• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ವರ್ಗಾವಣೆಗೆ ಸಿಪಿಐ ಖಂಡನೆ

|

ಬೆಂಗಳೂರು, ಮೇ 12: ಕೊವಿಡ್ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ರಾಜ್ಯ ಸಕಾ೯ರದ ವಿವಿಧ ಇಲಾಖೆಗಳಲ್ಲೆ ಪರಿಣಾಮಕಾರಿಯಾಗಿ ಕಾರ್ಯನಿವ೯ಹಿಸಿದ್ದ ಕಾಮಿ೯ಕ ಇಲಾಖೆಯ ಪ್ರಧಾನ ಕಾಯದಶಿ೯ಗಳಾದ ಮಣಿವಣ್ಣನ್ ಅವರನ್ನು ರಾಜ್ಯ ಸಕಾ೯ರವು ವಗಾ೯ವಣೆ ಮಾಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳಲ್ಲಿ ತಂದಿರುವ ಕಾಮಿ೯ಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡುವ ಕ್ರಮಗಳನ್ನು ಸುಗ್ರೀವಾಜ್ಞೆ ಹೊರಡಿಸುವ ತನ್ನ ಕೈಂಕಾರ್ಯಕ್ಕೆ ಅನುವುಗೊಳಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್ ಅವರಿಗೆ ಕಾಮಿ೯ಕ ಇಲಾಖೆಯ ಪ್ರಧಾನ ಕಾಯ೯ದಶಿ೯ ಹೊಣೆಯನ್ನು ವಹಿಸಿದೆ ಎಂದು ಆರೋಪ ಮಾಡಲಾಗಿದೆ.

ಲಾಕ್ ಡೌನ್ ಭಾರತದಲ್ಲಿ ದುಗ್ಗಾಣಿ ಇಲ್ಲದೇ ದಕ್ಕಿದ್ದು ದುಃಖ ಮಾತ್ರ!

ರಾಜ್ಯದ ಕಾಮಿ೯ಕರ ಹಿತಕ್ಕಿಂತ ಕಾಪೋ೯ರೇಟ್ ಬಂಡವಾಳದ ಹಿತವೇ ರಾಜ್ಯ ಸಕಾ೯ರಕ್ಕೆ ಮುಖ್ಯವಾಗಿದೆ ಎಂಬುದನ್ನು ಬಿಜೆಪಿ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ಏನಾದರು ಮಾಡಿ ಕಾಮಿ೯ಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡಲು ಕೊವಿಡ್ ಪರಿಹಾರವನ್ನು ಸಹಾ ಬಲಿಕೊಡಲು ರಾಜ್ಯ ಸಕಾ೯ರ ಹಿಂಜರಿಯದು ಎಂಬುದನ್ನು ಇದು ತೋರುತ್ತದೆ ಎಂದು ಟೀಕಿಸಿದ್ದಾರೆ.

ತನ್ನ ಬಂಡವಾಳಗಾರರ ಪರ ನೀಲುಮೆಯ ಸಾಧನೆಗಾಗಿ ಒಬ್ಬ ದಕ್ಷ ಮತ್ತು ಕೊವಿಡ್ ಪರಿಹಾರ ಕಾಯ೯ವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಲ್ಲಿ ಯಶಸ್ಸು ಕಾಣುತ್ತಿದ್ದ ಅಧಿಕಾರಿಯನ್ನು ಸಹ ಸಹಿಸದು ಬಿಜೆಪಿ ಸರಕಾರ ಎಂದು ಸಿಪಿಐ(ಎಂ) ಖಂಡಿಸಿದೆ.

ರಾಜ್ಯ ಬಿಜೆಪಿ ಸಕಾ೯ರದ ಇಂತಹ ಕ್ರಮಗಳೆ ಕೊವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಜನತೆಗೆ ಪರಿಹಾರವನ್ನು ಸಮ೯ಪಕವಾಗಿ ಸಮಥ೯ವಾಗಿ ನಿವ೯ಹಿಸುವಲ್ಲಿ ವಿಫಲವಾಗುತ್ತಿದೆ. ರಾಜ್ಯ ಸಕಾ೯ರದಲ್ಲಿನ ದ್ವಿಅಧಿಕಾರ ಕೇಂದ್ರಗಳು ಹಾಗು ಸೂಪರ್ ಸಿಎಂ ಸಂತೋಷ್ ಕಪಿಮುಷ್ಟಿಯಲ್ಲಿ ರಾಜ್ಯ ಸಕಾ೯ರವು ಸಿಲುಕಿರುವ ಪರಿಣಾಮ ಇಂತಹ ದೂರದೃಷ್ಟಿ ಹೀನ ಆಡಳಿತಾತ್ಮಕ ಕ್ರಮಗಳನ್ನು ರಾಜ್ಯದ ಜನತೆ ಕಣುವಂತಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಹೊರರಾಜ್ಯದ ಕನ್ನಡಿಗರನ್ನು ಕರೆ ತರಲು ಕಾಸು ಕೊಡುತ್ತಂತೆ ಕೆಪಿಸಿಸಿ!

ಕೋವಿಡ್ ಲಾಕ್ಡೌನ್ ಸಂತ್ರಸ್ತರಿಗೆ ಪರಿಹಾರವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಶ್ರೀ.ಮಣಿವಣ್ಣನ್ ವಗಾ೯ವಣೆಯನ್ನು ಕೂಡಲೆ ರದ್ದುಪಡಿಸಿ ಕಾಮಿ೯ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅವರನ್ನೇ ಮುಂದುವರಿಸಬೇಕೆಂದು ಸಿಪಿಐ (ಎಂ) ರಾಜ್ಯ ಸಕಾ೯ರವನ್ನು ಒತ್ತಾಯಿಸಿದೆ.

English summary
CPI (m) has Condemned the transfer of labor secretary captain Manivannan amid coronavirus lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X