ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

''ಡಿಜೆ ಹಳ್ಳಿ ಪ್ರಕರಣ ಸ್ವತಂತ್ರ ನ್ಯಾಯಾಂಗ ತನಿಖೆಗೆ ವಹಿಸಿ''

|
Google Oneindia Kannada News

ಬೆಂಗಳೂರು, ಆ. 17: ಬೆಂಗಳೂರು ನಗರದ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಧಾಳಿಗಳ ಒಟ್ಟು ಪ್ರಕರಣಗಳನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಲು ಸಿಪಿಐ (ಎಂ) ಒತ್ತಾಯಿಸಿದೆ.

Recommended Video

ಗಣಪತಿ ವಿಗ್ರಹ ತಯಾರಿಸುವ ಧಾರವಾಡದ ಕಲಾವಿದನ ಕೂಗು | Oneindia Kannada

ಈಚೆಗೆ, ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮಹಮದ್ ಕುರಿತ ಕೋಮು ಪ್ರಚೋದಕ ಮತ್ತು ಅವಹೇಳನಕಾರಿ ಪೋಸ್ಟಿಂಗ್ ಮತ್ತು ಆ ವಿಚಾರಕ್ಕೆ ಸಂಬಂಧಿಸಿ ದೂರು ದಾಖಲೆಯಲ್ಲಾದ ವಿಳಂಬವು, ಹಿಂಸಾಚಾರಕ್ಕೆ ತಿರುಗಿ, ಬೆಂಗಳೂರಿನ ಪುಲಿಕೇಶಿ ನಗರದ ಶಾಸಕರ ಮನೆ ಹಾಗೂ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆದು ಕೋಟ್ಯಾಂತರ ರೂಗಳ ಆಸ್ತಿ- ಪಾಸ್ತಿಗೆ ಹಾನಿಯಾಗಿದೆ. ಅದೇ ರೀತಿ, ಗೋಲಿಬಾರ್ ನಲ್ಲಿ ಮುವ್ವರು ಕೊಲ್ಲಲ್ಪಟ್ಟಿದ್ದಾರೆ.

ಡಿಜೆ ಹಳ್ಳಿ ಗಲಭೆ: ಆರೋಪಿಗಳ ಮೇಲೆ SC-ST ಕಾಯ್ದೆಯಡಿ ಎಫ್ಐಆರ್ಡಿಜೆ ಹಳ್ಳಿ ಗಲಭೆ: ಆರೋಪಿಗಳ ಮೇಲೆ SC-ST ಕಾಯ್ದೆಯಡಿ ಎಫ್ಐಆರ್

ಇದೊಂದು, ಮುಂಬರುವ ದಿನಗಳ ರಾಜಕೀಯ ದುರ್ಲಾಭಕ್ಕಾಗಿ ಉಂಟು ಮಾಡಲಾಗಿರುವ ದುಷ್ಕೃತ್ಯವಾಗಿದೆ. ಈ ಒಟ್ಟು ಅಹಿತಕರ ಘಟನೆಗಳನ್ನು ಮತ್ತು ಈ ದುರ್ಘಟನೆಗಳಿಗೆ ಕಾರಣವಾದ ಎಲ್ಲ ಶಕ್ತಿಗಳನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

CPIM demands Independent Judicial probe on to DJ Halli riot

ಅವರ ಮೇಲೆ ಕಠಿಣ ಕಾನೂನಿನ ಕ್ರಮಗಳನ್ನು ಜರುಗಿಸುವ ಬೇಕು ಹಾಗೂ ಆ ಪ್ರದೇಶದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗೆ ಅಗತ್ಯ ಕ್ರಮ ವಹಿಸಬೇಕೆಂದು ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.

ಸಾಮಾಜಿಕ ಜಾಲತಾಣ ಮೇಲೆ ನಿಯಂತ್ರಣ ಅಗತ್ಯ
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸರಕಾರದ ಯಾವುದೇ ನಿಯಂತ್ರಣವಿಲ್ಲದೇ ಇರುವುದರಿಂದ, ಕೋಮು ಪ್ರಚೋಧಕ ಅವಹೇಳನಕಾರಿ ಪೋಸ್ಟಿಂಗ್‍ಗಳು, ದೂಷಣೆಗಳು, ಸ್ವೇಚ್ಛಾಚಾರಗಳು, ಈ ದಿನಗಳಲ್ಲಿ ನಿರಂತರವಾಗಿ ಕಂಡು ಬರುತ್ತಲೇ ಇವೆ. ಇದರಿಂದ ಧಾರ್ಮಿಕ ಮುಖಂಡರು, ಪ್ರವಾದಿಗಳು, ರಾಜಕೀಯ ನಾಯಕರು, ಪ್ರಗತಿಪರ ಸಾಹಿತಿಗಳು ಗಂಭೀರವಾಗಿ ನಿಂದನೆಗೊಳಗಾಗುತ್ತಿದ್ದಾರೆ. ಬೆದರಿಸಲ್ಪಡುತ್ತಿದ್ದಾರೆ.

ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!

ದೃಶ್ಯ ಮತ್ತಿತರೆ ಸಾಮಾಜಿಕ ಜಾಲ ತಾಣವೂ ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲಿನ ಅವಹೇಳನಕಾರಿ ಹಾಗೂ ಕೋಮು ಪ್ರಚೋದಕ ದೂಷಣೆಗಳು ಮತ್ತು ಪೋಸ್ಟಿಂಗ್ ಗಳ ಮೇಲೆ ತಕ್ಷಣ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

ಅದೇ ರೀತಿ, ಈ ದಾಳಿಗಳ ಒಟ್ಟು ಪ್ರಕರಣಗಳನ್ನು ಒಂದು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕು. ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಲು, ಜನತೆಯ ಆತಂಕವನ್ನು ನಿವಾರಿಸಲು, ಅಗತ್ಯ ಕ್ರಮವಹಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾಗಿ) ರಾಜ್ಯ ಸಮಿತಿ ಕಾರ್ಯದರ್ಶಿ ಯು. ಬಸವರಾಜ ಕೋರಿದ್ದಾರೆ.

English summary
CPIM today demanded Independent Judicial probe on to Devarajeevanahalli (DJ) Halli, Kadugondahalli(KG halli) riot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X