ಮಹಾಮಾರಿ ಕೋವಿಡ್-19 ಕರ್ತವ್ಯದಲ್ಲಿರುವ ಪೊಲೀಸರಿಗೆ ಪಿ.ಪಿ.ಇ ಕಿಟ್ ನೀಡಲು ಸೂಚನೆ

ಬೆಂಗಳೂರು, ಮೇ 18: ಕರ್ನಾಟಕ ರಾಜ್ಯಾದ್ಯಂತ ಮಹಾಮಾರಿ ಕೋವಿಡ್-19 ಕರ್ತವ್ಯದಲ್ಲಿರುವ ಪೊಲೀಸರಿಗೆ ಪಿ.ಪಿ.ಇ ಕಿಟ್ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

Recommended Video

      ಮಾಜಿ‌ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ಮನೆ ಬಳಿ ಯಾರೂ ಹೋಗುವಂತಿಲ್ಲ | HD Deve Gowda Birthday

      ಕರ್ತವ್ಯನಿರತರಾಗಿದ್ದ ವೇಳೆ ಜನಸಂಪರ್ಕಕ್ಕೆ ಬರುವ ಪೊಲೀಸರಿಗೆ ಕೋವಿಡ್-19 ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಕಂಟೇನ್ಮೆಂಟ್ ಝೋನ್ ಗಳಲ್ಲಿ, ಚೆಕ್ ಪೋಸ್ಟ್ ಮತ್ತು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಪಿ.ಪಿ.ಇ ಕಿಟ್ ಒದಗಿಸಲು ಸೂಚನೆ ನೀಡಲಾಗಿದೆ.

      ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳ ಆತ್ಮಸ್ಥೈರ್ಯ ಮತ್ತು ಮನೋಬಲ ಹೆಚ್ಚಿಸಲು, ಸಿಬ್ಬಂದಿಗಳ ಜತೆಗೆ ಹಿರಿಯ ಅಧಿಕಾರಿ ನಿರಂತರ ಸಂಪರ್ಕದಲ್ಲಿರಬೇಕು. ಕೊರೊನಾ ಬಂದೋಬಸ್ತ್ ಡ್ಯೂಟಿಯಲ್ಲಿ ಇರುವ ಸಿಬ್ಬಂದಿಯನ್ನ ಕೋವಿಡ್-19 ರಾಪಿಡ್ ಟೆಸ್ಟ್ ಒಳಪಡಿಸಬೇಕು. ಯಾವುದೇ ಸಿಬ್ಬಂದಿ ಸೋಂಕಿನಿಂದ ಮೃತಪಟ್ಟರೆ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು. ಎಲ್ಲಾ ಸಿಬ್ಬಂದಿಗೂ ವಾರದ ರಜೆ ಕಡ್ಡಾಯಗೊಳಿಸಿ, ವಿಶ್ರಾಂತಿ ಸಿಗುವ ನಿಟ್ಟಿನಲ್ಲಿ ಕರ್ತವ್ಯದ ಪಾಳಿ ಬದಲಿಸಿ. ಕರ್ತವ್ಯ ನಿರತ ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಎಂದು ವಲಯ ಐಜಿಪಿ, ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.

      Covid 19: Karnataka Police Staff To Get PPE Kit

      ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣಗಳು: ಕರ್ನಾಟಕದಲ್ಲಿ ಈವರೆಗೂ 1231 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈಗಾಗಲೇ 521 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 37 ಮಂದಿ ಮೃತಪಟ್ಟಿದ್ದಾರೆ. ಸದ್ಯ ಕರ್ನಾಟಕದಲ್ಲಿ 672 ಆಕ್ಟೀವ್ ಕೇಸ್ ಗಳಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+