Lalbagh Flower Show: ಧರೆಗೆ ಇಳಿಯಲಿರುವ ಹೂವಿನ ಲೋಕ: ಎಂಟ್ರಿ ಫೀ ಎಷ್ಟು, ಯಾರಿಗೆಲ್ಲಾ ಉಚಿತ?
ಬೆಂಗಳೂರು, ಆಗಸ್ಟ್ 3: ನಾಳೆಯಿಂದ (ಆಗಸ್ಟ್ 4) ಸಸ್ಯ ಕಾಶಿ ಲಾಲ್‌ಬಾಗ್ ನಲ್ಲಿ ಹೂವಿನ ಲೋಕವೇ ಧರೆಗೆ ಇಳಿಯಲಿದೆ. ಬಗೆ ಬಗೆಯ ಹೂ ಪ್ರಿಯರಿಗೆ ಲಾಲ್‌ಬಾಗ್ ನಲ್ಲಿ ಹಬ್ಬ ಆರಂಭ ಆಗಲಿದೆ. ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ 214 ನೇ ಫ್ಲವರ್ ಶೋ ಆರಂಭ ಆಗಲಿದೆ.
ಭಾರಿ ನಿರೀಕ್ಷೆ ಇರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಸಂಜೆ ಆರು ಗಂಟೆಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನಲೆ ಫ್ಲವರ್ ಶೋಗೆ ಸಕಲ ರೀತಿಯಲ್ಲಿಯೂ ತೋಟಗಾರಿಕೆ ಇಲಾಖೆ ಸಜ್ಜು ಮಾಡಿಕೊಂಡಿದೆ.

ಬಣ್ಣ...ಬಣ್ಣದ ಹೂಗಳಿಂದ ತುಂಬಿ ಹೋಗಿರುವ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಈ ಬಾರಿ ಕೆಂಗಲ್ ಹನುಮಂತಯ್ಯ ಜೊತೆಗೆ ಹದಿನೆಂಟು ಅಡಿಯ, 7.2ಲಕ್ಷ ಹೂವಿನಿಂದ ತಯಾರಾಗುವ ವಿಧಾನಸೌಧ ಥೀಮ್ ನಿಂದ ಕಂಗೊಳಿಸಲಿದೆ. ಈ ಥೀಮ್ ಜನರ ಮನಸ್ಸು ಗೆಲ್ಲುವಲ್ಲಿ ಡೌಟ್ ಇಲ್ಲ , ಫ್ಲವರ್ ಶೋ ಗೆ ಕೊಲ್ಕತ್ತ, ಕೇರಳ, ತಮಿಳುನಾಡು, ಆಂಧ್ರ ಇತರ ರಾಜ್ಯಗಳಿಂದ ಹೂಗಳು ಬರುತ್ತಿದ್ದು ಒಟ್ಟು 15 ರಿಂದ 17 ಲಕ್ಷ ಹೂಗಳನ್ನ ಬಳಸಿಕೊಳ್ಳಲು ತಯಾರಿ ಮಾಡಿಕೊಳ್ಳಲಾಗಿದೆ.
ಸುಂದರ ಹೂಗಳ ಗುಚ್ಚಗಳಿಂದ ಲಾಲ್‌ಬಾಗ್ ಶೃಂಗಾರಗೊಂಡಿದ್ದು, ನಾಳೆ ಸಂಜೆ 4 ಗಂಟೆಗೆ ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.. ನಾಳೆಯಿಂದ ಅಧಿಕೃತ ಚಾಲನೆ ಸಿಗುವ ಫಲ ಪುಷ್ಪ ಪ್ರದರ್ಶನ ಆಗಸ್ಟ್ 15ರ ವರೆಗೆ ಒಟ್ಟು 10 ದಿನಗಳ ಕಾಲ ಹೂವು ಪ್ರಿಯರಿಗಾಗಿ ನಡೆಯಲಿದೆ. ಈ ಬಾರಿ ಫ್ಲವರ್ ಶೋಗೆ 2 ಕೋಟಿ ಅಧಿಕ ವೆಚ್ಚವಾಗುವ ಸಾಧ್ಯತೆಯಿದೆ. ಅಲ್ಲದೇ ಸುಮಾರು 10 ರಿಂದ 12 ಲಕ್ಷದಷ್ಟು ಜನರು ಶೋಗೆ ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ಬಾರಿ ಶೋನಲ್ಲಿ ಮಕ್ಕಳಿಗೆ, ಮಹಿಳೆಯರಿಗೂ ಸಹ ಕೆಲ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ. ಒಟ್ಟು ನಾಲ್ಕೂ ಗೇಟ್ ಗಳಲ್ಲಿ ಜನರಿಗೆ ಎಂಟ್ರಿ ನೀಡಲಾಗುತ್ತೆ. ಭದ್ರತೆ ದೃಷ್ಟಿಯಿಂದ 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ. 300-400 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, 12 ದಿನ ಕಾಲ ಹೆಲ್ತ್ ಕ್ಯಾಂಪ್ ವ್ಯವಸ್ಥೆ ಕೂಡಾ ಮಾಡಲಾಗಿದೆ.
| ದರ | ವೀಕೆಂಡ್ ನಲ್ಲಿ Rs. 80, ವಾರದ ದಿನದಂದು Rs. 70 |
| ದರ | ಮಕ್ಕಳಿಗೆ Rs. 30 |
| ದರ | ಶಾಲಾ ಸಮವಸ್ತ್ರದಲ್ಲಿ ಬಂದರೆ, ವಿದ್ಯಾರ್ಥಿಗಳಿಗೆ ಉಚಿತ |
| ಸಮಯ | ಬೆಳಗ್ಗೆ ಏಳರಿಂದ ರಾತ್ರಿ ಏಳರವರೆಗೆ |
| ಫ್ಲವರ್ ಶೋ ದಿನಾಂಕ | 04.08.2023 to 15.08.2023 |
ಇನ್ನೂ ಬಹುತೇಕ ಸಿಟಿಯ ಹಾಗೂ ಬೇರೆ ಬೇರೆ ಕಡೆಯಿಂದ ಬರುವ ಜನ ಫ್ಲವರ್ ಶೋ ಕಣ್ತುಂಬಿ ಕೊಳ್ಳಲು ಬರುವ ಸಾಧ್ಯತೆಯಿದೆ. ಈ ಹಿನ್ನಲೆ ಪಾರ್ಕಿಂಗ್ ಸಮಸ್ಯೆ ಆಗುವ ಸಾಧ್ಯತೆ ಬಹುತೇಕ ಹೆಚ್ಚೇ ಇರುತ್ತದೆ. ಹೀಗಾಗಿ ಟ್ರಾಫಿಕ್ ದೃಷ್ಟಿಯಿಂದ ಮೆಟ್ರೋ ಹಾಗೂ BMTC ಬಸ್ ನಲ್ಲಿ ಆದಷ್ಟು ಫ್ಲವರ್ ಶೋಗೆ ಬರುವಂತೆ ತೋಟಗಾರಿಕೆ ಇಲಾಖೆ ಸಾರ್ವಜನಿಕರ ಬಳಿ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)












Click it and Unblock the Notifications