Covid Increase: ಎಚ್ಚೆತ್ತ ಬೆಂಗಳೂರು, ಸಂಭವನೀಯ ಅಪಾಯ ತಡೆಗೆ ತ್ಯಾಜ್ಯ ನೀರು ಪರೀಕ್ಷೆಗೆ ಮುಂದಾ ವಿಜ್ಞಾನಿಗಳು
ಭಾರತದಾದ್ಯಂತ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಈ ಸಂಬಂಧ ರಾಷ್ಟ್ರಮಟ್ಟದಲ್ಲಿ ಅಲ್ಲದೇ ನಗರಮಟ್ಟದಲ್ಲಿ ಎಚ್ಚರಿಕೆ ಅತ್ಯವಾಗಿದ್ದು, ಬೆಂಗಳೂರಿನಲ್ಲೂ ಆರೋಗ್ಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಬೆಂಗಳೂರು, ಮಾರ್ಚ್ 23: ಭಾರತದ ದೇಶಾದ್ಯಂತ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಈ ಸಂಬಂಧ ರಾಷ್ಟ್ರಮಟ್ಟದಲ್ಲಿ ಅಲ್ಲದೇ ನಗರಮಟ್ಟದಲ್ಲಿ ಎಚ್ಚರಿಕೆ ಅತ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಆರೋಗ್ಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಸಹಕಾರದಲ್ಲಿ ವಿವಿಧ ಸಂಸ್ಥೆಗಳ ವಿಜ್ಞಾನಿಗಳು ಕೊರೊನಾ ಏರಿಕೆಗೆ ಕಾರಣ, ಹರಡುವಿಕೆ ಮತ್ತು ಸಂಭವನೀಯ ಅಪಾಯ ಕುರಿತು ಎಚ್ಚೆತ್ತುಕೊಂಡಿದ್ದಾರೆ. ಅದಕ್ಕಾಗಿ ಒಚರಂಡಿ/ತ್ಯಾಜ್ಯ ನೀರಿನ ಕಣ್ಗಾವಲು ಕಾರ್ಯ ಮುಂದುವರಿಸಿದ್ದಾರೆ.

ಬೆಂಗಳೂರಿನ CSIR-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಅಣ್ವಿಕ ಜೀವಶಾಸ್ತ್ರ (CCMB) ಹಾಗೂ ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ & ಸೊಸೈಟಿ (TIGS)ಯ ವಿಜ್ಞಾನಿಗಳು ಕೋವಿಡ್-19 ಹರಡುವಿಕೆಯನ್ನು ಪರಿಶೀಲಿಸಲು ಪರಿಣಾಮಕಾರಿಯಾದ ಒಳಚರಂಡಿ ಕಣ್ಗಾವಲು ಕಾರ್ಯ ಆರಂಭಿಸಿದ್ದಾರೆ. ಜನರಲ್ಲಿ ಡೆಂಗ್ಯೂ, ಶೀತ ಜ್ವರ, ಕೊರೊನಾ ಏರಿಕೆಯಂತಹ ಕಾರಣಗಳಿಂದಾಗಿ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಎಸ್‌ಟಿಪಿ ತ್ಯಾಜ್ಯ ನೀರು ತಪಾಸಣೆ
ಈಗಾಗಲೇ ಜನರಿಗೆ ಬಂದೊದಗಿದ ರೋಗಕಾರಕಗಳ ಮುನ್ಸೂಚನೆ ಪರಿಗಣಿಸಿ ಹಲವು ಮಾದರಿ ತಪಾಸಣೆ ನಡೆಸಲಾಗಿದೆ. ದೇಶದಾದ್ಯಂತ ಮಹಾನಗರ ಪಾಲಿಕೆ/ಮುನ್ಸಿಪಲ್ ಕಾರ್ಪೊರೇಷನ್‌ಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ಅಗತ್ಯ ಶಿಷ್ಟಾಚಾರ (ಪ್ರೋಟೋಕಾಲ್) ಸಹಿತ ನಗರ ಪ್ರದೇಶಗಳಲ್ಲಿ ತೆರೆದ ಒಳಚರಂಡಿ ಇಲ್ಲವೇ ತ್ಯಾಜ್ಯ ನೀರು ಸಂಸ್ಕರಣಾ ಘಟಕ (STP)ಗಳಲ್ಲಿ ಮಾದರಿ ಪರಿಶೀಲನೆಗೆ ನಿರ್ಧರಿಸಲಾಗಿದೆ ಎಂದು TIGS ನಿರ್ದೇಶಕ ರಾಕೇಶ್ ಮಿಶ್ರಾ ವಿವರಿಸಿದರು.

ಕೊರೊನಾ ವೈರಸ್ ಸಂಪೂರ್ಣವಾಗಿ ತಗ್ಗಿಲ್ಲ. ಸದ್ಯ ಹೆಚ್ಚಾಗುತ್ತಿದೆ. ಈ ಕಾರಣಗಳಿಂದಲೇ ಎಸ್‌ಟಿಪಿಗಳಲ್ಲಿ ತ್ಯಾಜ್ಯ ನೀರು ಸಂಗ್ರಹಿಸಿ, ಪರೀಕ್ಷೆಗಳ ಒಳಪಡಿಸಲಾಗುತ್ತಿದೆ. ಅದರಿಂದ ಪ್ರತಿನಿತ್ಯ ದಾಖಲಾಗುತ್ತಿರುವ ಪಾಸಿಟಿವ್ ಪ್ರಕರಣಗಳ ಅಂಕಿ ಸಂಖ್ಯೆ, ತೀವ್ರತೆಗೆ ಕಾರಣ ತಿಳಿಯಬಹುದಾಗಿದೆ. ಇಂತಹ ತಪಾಸಣೆ, ಮುಂದಾಲೋಚನೆಗಳಿಂದ ಸಂಭವನೀಯ ಸೋಂಕಿನ ಅಪಾಯ/ಅಲೆ ಕುರಿತು ಮುಂಚಿತವಾಗೇ ತಿಳಿದುಕೊಳ್ಳಬಹುದು ಮಿಶ್ರಾ ಅವರು ತಿಳಿಸಿದರು.
ಸಣ್ಣ ನಗರಗಳಿಗೂ ತ್ಯಾಜ್ಯ ನೀರು ಕಣ್ಗಾವಲು ವಿಸ್ತರಣೆ
ಸಿಸಿಎಂಬಿ ಮತ್ತು ಟಿಐಜಿಎಸ್ ಜೊತೆಗ ಅಶೋಕ ವಿಶ್ವವಿದ್ಯಾನಿಲಯ, ಪುಣೆ ಜ್ಞಾನ ಸಮೂಹ ಮತ್ತು ಬೆಂಗಳೂರಿನ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ ಸೇರಿದದಂತೆ ಇತರ ಸಂಸ್ಥೆಗಳು ದೇಶದಾದ್ಯಂತ ಒಳಚರಂಡಿ ಮಾದರಿಗಳನ್ನು ಸಂಗ್ರಹಿಸಲು ತೊಡಗಲಿವೆ. ಈ ಸಲ ಈ ಕಣ್ಗಾವಲು ಕಾರ್ಯ ಯೋಜನೆ ಕೇವಲ ಬೆಂಗಳೂರಿನಂತ ಪ್ರದೇಶಗಳಿಗೆ ಸೀಮಿತವಾಗದೇ
ಸಣ್ಣ ನಗರ/ಪಟ್ಟಣಗಳಿಗೂ ವಿಸ್ತರಿಸುತ್ತಿದೆ.
ಬೆಂಗಳೂರಲ್ಲಿ ಸುಮಾರು 18 ಸ್ಥಳಗಳಲ್ಲಿ ತೆರೆದ ಚರಂಡಿಗಳಿಂದ ಮಾದರಿ ಸಂಗ್ರಹಿಸಿರುವ ವಿಜ್ಞಾನಿಗಳು ಕೋವಿಡ್ ಕುರಿತು ಹಲವು ವಿಷಯಗಳನ್ನು ಸಂಶೋಧಿಸುತ್ತಿದ್ದಾರೆ. ಒಳಚರಂಡಿ ನಿರಂತರ ಹರಿಯವುದರಿಂದ ಅಲ್ಲಿನ ನೀರಿನಿಂದ ತಪಾಸಣೆ ಕಷ್ಟ.
ಹೀಗಾಗಿ ಬೆಂಗಳೂರಿನಲ್ಲಿ ಬಿಬಿಎಂಪಿ ಅನುಮತಿ ಮೇರೆಗೆ ವಿಜ್ಞಾನಿಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ಅಗತ್ಯ ನೀರು ಸಂಗ್ರಹಿಸುತ್ತಿದ್ದಾರೆ.
ಏಕೆಂದರೆ ಒಬ್ಬ ಸೋಂಕಿತ ವ್ಯಕ್ತಿ ಶೌಚಾಲಯ ಬಳಸಿದ್ದಲ್ಲಿ ಅಲ್ಲಿಂದ ಹರಿದು ಬರುವ ನೀರು ಒಳಚರಂಡಿ ಮೂಲಕ ಹರಿದು ಹೋಗುತ್ತದೆ. ಆದರೆ ಎಸ್‌ಟಿಪಿಯಲ್ಲಿ ಎಲ್ಲ ಮೂಲಗಳಿಂದ ಹರಿವು ಬರುವ ನೀರು ಸಲ್ವ ದಿನಗಳ ಕಾಲ ಅಲ್ಲಿಯೇ ಇರುತ್ತದೆ. ಇದರಿಂದ ಎಸ್‌ಟಿಪಿಯಲ್ಲಿನ ನೀರು/ಮಾದರಿ ಸಂಗ್ರಹದಿಂದ ನಿಖರ ಮೌಲ್ಯಮಾಪನ ಸಾಧ್ಯವಾಗಲಿದೆ ಎಂಬುದು ವಿಜ್ಞಾನಿಗಳು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಕೊರೊನಾ ವೈರಸ್ ಬಗ್ಗೆ ಪ್ರತಿಕ್ರಿಯಿಸಿ ಹಿರಿಯ ವಿಜ್ಞಾನಿಯೊಬ್ಬರು, ಕೊರೊನಾ ಸೋಂಕಿನ ಅಲೆಯಲ್ಲಿ ಎದುರಾಗುವುದಿಲ್ಲ. ಆದರೆ ವೈರಸ್ ತೀವ್ರತೆ, ಅನಾರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಕೊರೊನಾ ಇಲ್ಲವೆಂದು ನಿರ್ಲಕ್ಷ್ಯ ವಹಿಸುವುದು ಬೇಡ. ಅಗತ್ಯ ಜಾಗೃತಿ ವಹಿಸಿ. ಮೂಗಿನ ಮೂಲಕ ಬೇಕಿದ್ದಲ್ಲಿ ಲಸಿಕೆ ಪಡೆದರೂ ಯಾವುದೇ ತೊಂದರೆ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾರ್ಗಸೂಚಿ ಪಾಲಿಸಿ ಎಂದು ಅವರು ಸಲಹೆ ನೀಡಿದ್ದಾರೆ.












Click it and Unblock the Notifications