ಕಬ್ಬನ್‌ಪಾರ್ಕಿನಲ್ಲಿ ನಾಯಿ ಗಲೀಜು ಮಾಡಿದ್ರೆ ಮಾಲಿಕರೇ ಸ್ವಚ್ಛ ಮಾಡ್ಬೇಕು

ಬೆಂಗಳೂರು, ನವೆಂಬರ್ 13: ಕಬ್ಬನ್‌ ಪಾರ್ಕ್‌ನಲ್ಲಿ ಫೋಟೊ ಶೂಟ್‌ ಕುರಿತು ಸೂಚನೆ ನೀಡಿರುವ ಬೆನ್ನಲ್ಲೇ ತೋಟಗಾರಿಕೆ ಇಲಾಖೆ ಮತ್ತೊಂದು ಮಹತ್ವದ ಸೂಚನೆ ಹೊರಡಿಸಿದೆ.

ಕಬ್ಬನ್ ಪಾರ್ಕ್‌ನಲ್ಲಿ ನಿತ್ಯ ನೂರಾರು ಮಂದಿ ತಮ್ಮ ಮುದ್ದಿನ ಶ್ವಾನದ ಜೊತೆ ಕಬ್ಬನ್ ಪಾರರ್ಕಿಗೆ ವಾಯುವಿಹಾರಕ್ಕೆ ಬರುತ್ತಾರೆ. ಆಗ ಅವು ಕಂಡ ಕಂಡಲ್ಲಿ ಗಲೀಜು ಮಾಡುತ್ತದೆ. ಇದರಿಂದ ಉಳಿದ ವಾಯುವಿಹಾರಿಗೆ ತೊಂದರೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿರುವುದರಿಂದ ಈ ನಿರ್ಧಾರ ಕೈಗೊಂಡಿದೆ.

ಉದ್ಯಾನಕ್ಕೆ ಬರುವ ಸಾರ್ವಜನಿಕರು ಮತ್ತು ಪ್ರವಾಸಿಗಳಿಗಾಗಿ ಉದ್ಯಾನವನ್ನು ಸ್ವಚ್ಛವಾಗಿಡಬೇಕು ಎಂಬ ನಿಯಮ ಜಾರಿ ಮಾಡಲು ನಿರ್ಧರಿಸಿದೆ. ಇದನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ.

Cubbon Park Dog Owners Must Clean The Mess

ಬೆಂಗಳೂರು ನಗರದ ಸುತ್ತಮುತ್ತಲಿಂದ ಕಬ್ಬನ್ ಉದ್ಯಾನಕ್ಕೆ ಪ್ರತಿ ದಿನ ನೂರಾರು ಮಂದಿ ಜನ ನಾಯಿಯನ್ನು ಕರೆ ತರುತ್ತಾರೆ. ಇವುಗಳಿಂದ ಉದ್ಯಾನದಲ್ಲಿ ಜನ ಕೂರುವ ಸ್ಥಳದಲ್ಲಿ ಗಲೀಜು ಮಾಡಿಸುತ್ತಾರೆ. ಪರಿಣಾಮ ಉದ್ಯಾನಕ್ಕೆ ಬರುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ.

ಈ ಬಗ್ಗೆ ಹೈಕೋರ್ಟ್ ವಕೀಲರು ಹಾಗೂ ಪ್ರವಾಸಿಗರು ಹಲವು ಭಾರಿ ದೂರುಗಳನ್ನು ನೀಡಿದ್ದಾರೆ. ಅಲ್ಲದೆ, ಉದ್ಯಾನಕ್ಕೆ ಸಾಕು ನಾಯಿಗಳಿಗೆ ನಿರ್ಬಂಧ ವಿಧಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಕೆಲ ಹೋಟೆಲ್‌ಗಳ ಮಾಲೀಕರು ತಮ್ಮಲ್ಲಿ ಉಳಿದಿರುವ ಊಟವನ್ನು ಸಾಕಷ್ಟು ಬಾರಿ ತಂದು ಬೀದಿನಾಯಿಗಳಿಗೆ ಹಾಕುತ್ತಾರೆ. ಒಂದು ಸ್ಥಳ ಗುರುತಿಸಿ ನಾಯಿಗಳಿಗೆ ಊಟ ಹಾಕುವುದಕ್ಕೆ ವ್ಯವಸ್ಥೆ ಮಾಡಲಾಗುವುದು. ನಾಯಿಗಳು ತಿಂದು ಉಳಿದ ಆಹಾರದ ತ್ಯಾಜ್ಯವನ್ನು ಹೋಟೆಲ್ ಮಾಲೀಕರೇ ಸ್ವಚ್ಛಗೊಳಿಸಬೇಕು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+