ಕೊರೊನಾ ಎಫೆಕ್ಟ್‌ ಇನ್ಮುಂದೆ ಆನ್‌ಲೈನ್‌ನಲ್ಲೇ ದೇವರ ದರ್ಶನ

ಬೆಂಗಳೂರು, ಮಾರ್ಚ್ 18: ಮಹಾಮಾರಿ ಕೊರೊನಾ ಭೀತಿ ದೇವರನ್ನೂ ಬಿಟ್ಟಿಲ್ಲ, ಇನ್ನುಮುಂದೆ ದೇವರ ದರ್ಶನ ಆನ್‌ಲೈನ್‌ನಲ್ಲೇ ಸಿಗಲಿದೆ.

Recommended Video

      Yediyurappa to give fresh directives about covid 19 | Yeddiyurappa | Karnataka | Oneindia kannada

      ಹೌದು ದೇವಸ್ಥಾನಗಳಿಗೆ ನಿತ್ಯ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಕೊರೊನಾ ಭಯವಿರುವುದರಿಂದ ಹಲವು ದೇವಸ್ಥಾನಗಳು ಬಾಗಿಲನ್ನು ಮುಚ್ಚಿ ಆನ್‌ಲೈನ್ ತೆರೆದಿವೆ. ಭಕ್ತರು ದೇವರ ಪೂಜೆಯನ್ನು ಆನ್‌ಲೈನ್‌ನಲ್ಲಿಯೇ ವೀಕ್ಷಿಸಿ ಎಂದು ಸಲಹೆ ನೀಡುತ್ತಿದ್ದಾರೆ.

      ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಮಾ.18ರಿಂದ ಮುಂದಿನ ಸೂಚನೆವರೆಗೆ ಭಕ್ತರಿಗೆ ಪ್ರವೇಶ ರದ್ದು ಮಾಡಿದೆ. ದೇವಾಲಯದಲ್ಲಿ ಭಗವಂತನಿಗೆ ನಿತ್ಯ ಪೂಜೆ, ಸೇವೆಗಳು ಎಂದಿನಂತೆ ನಡೆಯಲಿದೆ. ಭಕ್ತರು ಮತ್ತು ಲೋಕಕಲ್ಯಾಣಾರ್ಥ ಭಜನೆ ಮತ್ತು ಕೀರ್ತನೆಗಳನ್ನು ಮುಂದುವರೆಸಲಾಗುತ್ತದೆ.

      Not Temple God Is Available In Online Only

      ಎಲ್ಲರೂ ಆನ್‌ಲೈನ್ ಮೂಲಕ ಇಸ್ಕಾನ್ ವಿವಿಧ ಆನ್‌ಲೈನ್ ವೇದಿಕೆಗಳಿಂದ ನಿತ್ಯ ದರ್ಶನ ಪಡೆಯಬಹುದಾಗಿದೆ. ಈಗಾಗಲೇ ಗವಿ ಗಂಗಾಧರೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ವಿನಿಯೋಗ ನಿಲ್ಲಿಸಲಾಗಿದೆ. ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಅನಿರ್ದಿಷ್ಟಾವಾಧಿ ಬಾಗಿಲನ್ನು ಮುಚ್ಚಲಾಗಿದೆ.

      ಕುಕ್ಕ ಸುಬ್ರಹ್ಮಣ್ಯದಲ್ಲಿ ಕೂಡ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮಂತ್ರಾಲಯದಲ್ಲಿ ಪ್ರಸಾದವನ್ನು ನಿಷೇಧಿಸಿದ್ದು, ಮದುವೆ ಸಮಾರಂಭಗಳಲ್ಲಿ ನೂರಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ ಎಂದು ಸೂಚನೆ ನೀಡಿದೆ.

      ಇದೇ ರೀತಿ ಬೆಂಗಳೂರಿನ ದೇವಾಲಯಗಳು ಕೂಡ ನಡೆದುಕೊಳ್ಳುತ್ತಿದ್ದು, ದೇವ ಆನ್‌ಲೈನ್ ದರ್ಶನ ಮಾಡಿಸಲು ಮುಂದಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+