ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ಆಸ್ಪತ್ರೆಯಲ್ಲಿ ಅತಿ ಕಡಿಮೆ ಬೆಲೆಗೆ ಸಿಟಿ ಸ್ಕ್ಯಾನ್ ಪರೀಕ್ಷೆ !

|
Google Oneindia Kannada News

ಬೆಂಗಳೂರು ಏಪ್ರಿಲ್ 28: ಕೊರೊನಾ ಸೋಂಕು ಪತ್ತೆ ಕುರಿತು ಮಾಡುವ ಆರ್‌ಟಿ-ಪಿಸಿಆರ್ ಪರೀಕ್ಷೆ ನಂಬಿಕೆ ಕಳೆದುಕೊಳ್ಳುತ್ತಿದೆ. ಜನರು ಸಿಟಿ ಸ್ಕ್ಯಾನ್ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಡಯಾಗ್ನೋಸ್ಟಿಕ್ ಸೆಂಟರ್‌ಗಳು ಒಂದು ಸ್ಕ್ಯಾನ್ ಗೆ 5 ರಿಂದ 6 ಸಾವಿರ ರೂ. ಶುಲ್ಕ ನಿಗದಿ ಪಡಿಸಿವೆ. ಇಷ್ಟೊಂದು ದುಡ್ಡು ಕೊಟ್ಟು ಎಲ್ಲಿ ಪರೀಕ್ಷೆ ಮಾಡಿಸಿಕೊಳ್ಳೋಣ ಎಂಬುವವರಿಗೆ ಒಂದು ಸಂತಸದ ಸುದ್ದಿ. ಜಯನಗರ ಜನರಲ್ ಆಸ್ಪತ್ರೆಯಲ್ಲಿ ಕೇವಲ 155 ರೂ.ಗೆ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದು. ಮಾತ್ರವಲ್ಲ ಅರ್ಧ ತಾಸಿನಲ್ಲಿ ರಿಪೋರ್ಟ್ ನಿಮ್ಮ ಕೈಗೆ ಸಿಗುತ್ತದೆ !

ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳು ದುಡ್ಡು ಮಾಡಲು ಇಳಿದಂತಿವೆ. ಆರ್‌ಟಿ-ಪಿಸಿಆರ್ ಪರೀಕ್ಷೆ ಮೂಡಿಸಿರುವ ಗೊಂದಲದಿಂದ ಬೆಂಗಳೂರಿನ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಅವಕಾಶ ಸಿಗಲ್ಲ ಎಂದು ಪರೀಕ್ಷೆಗೆ ಇಳಿದಿರುವ ಡಯಾಗ್ನೋಸ್ಟಿಕ್ ಸೆಂಟರ್‌ಗಳೇ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ.

"ಕೊರೊನಾ ಪತ್ತೆಗೆ RT-PCR ಪರೀಕ್ಷೆಗಿಂತ CT ಸ್ಕ್ಯಾನ್‌ ಉತ್ತಮ"

ಇನ್ನೊಂದಡೆ ಈ ಡಯಾಗ್ನೋಸ್ಟಿಕ್ ಕೇಂದ್ರಗಳೇ ಕೊರೊನಾ ಹರಡುವಿಕೆ ಹಾಟ್ ಸ್ಪಾಟ್‌ಗಳಾಗಿ ಬದಲಾಗಿವೆ. ಹೀಗಾಗಿ ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಜನರಿದ್ದಾರೆ. ಜೀವಕ್ಕಿಂತೂ ಹಣ ಮುಖ್ಯವಲ್ಲ ಎಂದು ಕೆಲವರು ಖಾಸಗಿಯವರ ಮೊರೆ ಹೋಗಿದ್ದಾರೆ. ಅಷ್ಟೊಂದು ಹಣ ಭರಿಸಲಾಗದವರು ಸರ್ಕಾರಿ ಸೇವೆಯ ಬಗ್ಗೆ ಮಾಹಿತಿ ಇಲ್ಲದೇ ಕಂಗಾಲಾಗಿದ್ದಾರೆ. ಆದರೆ ಜಯನಗರದ ತಿಲಕ್ ನಗರದಲ್ಲಿರುವ ಜಯನಗರ ಜನರಲ್ ಆಸ್ಪತ್ರೆಯಲ್ಲಿ ಇಡೀ ಬೆಂಗಳೂರಿನಲ್ಲಿ ಅತಿ ಕಡಿಮೆ ಬೆಲೆಗೆ ಸಿಟಿ ಸ್ಕ್ಯಾನ್ ಸೌಲಭ್ಯವಿದೆ.

 ಸಂಜಯ್ ಗಾಂಧಿ ಆಸ್ಪತ್ರೆ

ಸಂಜಯ್ ಗಾಂಧಿ ಆಸ್ಪತ್ರೆ

ಕೊರೊನಾ ಸೋಂಕಿತ ಅರವಿಂದ ಎಂಬುವರು ಈ ಕುರಿತ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗಾಗಿ ಹಂಚಿಕೊಳ್ಳುವ ಮೂಲಕ ಅರಿವು ಮೂಡಿಸುತ್ತಿದ್ದಾರೆ. ನನಗೆ ಕೊರೊನಾ ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಯಾವುದೇ ಲ್ಯಾಬ್‌ಗೆ ಹೋದರೂ ಐದಾರು ಸಾವಿರ ಅಂತ ಹೇಳಿದರು. ನನ್ನ ಸ್ನೇಹಿತರೊಬ್ಬರು ನೀಡಿದ ಮಾಹಿತಿ ಮೇರೆಗೆ ಸಂಜಯ್ ಗಾಂಧಿ ಆಸ್ಪತ್ರೆ ( ಈಗ ಜಯನಗರ ಜನರಲ್ ಆಸ್ಪತ್ರೆ) ಆಸ್ಪತ್ರೆಗೆ ಭೇಟಿ ನೀಡಿದೆ. ಅಲ್ಲಿ ಕೇವಲ ಐದು ರೂಪಾಯಿ ನೀಡಿ ಹೊರ ರೋಗಿ ಚೀಟಿ ಪಡೆದೆ. ಆನಂತರ ಕೇವಲ 150 ರೂ. ಫಿಲ್ಮಿ ಚಾರ್ಜ್ ಎಂದು ಪಡೆದು ಕೇವಲ 155 ರೂ.ಗೆ ಸಿಟಿ ಸ್ಕ್ಯಾನ್ ವರದಿ ಪಡೆದುಕೊಂಡೆ.

 ಜಯನಗರದಲ್ಲಿರುವ ಜನರಲ್ ಆಸ್ಪತ್ರೆ

ಜಯನಗರದಲ್ಲಿರುವ ಜನರಲ್ ಆಸ್ಪತ್ರೆ

ಸಾರ್ವಜನಿಕರು ಸಾವಿರಾರು ರೂಪಾಯಿ ಖಾಸಗಿ ಲ್ಯಾಬ್‌ಗಳಿಗೆ ಪಾವತಿ ಮಾಡುವ ಬದಲಿಗೆ ಇಲ್ಲಿಯೇ ಮಾಡಿಸಿಕೊಳ್ಳಬಹುದು. ಆಸ್ಪತ್ರೆಯಿಂದ ಸುಸಜ್ಜಿತ ವ್ಯವಸ್ಥೆ ಮಾಡಿದ್ದಾರೆ. ಕೇವಲ ಅರ್ಧ ತಾಸಿನಲ್ಲಿ ನನಗೆ ವರದಿ ಸಿಕ್ಕಿತು. ಯಾವ ಖಾಸಗಿ ಲ್ಯಾಬ್‌ನಲ್ಲಿ ಇಲ್ಲದ ಅತ್ಯುತ್ತಮ ಉಪಕರಣಗಳು ಅಲ್ಲಿವೆ ಎಂದು ಅರವಿಂದ ತನ್ನ ಅನುಭವವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆತ ಉಲ್ಲೇಖಿಸಿರುವ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಆ ರೀತಿಯ ಚಿಕಿತ್ಸೆ ಇಲ್ಲ. ಇರುವುದು ಜಯನಗರದಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ. ವೈರಲ್ ವಿಡಿಯೋದಲ್ಲಿ ಉಲ್ಲೇಖಿಸಿರುವ ಸಂಜಯ್ ಗಾಂಧಿ ಆಸ್ಪತ್ರೆ ಸಿಟಿ ಸ್ಕ್ಯಾನ್ ಸೆಂಟರ್ ಅಸಲಿ ಸತ್ಯವೇ ಬೇರೆಯಿದೆ.

ಬಿಯು ನಂಬರ್ ಹೆಸರಿನಲ್ಲಿ ಬಡವರ ಸಮಾಧಿ ಮಾಡ್ತಿದೆಯಾ ಸರ್ಕಾರ ?ಬಿಯು ನಂಬರ್ ಹೆಸರಿನಲ್ಲಿ ಬಡವರ ಸಮಾಧಿ ಮಾಡ್ತಿದೆಯಾ ಸರ್ಕಾರ ?

ಈ ಕುರಿತು ಸಂಜಯ್ ಗಾಂಧಿ ಆಸ್ಪತ್ರೆ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಕೇವಲ ಕೋವಿಡ್ ಅಲ್ಲದ ರೋಗಿಗಳಿಗೆ ಮಾತ್ರ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ. ಕೊರೊನಾ ಸೋಂಕಿತರಿಗೆ ಇಲ್ಲಿ ಸಿಟಿ ಸ್ಕ್ಯಾನ್ ಮಾಡುತ್ತಿಲ್ಲ. ಒಂದು ಸಿಟಿ ಸ್ಕ್ಯಾನ್‌ಗೆ 2200 ರೂ. ವೆಚ್ಚವಾಗುತ್ತದೆ. ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಇರುವರಿಗೆ ನಿಗದಿತ ಶುಲ್ಕದಲ್ಲಿ ಸ್ವಲ್ಪ ಕಡಿಮೆ ಆಗಲಿದೆ ಎಂದು ಸಂಜಯ್ ಗಾಂಧಿ ಆಸ್ಪತ್ರೆ ಲ್ಯಾಬ್ ತಜ್ಞರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಕೆ.ಜಿ ಜನರಲ್ ಆಸ್ಪತ್ರೆ

ಕೆ.ಜಿ ಜನರಲ್ ಆಸ್ಪತ್ರೆ

ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೂಡ ಸಿಟಿ ಸ್ಕ್ಯಾನ್ ಸೌಲಭ್ಯವಿದೆ. ಆದರೆ ಪ್ರತಿ ರೋಗಿಯ ಸಿಟಿ ಸ್ಕ್ಯಾನ್ ಗೆ 2200 ರೂ. ವೆಚ್ಚವಾಗುತ್ತದೆ. ಆದರೆ ಇಲ್ಲಿ ಕೊರೊನಾ ಸೋಂಕಿತರು, ಸೋಂಕಿತರಲ್ಲದವರೂ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಹೀಗಾಗಿ ಈ ಕೇಂದ್ರ ಕೊರೊನಾ ಸೋಂಕಿತರಲ್ಲದವರು ಸಿಟಿ ಸ್ಕ್ಯಾನ್ ಮಾಡಿಸುವುದು ಸೂಕ್ತವಲ್ಲ. ಸಿಟಿ ಸ್ಕ್ಯಾನ್ ಬಯಸಿ ಹೆಚ್ಚು ರೋಗಿಗಳು ಬರುತ್ತಿರುವ ಕಾರಣ ಕೋವಿಡ್ ನಿಯಮ ಅತಿ ಸೂಕ್ಷ್ಮವಾಗಿ ಪಾಲನೆ ಮಾಡಲಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.

Recommended Video

APMCಗೆ ಭೇಟಿ ನೀಡಿ ತರಕಾರಿ ಮಾರಾಟಗಾರರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ರವಿ | Oneindia Kannada
ವಿಕ್ಟೋರಿಯಾ ಕೊರೊನಾ ಸೋಂಕಿತರಿಗೆ ಸೀಮಿತ

ವಿಕ್ಟೋರಿಯಾ ಕೊರೊನಾ ಸೋಂಕಿತರಿಗೆ ಸೀಮಿತ

ಇನ್ನು ಬಹುದೊಡ್ಡ ಆಸ್ಪತ್ರೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕೂಡ ಸಿಟಿ ಸ್ಕ್ಯಾನ್ ಸೌಲಭ್ಯವಿದೆ. ಪಕ್ಕದಲ್ಲಿರುವ ಪಿಎಂಎಸ್ಎಸ್ ವೈ ಆಸ್ಪತ್ರೆಯಲ್ಲಿಯೂ ಇದೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆ ಮಾಡಲಾಗಿದೆ. ಹೀಗಾಗಿ ಕೊರೊನಾ ಪಾಸಿಟಿವ್ ವರದಿ ಇದ್ದವರಿಗೆ ಮಾತ್ರ ಆಸ್ಪತ್ರೆಯೊಳಗೆ ಪ್ರವೇಶ. ಹೀಗಾಗಿ ಇಲ್ಲಿಗೆ ಶಂಕಿತ ಕೋವಿಡ್ ರೋಗಿಗಳು ಸಿಟಿ ಸ್ಕ್ಯಾನ್‌ಗೆ ಹೋಗಲು ಅಸಾಧ್ಯ.ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕೊರೊನಾ ಶಂಕಿತರು ಹೋಗುವುದರಲ್ಲಿ ಅರ್ಥವಿಲ್ಲ ಎಂಬ ಮಾಹಿತಿಯನ್ನು ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕೊರೊನಾ ಪಾಸಿಟಿವ್ ಬಂದವರು ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಡಬಹುದು. ಬಿಪಿಎಲ್ ಕಾರ್ಡ್ ಹೊಂದಿದವರಿಗೆ 1000 ರೂ.ನಿಂದ 1500 ರೂ. ತಗುಲಬಹುದು ಎಂದು ವೈದ್ಯರು ತಿಳಿಸಿದ್ದಾರೆ.

English summary
The list of government hospitals in Bangalore, which are doing CT Scan for very low prices know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X