ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶುಭಸುದ್ದಿ: ಬೆಂಗಳೂರಿನಲ್ಲಿ ಗಣನೀಯವಾಗಿ ಏರುತ್ತಿರುವ ಗುಣಮುಖರ ಸಂಖ್ಯೆ

|
Google Oneindia Kannada News

ಬೆಂಗಳೂರು, ಜುಲೈ 10: ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ, ಗುಣಮುಖರಾಗುತ್ತಿರುವವರ ಗ್ರಾಫ್ ಏರುತ್ತಿರುವುದೂ ಸಮಾಧಾನ ಪಡುವಂತಹ ಅಂಶವಾಗಿದೆ.

Recommended Video

Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

ಕಳೆದ ಒಂದು ವಾರದ ಅಂಕಿ ಅಂಶವನ್ನು ನೋಡುವುದಾದರೆ, ದಿನವೊಂದಕ್ಕೆ ಬಿಡುಗಡೆಯಾಗುತ್ತಿರುವವರ ಸಂಖ್ಯೆ, ಇನ್ನೂರರ ಆಸುಪಾಸಿನಿಂದ, ಆರು ನೂರರ ಆಸುಪಾಸಿಗೆ ಬಂದು ನಿಂತಿರುವುದು ನಿಟ್ಟುಸಿರು ಬಿಡುವಂತಹ ವಿಚಾರ.

ಸಿಎಂ ಯಡಿಯೂರಪ್ಪ ಹೇಳಿದ 'ಕೊರೊನಾ ಕಂಟ್ರೋಲ್ ತಪ್ಪಿರುವ ಜಿಲ್ಲೆಗಳು'ಇವೇನಾ?ಸಿಎಂ ಯಡಿಯೂರಪ್ಪ ಹೇಳಿದ 'ಕೊರೊನಾ ಕಂಟ್ರೋಲ್ ತಪ್ಪಿರುವ ಜಿಲ್ಲೆಗಳು'ಇವೇನಾ?

ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಕಾರಣ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, "ದಿನವೊಂದಕ್ಕೆ ಗಣನೀಯ ಪ್ರಮಾಣದಲ್ಲಿ ಟೆಸ್ಟ್ ನಡೆಸುವುದನ್ನು ಹೆಚ್ಚಿಸಿರುವುದರಿಂದ, ಸ್ವಾಭಾವಿಕವಾಗಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣಿಸುತ್ತದೆ" ಎಂದು ಹೇಳಿದ್ದರು.

ಕೊವಿಡ್ 19 ರೋಗಿಗಳ ಸಾವಿಗೆ ವೈರಸ್ ಕಾರಣವಲ್ಲ: ಅಧ್ಯಯನ ವರದಿಕೊವಿಡ್ 19 ರೋಗಿಗಳ ಸಾವಿಗೆ ವೈರಸ್ ಕಾರಣವಲ್ಲ: ಅಧ್ಯಯನ ವರದಿ

ಸಾರ್ವಜನಿಕ ವಲಯದಲ್ಲಿ ಹತ್ತು ಹಲವು ಟೀಕೆಗಳು ಎದುರಾದ ನಂತರ, ಯಡಿಯೂರಪ್ಪ ನೇತೃತ್ವದ ಸರಕಾರ, ಹಲವು ಮಹತ್ವದ ನಿರ್ಧಾರಗಳನ್ನು ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಮಾಡಿದೆ. ನಗರದಲ್ಲಿ ಗಣನೀಯವಾಗಿ ಏರುತ್ತಿರುವ ಗುಣಮುಖರಾಗುತ್ತಿರುವ ಅಂಕಿ ಅಂಶ (ಜುಲೈ 3-9) ಹೀಗಿದೆ:

ಜುಲೈ ಮೂರು

ಜುಲೈ ಮೂರು

ಹೊಸ ಕೇಸ್: 994
ಒಟ್ಟಾರೆ ಕೇಸ್: 7,173
ಇಂದು ಬಿಡುಗಡೆಯಾದವರು: 197
ಒಟ್ಟಾರೆ ಬಿಡುಗಡೆಯಾದವರು: 770
ಇಂದಿನ ಸಕ್ರಿಯ ಪ್ರಕರಣ: 6,297
ಒಟ್ಟಾರೆ ಸಾವು: 105

ಜುಲೈ ನಾಲ್ಕು

ಜುಲೈ ನಾಲ್ಕು

ಹೊಸ ಕೇಸ್: 1,172
ಒಟ್ಟಾರೆ ಕೇಸ್: 8,345
ಇಂದು ಬಿಡುಗಡೆಯಾದವರು: 195
ಒಟ್ಟಾರೆ ಬಿಡುಗಡೆಯಾದವರು: 965
ಇಂದಿನ ಸಕ್ರಿಯ ಪ್ರಕರಣ: 7,250
ಒಟ್ಟಾರೆ ಸಾವು: 129

ಜುಲೈ ಐದು

ಜುಲೈ ಐದು

ಹೊಸ ಕೇಸ್: 1,235
ಒಟ್ಟಾರೆ ಕೇಸ್: 9,580
ಇಂದು ಬಿಡುಗಡೆಯಾದವರು: 302
ಒಟ್ಟಾರೆ ಬಿಡುಗಡೆಯಾದವರು: 1,267
ಇಂದಿನ ಸಕ್ರಿಯ ಪ್ರಕರಣ: 8,167
ಒಟ್ಟಾರೆ ಸಾವು: 145

ಜುಲೈ ಆರು

ಜುಲೈ ಆರು

ಹೊಸ ಕೇಸ್: 981
ಒಟ್ಟಾರೆ ಕೇಸ್:10,561
ಇಂದು ಬಿಡುಗಡೆಯಾದವರು: 278
ಒಟ್ಟಾರೆ ಬಿಡುಗಡೆಯಾದವರು:1,545
ಇಂದಿನ ಸಕ್ರಿಯ ಪ್ರಕರಣ: 8,860
ಒಟ್ಟಾರೆ ಸಾವು: 155

ಜುಲೈ ಏಳು

ಜುಲೈ ಏಳು

ಹೊಸ ಕೇಸ್: 800
ಒಟ್ಟಾರೆ ಕೇಸ್: 11,361
ಇಂದು ಬಿಡುಗಡೆಯಾದವರು: 265
ಒಟ್ಟಾರೆ ಬಿಡುಗಡೆಯಾದವರು: 1,810
ಇಂದಿನ ಸಕ್ರಿಯ ಪ್ರಕರಣ: 9,395
ಒಟ್ಟಾರೆ ಸಾವು: 155

ಜುಲೈ ಎಂಟು

ಜುಲೈ ಎಂಟು

ಹೊಸ ಕೇಸ್: 1,148
ಒಟ್ಟಾರೆ ಕೇಸ್: 12,509
ಇಂದು ಬಿಡುಗಡೆಯಾದವರು: 418
ಒಟ್ಟಾರೆ ಬಿಡುಗಡೆಯಾದವರು: 2,228
ಇಂದಿನ ಸಕ್ರಿಯ ಪ್ರಕರಣ: 10,103
ಒಟ್ಟಾರೆ ಸಾವು: 177

ಜುಲೈ ಒಂಬತ್ತು

ಜುಲೈ ಒಂಬತ್ತು

ಹೊಸ ಕೇಸ್: 1,373
ಒಟ್ಟಾರೆ ಕೇಸ್: 13,882
ಇಂದು ಬಿಡುಗಡೆಯಾದವರು: 606
ಒಟ್ಟಾರೆ ಬಿಡುಗಡೆಯಾದವರು: 2,384
ಇಂದಿನ ಸಕ್ರಿಯ ಪ್ರಕರಣ: 10,870
ಒಟ್ಟಾರೆ ಸಾವು: 177

English summary
Satisfying Growing Rate Of Coronavirus Discharge Infected Patients In Bengaluru From July 3rd to July 9th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X