ ಹೊಂದಿರುವ ಜನರು ಒಟ್ಟಾಗಿ ಮಾಡಿಕೊಂಡಿರುವ ಸಂಘಟನೆ. ರಾಜ್ಯದ ಅತಿದೊಡ್ಡ ಸೈಕ್ಲಿಂಗ್ ತೆಬೇತಿ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ,

ತರಬೇತಿ ಕಾರ್ಯಕ್ರಮಗಳು

ತರಬೇತಿ ಕಾರ್ಯಕ್ರಮಗಳು

ವರ್ಷದಲ್ಲಿ ಸಂಸ್ಥೆ 90 ಕ್ಕೂ ಅಧಿಕ ಸೈಕ್ಲಿಂಗ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಸುಮಾರು 3000 ಕ್ಕೂ ಹೆಚ್ಚಿನ ಜನ ಸಂಸ್ಥೆ ಅಡಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಾರೆ.

ಸಂಭ್ರಮದ ದಿನ

ಸಂಭ್ರಮದ ದಿನ

ಸೈಕ್ಲಿಂಗ್ ನಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಪಾಲ್ಗೊಂಡಿದ್ದರು. ಸೈಕಲ್ ಏರಿ ಹೊರಟ ಮಗುವಿನ ಸಂತಸವನ್ನು ನೋಡಿಯೇ ಸವಿಯಬೇಕು.

English summary
ICYCLE.in, a leading bicycle solutions provider, observes ‘Cyclists' Day' on the second Sunday of October every year. This day was observed on 11th October this year, to promote cycling and also to honor renowned cyclists in the city. Around 250 cyclists from Bengaluru took part in this event. CYCLISTS' DAY is an annual gathering of bicycle vendors and bicycle enthusiasts. This day served as a platform to educate newbie cyclists about the various opportunities available to them to take-up cycling as a regular activity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X