ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಯಾವ ವಾರ್ಡ್‌ನಲ್ಲಿ ಎಷ್ಟು ಕೋವಿಡ್ ಪ್ರಕರಣ?

|
Google Oneindia Kannada News

ಬೆಂಗಳೂರು, ಜುಲೈ 17 : ಬೆಂಗಳೂರು ನಗರದಲ್ಲಿ ಕೋವಿಡ್ - 19 ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಶುಕ್ರವಾರವೂ ನಗರದಲ್ಲಿ 2,208 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 27,496ಕ್ಕೆ ಏರಿಕೆಯಾಗಿದೆ.

Recommended Video

BBMP commissioner Anil Kumar transferred | Oneindia Kannada

ಬಿಬಿಎಂಪಿ ವ್ಯಾಪ್ತಿಯ ಶಾಂತಲ ನಗರ ವಾರ್ಡ್‌ನಲ್ಲಿ ಸತತ ಎರಡನೇ ದಿನವೂ 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ ಸಹ ಈ ವಾರ್ಡ್‌ನಲ್ಲಿ 139 ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ.

ಚಿತ್ರಗಳು; ಕೋರಮಂಗಲದ ಕೋವಿಡ್ ಆರೈಕೆ ಕೇಂದ್ರಚಿತ್ರಗಳು; ಕೋರಮಂಗಲದ ಕೋವಿಡ್ ಆರೈಕೆ ಕೇಂದ್ರ

ಉಳಿದಂತೆ ಹೆಮ್ಮಿಗೆಪುರ ವಾರ್ಡ್‌ನಲ್ಲಿ 33, ಬಸವನಗುಡಿಯಲ್ಲಿ 32, ಎ.ದಾಸರಹಳ್ಳಿ ವಾರ್ಡ್‌ನಲ್ಲಿ 26, ರಾಜಾಜಿನಗರ, ಕೊನೇನಾ ಅಗ್ರಹಾರ ಮತ್ತು ಪುಲಿಕೇಶಿ ನಗರ ವಾರ್ಡ್‌ನಲ್ಲಿ 25 ಪ್ರಕರಣಗಳು ಕಳೆದ 24 ಗಂಟೆಯಲ್ಲಿ ದಾಖಲಾಗಿವೆ.

COVID 19 In Bengaluru Again More Than 100 Cases In Shanthala Nagar Ward

ಶುಕ್ರವಾರದ ತನಕ ಬೆಂಗಳೂರು ನಗರದಲ್ಲಿ 1.9 ಲಕ್ಷ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯ ನಗರದ ಪಾಸಿಟಿವ್ ಪ್ರಮಾಣ ಶೇ 14.43 ಆಗಿದೆ ಮತ್ತು ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 75 ಆಗಿದೆ.

ಕಂಟೈನ್ಮೆಂಟ್ ಝೋನ್ : ಬೆಂಗಳೂರು ನಗರದಲ್ಲಿನ ಒಟ್ಟು ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 7,636. ಇವುಗಳಲ್ಲಿ 6010 ಸಕ್ರಿಯ ಝೋನ್‌ಗಳಾಗಿವೆ. ಕರ್ನಾಟಕದಲ್ಲಿ ಶುಕ್ರವಾರ ದಾಖಲಾದ 3,693 ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲಿಯೇ ಹೆಚ್ಚು ಪ್ರಕರಣವಿದೆ.

ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್‌ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್‌

ಶುಕ್ರವಾರ ಕರ್ನಾಟಕದಲ್ಲಿ 115 ಜನರು ಮೃತಪಟ್ಟಿದ್ದಾರೆ. ಇವರಲ್ಲಿ 75 ಜನರು ಬೆಂಗಳೂರು ನಗರದಲ್ಲಿಯೇ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್ ಸೋಂಕಿತರು ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ.

Mum

English summary
In the Bengaluru city till date 1.9 lakh COVID tests have been conducted Shanthala Nagar ward in the BBMP limits reported 139 cases from past two days. City current positivity rate 14.43 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X