• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಿಗ್ಗಿ ಡೆಲಿವರಿ ಬಾಯ್ ಜಾಕೆಟ್ ಧರಿಸಿ ಸೈಕಲ್ ಕಳ್ಳತನ

|
Google Oneindia Kannada News

ಬೆಂಗಳೂರು, ಜು. 26: ಕಳ್ಳನೊಬ್ಬ ಸೈಕಲ್ ಕದಿಯಲು ಖತರ್ನಾಕ್ ಪ್ಲಾನ್ ಬಳಿಸಿದ್ದಾನೆ. ಸ್ವಿಗ್ಗಿ ಡೆಲಿವರಿ ಬಾಯ್ ಜಾಕೆಟ್ ಧರಿಸಿ ಮನೆಯ ಕಾಂಪೌಂಡ್‌ನಲ್ಲಿ ಇಟ್ಟಿದ್ದ ಸೈಕಲ್ ಕದ್ದು ಪರಾರಿಯಾಗಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಭಾನುವಾರ ಮಧ್ಯರಾತ್ರಿ ಸ್ವಿಗ್ಗಿ ಫುಡ್ ಡೆಲಿವರಿ ಜಾಕೆಟ್ ಧರಿಸಿರುವ ವ್ಯಕ್ತಿ ಸೈಕಲ್ ಕದ್ದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಆಧರಿಸಿ ಸ್ವಿಗ್ಗಿ ಡೆಲಿವರಿ ಬಾಯ್ ಸೋಗಿನಲ್ಲಿ ಸೈಕಲ್ ಕದ್ದಿರುವ ಬಗ್ಗೆ ಬಿಪಿನ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾನೆ.

Recommended Video

   B S Yediyurappa ರಾಜೀನಾಮೆಗೆ ಕಾಯ್ತಿದ್ದವರಿಗೆ ಈಗ ಹಾಲು ಕುಡಿದಷ್ಟು ಸಂತೋಷ | Oneindia Kannada

   ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಈ ಸಮಯದಲ್ಲಿ ಯಾವುದೇ ಸ್ವಿಗ್ಗಿ ಫುಡ್ ಡೆಲಿವರಿ ಆರ್ಡರ್ ಪಡೆದಿಲ್ಲ. ಹೀಗಾಗಿ ಯಾರೋ ದುರುದ್ದೇಶಪೂರ್ವಕವಾಗಿ ಸ್ವಿಗ್ಗಿ ಜಾಕೆಟ್ ದುರ್ಬಳಕೆ ಮಾಡಿಕೊಂಡು ಕಳ್ಳತನ ಮಾಡಿರಬಹುದು ಎಂದು ಸ್ವಿಗ್ಗಿ ಹೇಳಿಕೊಂಡಿದೆ. ಸಿಸಿಟಿವಿ ಆಧರಿಸಿ ಸೈಕಲ್ ಕಳ್ಳನನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇತ್ತೀಚೆಗೆ ಸ್ವಿಗ್ಗಿ ಡೆಲಿವರಿ ಬಾಯ್ ಮಹಿಳೆಗೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಆನಂತರ ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಸುಳ್ಳು ಅಪಾದನೆ ಮಾಡಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದನ್ನು ಸ್ಮರಿಸಬಹುದು.

   English summary
   CCTV footage of a thief stealing a bicycle wearing a Swiggy Food Delivery Boy Jacket know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X