ಕೊರೊನಾ ವೈರಸ್ ವೇಷಧಾರಿಯಾದ ಬೆಂಗಳೂರು ಟ್ರಾಫಿಕ್ ಪೊಲೀಸ್
ಬೆಂಗಳೂರು, ಮಾರ್ಚ್ 31: ಜನರನ್ನು ಹೊರಬರದಂತೇ ತಡೆಯಲು ಹರಸಾಹಸ ಪಡುತ್ತಿರುವ ಬೆಂಗಳೂರು ಪೊಲೀಸರು, ವಿನೂತನ ಪ್ರಯತ್ನದ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ನಗರದ ಎಂ.ಜಿ.ರಸ್ತೆ ವೃತ್ತದಲ್ಲಿ ಸಂಚಾರೀ ಪೊಲೀಸರು ಕೊರೊನಾ ವೈರಸ್ ವೇಷಧರಿಸಿ, ಜನರಿಗೆ ಮನೆಯಲ್ಲೆ ಉಳಿದುಕೊಳ್ಳುವಂತೆ ವಿಶಿಷ್ಟ ರೀತಿಯಲ್ಲಿ ಮನವೊಲಿಕೆಗೆ ಮುಂದಾದರು.
"ಜನರಿಗೆ ಎಷ್ಟು ಹೇಳಿದರೂ ಅರ್ಥವಾಗುತ್ತಿಲ್ಲ, ಬೈಕ್ , ಕಾರ್ ನಲ್ಲಿ ರಸ್ತೆಗಿಳಿಯುತ್ತಾರೆ. ಕೊರೊನಾ ವೈರಸ್ ಎಲ್ಲಿ ಇರುತ್ತದೆ ಎನ್ನುವುದು ಗೊತ್ತಾಗುವುದಿಲ್ಲ" ಎಂದು ಪೊಲೀಸ್ ಅಧಿಕಾರಿ ಅನೌನ್ಸ್ ಮಾಡುತ್ತಿದ್ದಾಗ ಒಬ್ಬ ಯುವಕ ಹೆಲ್ಮೆಟ್ ಹಾಕಿಕೊಳ್ಳದೇ ಬರುತ್ತಾನೆ.

ಆಗ, ಬೈಕ್ ನಿಲ್ಲಿಸಿ, ಕೊರೊನಾ ಹೋಲುವ ಹೆಲ್ಮೆಟ್ ಹಾಕಿದ ಪೊಲೀಸರು ಆತನಿಗೆ ಆ ಹೆಲ್ಮೆಟ್ ಹಾಕಿ, ಇನ್ನೊಬ್ಬ ಪೊಲೀಸ್, ಯುವಕನ ಬೈಕ್ ಹಿಂದೆ ಕೂರುತ್ತಾನೆ. ಆಗ, ಪೊಲೀಸರು ಗಂಟೆ, ಶಂಖ ಊದುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ಈ ರೀತಿಯ ಪ್ರಯತ್ನವನ್ನು ಚೆನ್ನೈ ಪೊಲೀಸರೂ ಮಾಡಿದ್ದರು. ಆದರೆ, ಅವರ ಕೈಯಲ್ಲಿ ಶಂಖ, ಗಂಟೆ ಇರಲಿಲ್ಲ. ಬೆಂಗಳೂರು ಪೊಲೀಸರ ಈ ಪ್ರಯತ್ನದ ಬಗ್ಗೆ ಉತ್ತಮ ಮಾತು ಕೇಳಿಬರುತ್ತಿದೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ಇಬ್ಬರಿಗೆ ಮತ್ತು ಗೌರಿಬಿದನೂರಿನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗಲಿದೆ.












Click it and Unblock the Notifications