ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್; ಬೆಂಗಳೂರಿನ 25 ಖಾಸಗಿ ಆಸ್ಪತ್ರೆಗಳಿಗೆ ಬೀಗ!

|
Google Oneindia Kannada News

ಬೆಂಗಳೂರು, ಜುಲೈ 19 : ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಕೋವಿಡ್ - 19 ಪರಿಣಾಮವಾಗಿ ನಗರದ 25 ಖಾಸಗಿ ಆಸ್ಪತ್ರೆಗಳು ಇದುವರೆಗೂ ಬಾಗಿಲು ಮುಚ್ಚಿವೆ, ಇನ್ನೂ ಹಲವು ಆಸ್ಪತ್ರೆಗಳು ಈ ಹಾದಿಯಲ್ಲಿ ಸಾಗಿವೆ.

Recommended Video

ಕೊರೊನ ವಿರುದ್ಧದ ಯುದ್ಧದಲ್ಲಿ ಗೆದ್ದ Sharath Bacche Gowda | Oneindia Kannada

ಸಿಬ್ಬಂದಿಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಆಸ್ಪತ್ರೆಗಳು ಮುಚ್ಚಿವೆ ಎಂದು ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಮ್ಸ್‌ ಒಕ್ಕೂಟ (ಫಾನಾ) ಹೇಳಿದೆ. ಕೆಲವು ಆಸ್ಪತ್ರೆಗಳು ಹೊರ ರೋಗಿಗಳಿಗೆ ಮಾತ್ರ ಚಿಕಿತ್ಸೆಯನ್ನು ನೀಡುತ್ತಿವೆ ಎಂದು ಘಾನಾ ತಿಳಿಸಿದೆ.

 ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ

ನಗರದ ಚಿಕ್ಕಪುಟ್ಟ ನರ್ಸಿಂಗ್ ಹೋಂಗಳು ಸಿಬ್ಭಂದಿಗಳ ಕೊರತೆಯನ್ನು ಎದುರಿಸುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ನಗರದ 384 ಆಸ್ಪತ್ರೆಗಳ ಪೈಕಿ 58 ಆಸ್ಪತ್ರೆಗಳು ಬಾಗಿಲು ಮುಚ್ಚಿವೆ. ಕೋವಿಡ್ ಸಂದರ್ಭದಲ್ಲಿ ಈ ಆಸ್ಪತ್ರೆಗಳನ್ನು ಉಪಯೋಗಿಸಿಕೊಳ್ಳಬಹುದಿತ್ತು.

ಕೊವಿಡ್ ಮಧ್ಯೆ ವಿಶೇಷ ಮೈಲಿಗಲ್ಲು ಸಾಧಿಸಿದ ವಾಣಿವಿಲಾಸ ಆಸ್ಪತ್ರೆಕೊವಿಡ್ ಮಧ್ಯೆ ವಿಶೇಷ ಮೈಲಿಗಲ್ಲು ಸಾಧಿಸಿದ ವಾಣಿವಿಲಾಸ ಆಸ್ಪತ್ರೆ

COVID Effect Bengaluru 25 Private Hospital Closed

ಮಾರ್ಚ್‌ನಲ್ಲಿ ಸಮಸ್ಯೆಗಳು ಆರಂಭವಾಯಿತು. ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆಯಾದಾಗ ಹೋರ ರೋಗಿಗಳ ಸಂಖ್ಯೆ ಹೆಚ್ಚಾಯಿತು. ಆಸ್ಪತ್ರೆಗಳು ನರ್ಸ್, ವಾರ್ಡ್‌ ಬಾಯ್‌ಗಳಿಗೆ ವಾಪಸ್ ಹೋಗುವಂತೆ ತಿಳಿಸಿತು. ಕೆಲವರು ಊರಿಗೆ ಹೋದವರು ವಾಪಸ್ ಆಗಲೇ ಇಲ್ಲ. ಇದರಿಂದಾಗಿ ಸಿಬ್ಬಂದಿ ಕೊರತೆ ಉಂಟಾಗಿದೆ.

 ಮಂಗಳೂರು; ಆಸ್ಪತ್ರೆ ಗೇಟ್ ಮುರಿದು ಕೊರೊನಾ ಸೋಂಕಿತ ಪತ್ನಿ, ಮಗು ಕರೆದೊಯ್ದ ಪತಿ ಮಂಗಳೂರು; ಆಸ್ಪತ್ರೆ ಗೇಟ್ ಮುರಿದು ಕೊರೊನಾ ಸೋಂಕಿತ ಪತ್ನಿ, ಮಗು ಕರೆದೊಯ್ದ ಪತಿ

ಮೊದಲು 150 ಸಿಬ್ಭಂದಿಗಳಿದ್ದರು ಈಗ 12 ಜನರು ಇದ್ದಾರೆ. ಸರ್ಕಾರ ಸಿಬ್ಬಂದಿಗಳನ್ನು ನೀಡಿದರೆ ನಾವು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತೇವೆ ಎಂದು ಜಯನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರು ಹೇಳಿದ್ದಾರೆ.

"ಸರ್ಕಾರ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡದಿದ್ದಲ್ಲಿ ವಿದ್ಯುತ್, ನೀರು ಸಂಪರ್ಕ ಕಡಿತಗೊಳಿಸುವ ಬೆದರಿಕೆ ಹಾಕುತ್ತಿದೆ. ಕೋವಿಡ್ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಐಸಿಯು ವ್ಯವಸ್ಥೆ ಬೇಕು. ಐಸಿಯು ನಡೆಸಲು ಪ್ರತ್ಯೇಕ ಸಿಬ್ಬಂದಿ ಬೇಕಾಗುತ್ತದೆ" ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್, ಸ್ವಚ್ಛತಾ ಸಿಬ್ಬಂದಿಗಳು ಕೆಲಸ ಬಿಟ್ಟಿದ್ದಾರೆ. ನಮ್ಮ ನರ್ಸಿಂಗ್ ಹೋಂ ಚಟುವಟಿಕೆ ಸ್ಥಗಿತಗೊಳಿಸಿ ಕೇವಲ ಹೊರ ರೋಗಿಗಳನ್ನು ನೋಡುತ್ತಿದ್ದೇವೆ. ಸರ್ಕಾರ ಸಣ್ಣ ನರ್ಸಿಂಗ್ ಹೋಂಗಳ ಸಹಾಯಕ್ಕೆ ಬರುತ್ತಿಲ್ಲ ಎಂದು ವೈದ್ಯರೊಬ್ಬರು ಹೇಳಿದ್ದಾರೆ.

ಈಗ ಬಂದ್ ಆಗಿರುವ ಖಾಸಗಿ ಆಸ್ಪತ್ರೆಗಳು ಬಾಗಿಲು ತೆರೆಯುವುದು ಕಷ್ಟವಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ಅನ್ವಯ ಆಸ್ಪತ್ರೆ ನಡೆಸಲು ಸಾಕಷ್ಟು ನಿಯಮಗಳಿವೆ. ಇವುಗಳನ್ನು ಪಾಲನೆ ಮಾಡುತ್ತಾ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟದ ಕೆಲಸವಾಗಿದೆ.

English summary
At least 25 private hospital and small nursing home in Bengaluru city closed after the COVID 19. Hospital facing staff shortage and other crisis said Private Hospitals and Nursing Homes Association (PHANA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X