ಬೆಂಗಳೂರಿನಲ್ಲಿ ಆಗಸ್ಟ್ 19ಕ್ಕೆ ಅತಿದೊಡ್ಡ ಗಣಿತ ಉತ್ಸವ
ಬೆಂಗಳೂರು, ಆಗಸ್ಟ್ 16:ಇದೇ ಮೊದಲ ಬಾರಿಗೆ ಅತಿ ದೊಡ್ಡ ಗಣಿತ ಉತ್ಸವ ನಡೆಯಲಿದೆ. ಕ್ಯುಮ್ಯಾಥ್ ಆಯೋಜನೆ ಮಾಡುತ್ತಿರುವ ಈ ಗಣಿತ ಉತ್ಸವದಲ್ಲಿ 8 ನೇ ತರಗತಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಇದಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸಂಪೂರ್ಣವಾಗಿ ಉಚಿತವಾಗಿರಲಿದ್ದು, ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿರುತ್ತದೆ. ಮಕ್ಕಳ ಬುದ್ಧಿಮತ್ತೆ ಪರೀಕ್ಷೆ ಮತ್ತು ಮತ್ತು ಅವರಲ್ಲಿರುವ ಗಣಿತ ವಿಷಯದ ಪ್ರತಿಭೆ ಅನಾವರಣ ಮಾಡಲು ಕ್ಯುಮ್ಯಾಥ್ ಈ ಗಣಿತ ಉತ್ಸವವನ್ನು ಆಯೋಜಿಸುತ್ತಿದೆ.

ವಾರಾಂತ್ಯದ ದಿನ ನಡೆಯಲಿರುವ ಈ ಉತ್ಸವದಲ್ಲಿ ತಮ್ಮ ಮಕ್ಕಳ ಚಾಣಾಕ್ಷ್ಯತನದ ಪ್ರತಿಭೆಯನ್ನು ಕಣ್ಣಾರೆ ಕಾಣುವ ಸದಾವಕಾಶ ಪೋಷಕರಿಗೆ ಸಿಗಲಿದೆ.
ಗಣಿತ ಉತ್ಸವ ನಡೆಯುವ ಸ್ಥಳ: ಎಲಾನ್ ಕನ್ವೆನ್ಷನ್ ಸೆಂಟರ್, ಬ್ರಿಗೇಡ್ ಮಿಲಿಯೇನಮ್ ಎದುರು, 7 ನೇ ಫೇಸ್, ಜೆಪಿ ನಗರ, ಬೆಂಗಳೂರು
ಸಮಯ: ಬೆಳಗ್ಗೆ 11 ಗಂಟೆಯಿಂದ
ದಿನಾಂಕ: ಆಗಸ್ಟ್ 19(ಶನಿವಾರ)
ಮಾಹಿತಿಗಾಗಿ ಸಂಪರ್ಕ ದೂರವಾಣಿ ಸಂಖ್ಯೆ:- 88977 26862
ಅಥವಾ ಆನ್‍ಲೈನ್ ನಲ್ಲೂ cuemath.ಕಾಂ ವೆಬ್ ಸೈಟ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. 4 ರಿಂದ 14 ವರ್ಷ ವಯೋಮಿತಿಯೊಳಗಿನ ಮಕ್ಕಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.
ಏನಿದು ಪೈಥಾಗೊರಸನ ಪ್ರಮೇಯ?: a square + b square = c square ಇದು ಗಣಿತ ಸರಳ ಹಾಗೂ ಪ್ರಧಾನ ಸೂತ್ರವಾಗಿದೆ.
ಅಗಸ್ಟ್ 15, 2017 (8/15/17 or 15/8/17): 8² + 15² = 17²
ಡಿಸೆಂಬರ್ 16, 2020 (12/16/20 or 16/12/20): 12² + 16² = 20²
15/08/2017 ವಿಶಿಷ್ಟ ದಿನಾಂಕವಾಗಿದ್ದು, 100 ವರ್ಷಗಳ ಬಳಿಕ ಪೈಥಾಗೊರಸನ ಪ್ರಮೇಯಕ್ಕೆ ಹೊಂದುವ ದಿನ ಬಂದಿದೆ. ಈ ರೀತಿ ದಿನಗಳನ್ನು ಪ್ಯಾಥಾಗೊರಸನ ದಿನವನ್ನಾಗಿ ಆಚರಿಸಲಾಗುತ್ತದೆ.












Click it and Unblock the Notifications