ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತಎಣಿಕೆ, ಬೆಂಗಳೂರು ಪೊಲೀಸರ ಪತ್ರಿಕಾ ಪ್ರಕಟಣೆ: ಬಾರ್ ಎಷ್ಟು ದಿನಬಂದ್ ?

|
Google Oneindia Kannada News

ಬೆಂಗಳೂರು, ಮೇ 19: ಸಾರ್ವತ್ರಿಕ ಚುನಾವಣೆಯ ಮತಎಣಿಕೆಯ ದಿನವಾದ ಗುರುವಾರ, ಮೇ 23ರಂದು, ಭಾರತೀಯ ದಂಡ ಸಂಹಿತೆಯ ಕಲಂ 144ನೇ ಅನ್ವಯ ಬೆಳಗ್ಗೆ ಆರು ಗಂಟೆಯಿಂದ ಮಧ್ಯರಾತ್ರಿ ಹನ್ನೆರಡು ಗಂಟೆಯವರೆಗೆ, ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆಯನ್ನು ವಿಧಿಸಲಾಗಿದೆ.

ನಗರದ ಪ್ಯಾಲೇಸ್ ರಸ್ತೆಯ ಮೌಂಟ್ ಕಾರ್ಮಲ್ ಮಹಿಳಾ ಪಿಯು ಕಾಲೇಜ್, ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಜಯನಗರ ನಾಲ್ಕನೇ 'ಟಿ'ಬ್ಲಾಕ್ ನಲ್ಲಿರುವ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ಮತಎಣಿಕೆ ನಡೆಯಲಿದೆ. ಪೊಲೀಸ್ ಪತ್ರಿಕಾ ಪ್ರಕಟಣೆಯ ಪ್ರಮುಖಾಂಶ ಇಂತಿದೆ:

ಶಾಸಕ ಮುನಿರತ್ನ ನಿವಾಸದ ಬಳಿ ಸ್ಫೋಟ, 1 ಸಾವುಶಾಸಕ ಮುನಿರತ್ನ ನಿವಾಸದ ಬಳಿ ಸ್ಫೋಟ, 1 ಸಾವು

> ಕಾನೂನುಭಂಗ ಮಾಡುವ ಉದ್ದೇಶದಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

Counting day on May 23rd: Bengaluru police Commissioner Press release

> ಶವಸಂಸ್ಕಾರ ಮತ್ತು ಮದುವೆ ಮೆರವಣಿಗೆ ಹೊರತು ಪಡಿಸಿ ಎಲ್ಲಾ ರೀತಿಯ ಮೆರವಣಿಗೆ, ಸಭೆಗೆ ಅವಕಾಶವಿಲ್ಲ.

> 23.05.2019 ಬೆಳಗ್ಗೆ 6ಗಂಟೆಯಿಂದ 24.05.2019 ಬೆಳಗ್ಗೆ 6ಗಂಟೆಯವರೆಗೆ ಎಲ್ಲಾ ರೀತಿಯ ಮದ್ಯಮಾರಾಟ ಬಂದ್.

> ದೈಹಿಕ ಹಿಂಸೆ ಮಾಡುವ ಎಲ್ಲಾ ರೀತಿಯ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.

ಮಂಡ್ಯ ಕುಡುಕರಿಂದ ದಾಖಲೆ, ಈ ಬಾರಿ ಅತಿ ಹೆಚ್ಚು ಮದ್ಯ ಮಾರಾಟ ಮಂಡ್ಯ ಕುಡುಕರಿಂದ ದಾಖಲೆ, ಈ ಬಾರಿ ಅತಿ ಹೆಚ್ಚು ಮದ್ಯ ಮಾರಾಟ

> ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಎಸೆಯುವುದನ್ನು ನಿಷೇಧಿಸಲಾಗಿದೆ.

> ವ್ಯಕ್ತಿಗಳನ್ನು ಪ್ರಚೋದಿಸುವ ಘೋಷಣೆಯನ್ನು ಕೂಗುವುದು, ಭಿತ್ತಿಪತ್ರವನ್ನು ಅಂಟಿಸುವುದನ್ನು ನಿಷೇಧಿಸಲಾಗಿದೆ.

English summary
Indian general election counting day on May 23rd: Bengaluru police Commissioner Press release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X