ಜೂ.24ಕ್ಕೆ'ನಮ್ಮ ಬೆಂಗಳೂರು ನನ್ನ ಕೊಡುಗೆ' ಚಾಲನೆ

ಬೆಂಗಳೂರು, ಜೂ.20:ಬಿಬಿಎಂಪಿಯ 'ನಮ್ಮ ಬೆಂಗಳೂರು ನನ್ನ ಕೊಡುಗೆ' ಯೋಜನೆಗೆ ಜೂ.24 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಮೇಯರ್‌ ಬಿ.ಎಸ್‌ ಸತ್ಯನಾರಾಯಣ ತಿಳಿಸಿದ್ದಾರೆ.

'ನಮ್ಮ ಬೆಂಗಳೂರು ನನ್ನ ಕೊಡುಗೆ' ಕಾರ್ಯಕ್ರಮ ಸಂಬಂಧಿಸಿದಂತೆ ತಯಾರಿಸಲಾದ ಧ್ಯೇಯ ಗೀತೆ ಹಾಗೂ ಸಾಕ್ಷ್ಯಚಿತ್ರ, ವಿವರವುಳ್ಳ ಸಿಡಿಯನ್ನು ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪಾಲಿಕೆ ಶಾಲೆ, ಆಸ್ಪತ್ರೆ, ಕೆರೆಗಳ ನಿರ್ವ‌ಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ 250ರಿಂದ 300 ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಯೋಜನೆ ಇದಾಗಿದೆ.

Namma Bangalore Nanna Koduge

ಜೂ.24ರಂದು ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಕಾರ್ಯ‌ಕ್ರಮದಲ್ಲಿ ಖಾಸಗಿ ಸಂಸ್ಥೆಗಳು ಒಡಂಬಡಿಕೆ ಪರಸ್ಪರ ಸಹಿ ಹಾಕಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಒಪ್ಪಂದ ಪತ್ರಗಳನ್ನು ಖಾಸಗಿ ಸಂಸ್ಥೆಗಳಿಗೆ ವಿತರಣೆ ಮಾಡಲಿದ್ದಾರೆ.

ಬ್ಯಾಂಕ್‌ಗಳು ಭಾಗಿ:
ಈ ಯೋಜನೆಯಲ್ಲಿ ರಾಷ್ಟ್ರಿಕೃತ ಬ್ಯಾಂಕ್‌ಗಳು ಸಹ ಭಾಗವಹಿಸುತ್ತಿವೆ. ಕೆನರಾ ಬ್ಯಾಂಕ್‌ ಒಂದು ಕೆರೆ ಮತ್ತು ಎರಡು ಉದ್ಯಾನಗಳನ್ನು ನಿರ್ವ‌ಹಣೆ, ವಿಜಯ ಬ್ಯಾಂಕ್‌ ಶಾಲೆಯೊಂದನ್ನು ದತ್ತು ಪಡೆಯಲು ಮುಂದೆ ಬಂದಿದೆ. ರೋಟರಿ ಸಂಸ್ಥೆ ಸಹ ಶಾಲೆಯನ್ನು ದತ್ತು ಸ್ವೀಕರಿಸಲು ಆಸಕ್ತಿ ತೋರಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+