ರಾಜಕಾಲುವೆ ಹೆಸರಲ್ಲಿ ಕೋಟಿಗಟ್ಟಲೆ ಲೂಟಿ: ಅಶೋಕ್ ಟೀಕೆ
ಬೆಂಗಳೂರು, ಸೆಪ್ಟೆಂಬರ್ 28: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಬೆಂಗಳೂರಿನ ಮಹಾನಗರಗಳಲ್ಲಿ ರಸ್ತೆ, ರಾಜಕಾಲುವ ಹೆಸರಿನಲ್ಲಿ ಕೋಟಿ ಕೋಟಿ ರು. ಹಣವನ್ನು ಗುಳುಂ ಮಾಡಿದೆ ಎಂದು ಬಿಜೆಪಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಅನೇಕ ಯೋಜನೆಗಳಿಂದ ಕಾಂಗ್ರೆಸ್ ಕೋಟಿಗಟ್ಟಲೆ ಹಣ ನುಂಗಿದ್ದಾರೆ. ಬಿಬಿಎಂಪಿಯಲ್ಲಿ ಅಧಿಕಾರ ಗದ್ದುಗೆ ಹಿಡಿದ ನಂತರ ಇಂಥ ಅಕ್ರಮಗಳು ನಡೆದಿದೆ.

ಕಾಂಗ್ರೆಸ್ ಮಾಡಿರುವ ಅನಾಚಾರಗಳ ಪ್ರತಿಫಲವನ್ನು, ಅವರು ಮಾಡಿದ ಪಾಪದ ಕೂಸನ್ನು ಬಿಜೆಪಿ ಹೊರಲು ಸಿದ್ಧವಿಲ್ಲ. ಕಾಂಗ್ರೆಸ್ ಆಡಳಿತಕ್ಕೆ ಕೊನೆಗಾಣಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತದೆ.
''ಎದ್ದೇಳು ಸಿದ್ರಾಮಯ್ಯ, ನಿದ್ರಾಮಯ್ಯ'' ಎಂಬ ಘೋಷವಾಕ್ಯದೊಂದಿಗೆ ಕಾಂಗ್ರೆಸ್ ನ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುತ್ತೇವೆ ಎಂದು ಅವರು ತಿಳಿಸಿದರು.












Click it and Unblock the Notifications