Get Updates
Get notified of breaking news, exclusive insights, and must-see stories!

ಕ್ರೈಂ ರೌಂಡಪ್: ಉಬರ್ ಡ್ರೈವರ್ ಮೊಬೈಲಲ್ಲಿ ರೇಪ್ ಸೆಲ್ಫಿ ರಹಸ್ಯ

ಬೆಂಗಳೂರು, ಸೆ. 23: ನಿದ್ರೆಗೆ ಜಾರಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಕ್ಯಾಬ್ ಚಾಲಕನನ್ನು ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕ್ಯಾಬ್‌ನಲ್ಲೇ ಬಿಟ್ಟು ಹೋಗಿದ್ದ ಮೊಬೈಲ್‌ನಲ್ಲಿ ಅತ್ಯಾಚಾರಕ್ಕೂ ಮುನ್ನ ಆತ ಅರಬೆತ್ತಲೆಯಲ್ಲಿ ಯುವತಿಯ ಪೋಟೋ ಕ್ಲಿಕ್ಕಿಸಿಕೊಂಡಿದ್ದ ಸಂಗತಿ ಬಯಲಾಗಿದೆ. ಆತ ಮಾಡಿದ್ದ ಕೃತ್ಯವೇ ಮುಳವಾಗಿ ಇದೀಗ ಜೈಲು ಪಾಲಾಗಿದ್ದಾನೆ.

ಎಸ್ಎಸ್ಅರ್ ಲೇಔಟ್‌ನ ತನ್ನ ಸ್ನೇಹಿತನ ಮನೆಗೆ ಹೋಗಿದ್ದ ಯುವತಿ ರಾತ್ರಿ 3.20 ರ ಸುಮಾರಿಗೆ ಮನೆ ಬಿಟ್ಟು ಮುರುಗೇಶ್ ಪಾಳ್ಯಕ್ಕೆ ಕಾರು ಬುಕ್ ಮಾಡಿದ್ದಳು. ಕಾರಿನಲ್ಲಿ ಬರುವಾಗ ಯುವತಿ ನಿದ್ದೆಗೆ ಜಾರಿದ್ದಳು. ಯುವತಿಯನ್ನು ಎಬ್ಬಿಸಲು ಹೋದ ಕಾರು ಚಾಲಕ ದೇವರಾಜ್ ಆಕೆಯ ಮೈಮೇಲೆ ಬಿದ್ದು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಕುರಿತು ಸಂತ್ರಸ್ತ ಯುವತಿ 112 ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಯುವತಿಯ ಮನೆಗೆ ಹೋಗಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಮಹಿಳಾ ಅಧಿಕಾರಿಯನ್ನು ಕರೆಸಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆದುದೊಯ್ದು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಯುವತಿ ನೀಡಿದ ಮಾಹಿತಿ ಮೇರೆಗೆ ಉಬರ್ ಆರು ನಂಬರ್ ಹಾಗೂ ಆರೋಪಿಯ ವಿವರ ಪಡೆದು ಆವಲಹಳ್ಳಿಯ ರೂಮ್ ನಲ್ಲಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಧರಿಸಿದ್ದ ಬಟ್ಟೆಯನ್ನೇ ಧರಿಸಿದ್ದ ಆರೋಪಿಯನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ. ಸಂತ್ರಸ್ತ ಯುವತಿ ಹಾಗೂ ಆರೋಪಿತ ಚಾಲಕನಿಗೂ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅತ್ಯಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

Bengaluru crime Roundup: photo of the rape case accused in the mobile has hinted to the police to nab him

ಯುವತಿ ನಿದ್ರೆಯಲ್ಲಿದ್ದಾಗ, ಕಾರು ನಿಲ್ಲಿಸಿದ್ದ ಆರೋಪಿತ ಚಾಲಕ, ಯುವತಿಯನ್ನು ಅರೆಬೆತ್ತಲೆಗೊಳಿಸಿ ಸೆಲ್ಪಿ ತೆಗೆದುಕೊಂಡಿದ್ದ. ಕಾರಿನ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಯುವತಿಯ ಪಕ್ಕದಲ್ಲಿ ಕೂತು ಕಾರು ಚಾಲಕ ಸೆಲ್ಪಿ ತೆಗೆದುಕೊಂಡಿದ್ದು, ಮೊಬೈಲ್ ಪರಿಶೀಲನೆ ವೇಳೆ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯುವತಿ ಐಡಿಯಾದಿಂದ ಪ್ರಕರಣ ಪತ್ತೆ: ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಕಾರು ಚಾಲಕನ ಕೃತ್ಯ ನೋಡಿ ಯುವತಿ ಕಿರುಚಾಡಿದ್ದಳು. ಇದರಿಂದ ಭಯಗೊಂಡು ಕಾರಿನ ಹಿಂಬದಿ ಸೀಟಿನಿಂದ ಕೆಳಗೆ ಇಳಿದು ಹೊರಗೆ ಬಂದಿದ್ದ. ಈ ವೇಳೆ ಸೀಟ್ ಮೇಲೆ ಬಿದ್ದಿದ್ದ ಆರೋಪಿಯ ಮೊಬೈಲ್‌ನ್ನು ಯುವತಿ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾಳೆ. ಆ ಬಳಿಕ ಕಾರಿನಿಂದ ಮನೆಗೆ ತೆರಳಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮೊಬೈಲ್ ಹುಡುಕಿಕೊಂಡು ಹಳೇ ಸ್ಥಳಕ್ಕೆ ಬಂದಿದ್ದ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Bengaluru crime Roundup: photo of the rape case accused in the mobile has hinted to the police to nab him

ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಫೈನಾನ್ಸಿಯರ್ ಎಸ್ಕೇಪ್ :

ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರದಲ್ಲಿ ನಡೆದಿದೆ.

ಕಾಂತರಾಜ್ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ. ರೂಪಾ ಕೊಲೆಯಾದ ಮಹಿಳೆ. ಅನ್ನಪೂರ್ಣೇಶ್ವರಿನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಫೈನಾನ್ಷಿಯರ್ ಆಗಿರುವ ಕಾಂತರಾಜ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಿಯೂ ಕೆಲಸ ಮಾಡುತ್ತಿದ್ದ. ಈ ಹಿಂದೆ ವಕೀಲರ ಕುಟುಂಬದ ಮೂವರನ್ನು ಕೊಲೆ ಮಾಡಿ ಜೈಲಿಗೆ ಹೋಗಿದ್ದ ಕಾಂತರಾಜ್ ಬುಧವಾರ ಸಂಜೆ ಐದು ಗಂಟೆ ಸುಮಾರಿನಲ್ಲಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆನಂತರ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.

2005 ರಲ್ಲಿ ವಕೀಲರ ಕುಟುಂಬದ ಮೂವರನ್ನು ಕೊಲೆ ಮಾಡಿದ ಆರೋಪದಡಿ ಕಾಂತರಾಜ್ ಜೈಲಿಗೆ ಸೇರಿದ್ದ. ಇದೀಗ ಪತ್ನಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದು, ಅನ್ನಪೂರ್ಣೇಶ್ವರಿನಗರ ಪೊಲೀಸರು ಶೋಧ ನಡಸುತ್ತಿದ್ದಾರೆ.

Bengaluru crime Roundup: photo of the rape case accused in the mobile has hinted to the police to nab him

ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ:
ಏಳು ವರ್ಷದ ಬಾಲಕಿಯ ಮೇಲೆ 22 ವರ್ಷದ ಯುವಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಒಂದು ವಾರದ ಹಿಂದೆ ಏಳು ವರ್ಷದ ಬಾಲಕಿಯನ್ನು ಕರೆದೊಯ್ದಿರುವ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಅಪ್ರಾಪ್ತ ಬಾಲಕಿ ಯಾರಿಗೂ ಹೇಳಿಲ್ಲ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದಾಗ ಅತ್ಯಾಚಾರ ಸಂಗತಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಹೇಳಿಕೆ ಆಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಜಲ ಜಾಲ ಪೊಲೀಸರು ಅತ್ಯಾಚಾರ ಆರೋಪಿ ರುದ್ರೇಶ್‌ನನ್ನು ಬಂಧಿಸಿದ್ದಾರೆ. ಪೋಸ್ಕೊ ಕಾಯ್ದೆ ಆಡಿ ಕೇಸು ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+