ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣ ಇಳಿಕೆ: 1 ಸಾವಿರಕ್ಕಿಂತ ಕಡಿಮೆ ಸೋಂಕು ಪತ್ತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆ ಆಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಕೋವಿಡ್‌ ಪ್ರಕರಣಗಳಲ್ಲಿ ಅಧಿಕ ಪಾಲನ್ನು ಹೊರುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯು ಭಾರೀ ಇಳಿಕೆ ಕಂಡಿದೆ. ಸೋಮವಾರ ಬೆಂಗಳೂರಿನಲ್ಲಿ ಒಂದು ಸಾವಿರಕ್ಕಿಂತ ಕಡಿಮ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿ ಆಗಿದೆ.

ಸೋಮವಾರ ಕರ್ನಾಟಕ ರಾಜ್ಯದಲ್ಲಿ ದೈನಂದಿನ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಮತ್ತಷ್ಟು ಇಳಿಕೆ ಕಂಡಿದೆ. ಕರ್ನಾಟಕದಲ್ಲಿ ಸೋಮವಾರ 1,568 ಹೊಸ ಕೋವಿಡ್‌ ಪ್ರಕರಣಗಳು ವರದಿ ಆಗಿದೆ. ಈ ಮೂಲಕ ರಾಜ್ಯದ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆಯು 39,28,237ಕ್ಕೆ ಏರಿಕೆ ಕಂಡು ಬಂದಿದೆ.

ಫೆ.14: ವಿಶ್ವದ ಯಾವ ರಾಷ್ಟ್ರದಲ್ಲಿ ಎಷ್ಟು ಕೊವಿಡ್ ಸೋಂಕಿತರು ಗುಣಮುಖ?ಫೆ.14: ವಿಶ್ವದ ಯಾವ ರಾಷ್ಟ್ರದಲ್ಲಿ ಎಷ್ಟು ಕೊವಿಡ್ ಸೋಂಕಿತರು ಗುಣಮುಖ?

ಈ ಸಂದರ್ಭದಲ್ಲೇ ಕರ್ನಾಟಕದಲ್ಲಿ ಸೋಮವಾರ 25 ಮಂದಿ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯು 39,665ಕ್ಕೆ ಏರಿದೆ. ಇನ್ನು ಈ ನಡುವೆ ರಾಜ್ಯದಲ್ಲಿ ಹೆಚ್ಚಿನ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಮವಾರ 6,025 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೋವಿಡ್‌ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು 38,57,323ಕ್ಕೆ ಹೆಚ್ಚಳವಾಗಿದೆ.

 ಬೆಂಗಳೂರು: 40 ದಿನದಲ್ಲಿ 350 ಮರಣ, ಸಾವಿನ ವಿಶ್ಲೇಷಣೆಗೆ ಹೊರಟ ಬಿಬಿಎಂಪಿ ಬೆಂಗಳೂರು: 40 ದಿನದಲ್ಲಿ 350 ಮರಣ, ಸಾವಿನ ವಿಶ್ಲೇಷಣೆಗೆ ಹೊರಟ ಬಿಬಿಎಂಪಿ

 ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ

ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ

ಬೆಂಗಳೂರಿನಲ್ಲಿ ಸೋಮವಾರ 754 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿ ಆಗಿದೆ. ಕರ್ನಾಟಕದಲ್ಲಿ ಸೋಮವಾರ 1,568 ಹೊಸ ಕೋವಿಡ್‌ ಪ್ರಕರಣಗಳು ವರದಿ ಆಗಿದ್ದು ಈ ಪೈಕಿ 754 ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿ ಆಗಿದೆ. ಆದರೆ ಬೆಂಗಳೂರಿನಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆಯು ಇಳಿಕೆ ಕಾಣುತ್ತಿದೆ. ಫೆಬ್ರವರಿ 13ರಂದು ಬೆಂಗಳೂರಿನಲ್ಲಿ 1,059 ಕೋವಿಡ್‌ ಪ್ರಕರಣಗಳು ಪತ್ತೆ ಆಗಿದ್ದವು. ಫೆಬ್ರವರಿ 12ರಂದು 1,293 ಕೊರೊನಾ ಪ್ರಕರಣ ಬೆಂಗಳೂರಿನಲ್ಲಿ ದೃಢಪಟ್ಟಿತ್ತು. ಇನ್ನು ಫೆಬ್ರವರಿ 11ರಂದು ಬೆಂಗಳೂರಿನಲ್ಲಿ 1,725 ಕೋವಿಡ್‌ ಪ್ರರಕಣಗಳು ಪತ್ತೆ ಆಗಿದ್ದವು. ಕಳೆದ ನಾಲ್ಕು ದಿನಗಳಲ್ಲಿ ಬೆಂಗಳೂರಿನಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳ ಸಂಖ್ಯೆಯು ಇಳಿಕೆ ಕಾಣುತ್ತಿದೆ.

 ಬೆಂಗಳೂರಿನಲ್ಲಿ 2,089 ಮಂದಿ ಕೋವಿಡ್‌ನಿಂದ ಗುಣಮುಖ

ಬೆಂಗಳೂರಿನಲ್ಲಿ 2,089 ಮಂದಿ ಕೋವಿಡ್‌ನಿಂದ ಗುಣಮುಖ

ಬೆಂಗಳೂರಿನಲ್ಲಿ ಸೋಮವಾರ 754 ಮಂದಿಯಲ್ಲಿ ಕೋವಿಡ್‌ ಸೋಂಕು ಕಂಡು ಬಂದಿದ್ದರೂ ಕೂಡಾ 2,089 ಮಂದಿ ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ. ಐದು ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 31,215 ಸಕ್ರಿಯ ಕೋವಿಡ್‌ ಪ್ರಕರಣಗಳು ಇದೆ. ಇನ್ನು ದೈನಂದಿನ ಕೋವಿಡ್‌ ಪಾಸಿಟಿವಿಟಿ ದರವು ಶೇಕಡ 2.25 ಆಗಿದೆ. ಮರಣ ಪ್ರಮಾಣವು ಶೇಕಡ 1.59 ಆಗಿದೆ.

 ಬೇರೆ ಯಾವ ಜಿಲ್ಲೆಯಲ್ಲಿ ಅಧಿಕ

ಬೇರೆ ಯಾವ ಜಿಲ್ಲೆಯಲ್ಲಿ ಅಧಿಕ

ಬೆಂಗಳೂರಿನ ಬಳಿಕ ಶಿವಮೊಗ್ಗದಲ್ಲಿ ಅಧಿಕ ಕೋವಿಡ್‌ ಪ್ರಕರಣಗಳು ವರದಿ ಆಗಿದೆ. ಶಿವಮೊಗ್ಗದಲ್ಲಿ 91 ಮಂದಿಯಲ್ಲಿ ಸೋಮವಾರ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಇನ್ನು ಮೈಸೂರಿನಲ್ಲಿ 78, ಬೆಳಗಾವಿಯಲ್ಲಿ 63, ದಕ್ಷಿಣ ಕನ್ನಡದಲ್ಲಿ 55, ಬಳ್ಳಾರಿಯಲ್ಲಿ 50 ಕೋವಿಡ್‌ ಪ್ರಕರಣಗಳು ವರದಿ ಆಗಿದೆ. ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ದೈನಂದಿನ ಕೋವಿಡ್‌ ಪ್ರಕರಣ 1 ಸಾವಿರಕ್ಕೆ ಇಳಿಕೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ 2,372 ಹೊಸ ಕೋವಿಡ್‌ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ 1,059 ಹೊಸ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಶೇಕಡ 2.31 ಕೋವಿಡ್ ಪಾಸಿಟಿವಿಟಿ ದರ ಇದೆ. 5,395 ಮಂದಿ ಸೋಂಕಿನಿಂದ ಗುಣಮುಖವಾಗಿದ್ದು, 27 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

 ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಐಸಿಯು ಸೌಲಭ್ಯ

ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಐಸಿಯು ಸೌಲಭ್ಯ

ನಾರಾಯಣ ಹೆಲ್ತ್ ತಮ್ಮ ಕೋವಿಡ್ ಐಸಿಯು ಸೌಲಭ್ಯಗಳನ್ನು ವಿಸ್ತರಿಸಿರುವುದಾಗಿ ಘೋಷಣೆ ಮಾಡಿದೆ. ಪ್ರಮುಖ ಜಾಗತಿಕ ಹೂಡಿಕೆ ಬ್ಯಾಂಕ್ ಗೋಲ್ಡ್ಮನ್ ಸ್ಯಾಚ್ಸ್ ಸಹಯೋಗದೊಂದಿಗೆ ಮತ್ತು ಅದರ ಲಾಭರಹಿತ ಪಾಲುದಾರ ಯುನೈಟೆಡ್ ವೇ ಬೆಂಗಳೂರು, ಬೆಂಗಳೂರಿನ ತನ್ನ ಪ್ರಮುಖ ಘಟಕವಾದ ನಾರಾಯಣ ಹೆಲ್ತ್ ಸಿಟಿಯಲ್ಲಿ ಆಧುನಿಕ 100 ಹಾಸಿಗೆಗಳ ಕೋವಿಡ್ ಐಸಿಯು ಸೌಲಭ್ಯವನ್ನು ಪ್ರಾರಂಭ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

Recommended Video

IPL 2022 ಆಡಲಿರುವ ಕನ್ನಡಿಗ ಆಟಗಾರರು ಇವರೇ | Oneindia Kannada

English summary
Covid cases Dropped below 1k-mark in Bengaluru on February 14. Daily Covid cases dropped further In Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X